ಬೆಂಗಳೂರಿಗೆ ಪ್ರವೇಶಿಸಿದ ನೂತನ ಟೊಯೊಟಾ ಇನ್ನೋವಾ ಕ್ರೈಸ್ಟಾ

By Nagaraja

ಆಲ್ ನ್ಯೂ ಇನ್ನೋವಾ ಕ್ರೈಸ್ಟಾ ನಮ್ಮ ಬೆಂಗಳೂರು ಮಾರುಕಟ್ಟಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಶುಕ್ರವಾರ ನಡೆದ ಸಮಾರಂಭದಲ್ಲಿ ಹೊಸ ಇನ್ನೋವಾ ಕ್ರೈಸ್ಟಾ ಕಾರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

ದೇಶದ ನಂ.1 ಬಹು ಬಳಕೆಯ ವಾಹನ ಎನಿಸಿಕೊಂಡಿರುವ ಇನ್ನೋವಾ ಎರಡನೇ ತಲೆಮಾರಿ ಆವೃತ್ತಿಯಲ್ಲೂ ಬೊಂಬಾಟ್ ಮಾರಾಟ ಗಿಟ್ಟಿಸಿಕೊಳ್ಳುವ ಇರಾದೆಯಲ್ಲಿದೆ. ಇದರಂತೆ ಸ್ಪರ್ಧಾತ್ಮಕ ಬೆಲೆಯ ಜೊತೆಗೆ ಗರಿಷ್ಠ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ



ಟೊಯೊಟಾ ಇನ್ನೋವಾ ಕ್ರೈಸ್ಟಾ (ಎಕ್ಸ್ ಶೋ ರೂಂ ಬೆಂಗಳೂರು)
ಜಿ ಸೆವೆನ್ ಸೀಟರ್: 14,17,741 ರು.
ಜಿ ಎಂಟು ಸೀಟು: 14,22,241 ರು.

ಜಿಎಕ್ಸ್ ಸೆವೆನ್ ಸೀಟರ್: 15,06,997 ರು.
ಜಿಎಕ್ಸ್ ಎಂಟು ಸೀಟು: 15,11,497 ರು.
ಜಿಎಕ್ಸ್ ಆಟೋಮ್ಯಾಟಿಕ್ ಸೆವೆನ್ ಸೀಟರ್: 16,36,997 ರು.
ಜಿಎಕ್ಸ್ ಆಟೋಮ್ಯಾಟಿಕ್ ಎಂಟು ಸೀಟು: 16,36,997 ರು.

ವಿಎಕ್ಸ್ ಸೆವೆನ್ ಸೀಟರ್: 16,41,497 ರು.
ವಿಎಕ್ಸ್ ಎಂಟು ಸೀಟು: 17,57,897 ರು.

ಝಡ್ ಎಕ್ಸ್ ಸೆವೆನ್ ಸೀಟರ್: 19,47,930 ರು.
ಝಡ್ ಎಕ್ಸ್ ಆಟೋಮ್ಯಾಟಿಕ್ ಸೆವೆನ್ ಸೀಟರ್: 21,12,311 ರು.


ಎಂಜಿನ್
2.4 ಲೀಟರ್ ಮತ್ತು 2.8 ಲೀಟರ್ ಡೀಸೆಲ್ ಎಂಜಿನ್ ಗಳ ಆಯ್ಕೆಗಳಲ್ಲಿ ಲಭ್ಯವಿರುವ ಇನ್ನೋವಾ ಆರು ಸ್ಪೀಡ್ ಆಟೋಮ್ಯಾಟಿಕ್ ಮತ್ತು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಗಳನ್ನು ಹೊಂದಿದೆ. ಚಾಲಕರಿಗೆ ಇಕೊ ಮತ್ತು ಪವರ್ ಗಳೆಂಬ ಎರಡು ಚಾಲನಾ ವಿಧಗಳನ್ನು ಆಯ್ಕೆ ಮಾಡಬಹುದಾಗಿದೆ. ಇವೆರಡು 2.4 ಲೀಟರ್ ಮ್ಯಾನುವಲ್ ಮತ್ತು 2.8 ಲೀಟರ್ ಆಟೋಮ್ಯಾಟಿಕ್ ಮಾದರಿಗಳಲ್ಲೂ ಇರಲಿದೆ.

ಟಾಪ್ ಎಂಡ್ ಇನ್ನೋವಾ ಕಾರಿನಲ್ಲಿ ಸ್ಟ್ಯಾರ್ಟ್ ಸ್ಟಾಪ್ ಬಟನ್, ಸ್ಮಾರ್ಟ್ ಎಂಟ್ರಿ ಸಿಸ್ಟಂ, ಏಳು ಏರ್ ಬ್ಯಾಗ್, ಎಬಿಎಸ್, ಇಬಿಡಿ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಏಳು ಇಂಚುಗಳ ಆಡಿಯೋ ಸಿಸ್ಟಂ ಜೊತೆ ನೇವಿಗೇಷನ್, ಎಲ್ ಇಡಿ ಹೆಡ್ ಲ್ಯಾಂಪ್ ಮತ್ತು 17 ಇಂಚುಗಳ ಅಲಾಯ್ ವೀಲ್ ಗಳಿರಲಿದೆ.

ಹಳೆಯ ಇನ್ನೋವಾಗಿಂತಲೂ 150 ಎಂಎಂ ಉದ್ದ, 70 ಎಂಎಂ ಅಗಲ ಮತ್ತು 35 ಎಂಎಂ ಹೆಚ್ಚು ಎತ್ತರವನ್ನು ಎರಡನೇ ತಲೆಮಾರಿನ ಇನ್ನೋವಾ ಪಡೆದಿದೆ. ಇದು ಒಟ್ಟಾರೆ 4735 ಎಂಎಂ ಉದ್ದ, 1830 ಎಂಎಂ ಅಗಲ, 1795 ಎಂಎಂ ಎತ್ತರ ಮತ್ತು 2750 ಎಂಎಂ ವೀಲ್ ಬೇಸ್ ಪಡೆದಿದೆ.

ಆಧುನಿಕತೆಗೆ ತಕ್ಕಂತೆ ಮುಂಭಾಗದಲ್ಲಿ ಷಡ್ಭುಜೀಯಾಕೃತಿಯ ಫ್ರಂಟ್ ಗ್ರಿಲ್ ಮೇಲೆ ಟೊಯೊಟಾ ಲಾಂಛನವು ಲಗತ್ತಿಸಲಾಗಿದೆ. ಇದಕ್ಕೆ ಲಂಬವಾಗಿ ಕ್ರೋಮ್ ರೇಖೆಗಳನ್ನು ಕೊಡಲಾಗಿದೆ. ಕಾರಿನ ಹಿಂಭಾಗದ ವಿನ್ಯಾಸದಲ್ಲೂ ಇನ್ನೋವಾ ಕ್ರೈಸ್ಟಾ ಹೊಸತನವನ್ನು ಕಾಪಾಡಿಕೊಂಡಿದೆ. ಹಿಂದುಗಡೆ ವಿಂಡ್ ಶೀಲ್ಡ್ ಕೆಳಗಡೆ ತಿರುಗುಬಾಣದಂತಹ ಟೈಲ್ ಲೈಟ್ ಗಳು, ರಿಯರ್ ಸ್ಪಾಯ್ಲರ್ ಮತ್ತು ಎಕ್ಸಾಸ್ಟ್ ಕೊಳವೆಗಳನ್ನು ಕಾಣಬಹುದಾಗಿದೆ.


ಕಾರಿನೊಳಗೆ ಆರಾಮದಾಯಕ ಮತ್ತು ಅನುಕೂಲಕರ ಪ್ರಯಾಣಕ್ಕೆ ಆದ್ಯತೆ ಕೊಡಲಾಗಿದೆ. ಮೂರು ಆಯಾಮದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಿಂದ ಆರಂಭಿಸಿ 4 ಸ್ಪೋಕ್ ಲೆಥರ್ ಹೋದಿಕೆ ಮತ್ತು ವುಡ್ ಸ್ಟೀರಿಂಗ್ ವೀಲ್, ಕೆಂಗಂದು ಕಂದು ಮರದ ಡ್ಯಾಶ್ ಬೋರ್ಡ್ ಇಲ್ಲಿ ಕಂಡುಬರಲಿದೆ. ಹಿಂಬದಿಯ ಸೀಟಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ. ಗ್ರಾಹಕರ ಪ್ರತಿಕ್ರಿಯೆ ಪಡೆದು ಇದರತ್ತ ಇನ್ನೋವಾ ಕೆಲಸ ಮಾಡಿರುವುದು ಪ್ರಶಂಸನೀಯ. ಹಳೆಯ ಇನ್ನೋವಾ ಹೊಂದಿರುವವರಿಗೆ ಇದು ಭಾಸವಾಗಲಿದೆ.

ಸುರಕ್ಷತೆ
ಕ್ಲಚ್ ಸ್ಟ್ಯಾರ್ಟ್ ಸಿಸ್ಟಂ,
7 ಎಸ್ ಆರ್ ಎಸ್ ಏರ್ ಬ್ಯಾಗ್: ಚಾಲಕ, ಮುಂಭಾಗದ ಪ್ರಯಾಣಿಕ, ಚಾಲಕ ಮೊಣಕಾಲು, ಮುಂಭಾಗ, ಕರ್ಟೈನ್ ಮತ್ತು ಶೀಲ್ಡ್ ಏರ್ ಬ್ಯಾಗ್,
ಎಬಿಎಸ್ ಜೊತೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯುಷನ್ ಮತ್ತು ಬ್ರೇಕ್ ಅಸಿಸ್ಟ್,
ವಾಹನ ಸ್ಥಿರತೆ ನಿಯಂತ್ರಣ ಮತ್ತು ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಕಂಟ್ರೋಲ್,
3 ಪಾಯಿಂಟ್ ಇಎಲ್ ಆರ್ ಫ್ರಂಟ್ ಸೀಟ್ ಬೆಲ್ಟ್ ಮತ್ತು ಹಿಂಬದಿಯ ಎಲ್ಲ ಪ್ರಯಾಣಿಕರಿಗೂ ಸೀಟ್ ಬೆಲ್ಟ್

Most Read Articles

Kannada
English summary
Toyota Innova Crysta Launched In Bangalore, Prices Start At Rs. 14.17 Lakhs
Story first published: Friday, May 13, 2016, 18:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X