2016ನೇ ಸಾಲಿನಲ್ಲಿ ಬಿಡುಗಡೆಯಾಗಲಿರುವ ಎಎಂಟಿ ಕಾರುಗಳು

Written By:

ಭಾರತದ ಆಟೋ ಕ್ಷೇತ್ರ ಬಹುಬೇಗನೇ ನೂತನ ತಂತ್ರಜ್ಞಾನಗಳಿಗೆ ಒಲವು ತೋರುತ್ತಿದೆ. ಸಮಕಾಲೀನ ಮಾರುಕಟ್ಟೆಯಲ್ಲಿ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಅಥವಾ ಸೆಮಿ ಆಟೋಮ್ಯಾಟಿಕ್ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆ ಕಂಡುಬಂದಿದೆ.

ಸವಾರರಿಗೆ ಸುಲಭ ಚಾಲನೆಯ ಅನುಭವ ನೀಡುತ್ತಿರುವುದೇ ಎಎಂಟಿ ಯಶಸ್ಸಿಗೆ ಕಾರಣವಾಗಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿರುವ ಎಎಂಟಿ ಕಾರುಗಳ ಸಂಖ್ಯೆಯಲ್ಲೂ ವರ್ಧನೆಯುಂಟಾಗಿದೆ. ಪ್ರಸ್ತುತ ಲೇಖನದಲ್ಲಿ 2016ನೇ ಸಾಲಿನಲ್ಲಿ ಬಿಡುಗಡೆಯಾಗಲಿರುವ ಐದು ನೆಚ್ಚಿನ ಕಾರುಗಳ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಮಾಡಲಿದ್ದೇವೆ.

01. ರೆನೊ ಕ್ವಿಡ್ ಎಎಂಟಿ

01. ರೆನೊ ಕ್ವಿಡ್ ಎಎಂಟಿ

ನಾವು ಈಗಾಗಲೇ ವರದಿ ಮಾಡಿರುವಂತೆಯೇ ಜನಪ್ರಿಯ ಆಲ್ಟೊಗೆ ನೇರ ಎದುರಾಳಿಯಾಗಿರುವ ರೆನೊ ಕ್ವಿಡ್ ಎಎಂಟಿ ಬಿಡುಗಡೆಯಾಗುವುದು ಬಹುತೇಕ ಖಚಿತವೆನಿಸಿದೆ. ಮ್ಯಾನುವಲ್ ವೆರಿಯಂಟ್‌ಗೆ 75,000ಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಿಸಿರುವ ಕ್ವಿಡ್ ತನ್ನ ಎಸ್‌ಯುವಿ ಶೈಲಿಯ ಸಾನಿಧ್ಯದಿಂದಲೇ ಗಮನ ಸೆಳೆದಿದೆ. ಅಲ್ಲದೆ ಹೆಚ್ಚು ಶಕ್ತಿಶಾಲಿ 1.0 ಲೀಟರ್ ಎಂಜಿನ್ ಆಳವಡಿಸುವ ಇರಾದೆಯನ್ನು ಹೊಂದಿದೆ. ಇವೆಲ್ಲಕ್ಕೂ ಫೆಬ್ರವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದ ವರೆಗೆ ಕಾಯಬೇಕಾಗಿದೆ.

02. ಟಾಟಾ ಝಿಕಾ ಎಎಂಟಿ

02. ಟಾಟಾ ಝಿಕಾ ಎಎಂಟಿ

2016 ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ಟಾಟಾ ಝಿಕಾ ಎಎಂಟಿ ವರ್ಷನ್ ಅನಾವರಣಗೊಳ್ಳಲಿದೆ ಎಂಬುದರಲ್ಲಿ ಯಾವುದೇ ಸಂಶಯವೇ ಬೇಡ. ಆದರೂ ಝಿಕಾದ ಪೆಟ್ರೋಲ್ ಅಥವಾ ಡೀಸೆಲ್ ಮಾದರಿಯಲ್ಲಿ ಎಎಂಟಿ ಗೇರ್ ಬಾಕ್ಸ್ ಕಂಡುಬರಲಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಫುಟ್ಬಾಲ್ ದಿಗ್ಗಜ ಲಿಯೊನೆಲ್ ಮೆಸ್ಸಿ ಅವರನ್ನು ಪ್ರಮುಖ ಪ್ರಚಾರ ರಾಯಭಾರಿಯನ್ನಾಗಿ ನೇಮಕಗೊಳಿಸಿದ ಬಳಿಕ ಭರ್ಜರಿ ರಿ ಎಂಟ್ರಿ ಕೊಡುವ ಇರಾದೆಯಲ್ಲಿರುವ ಟಾಟಾ ಸಂಸ್ಥೆಗೆ ಝಿಕಾ ಆಶ್ರಯವಾಗಲಿದೆ.

03. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಎಎಂಟಿ/ಸ್ವಿಫ್ಟ್

03. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಎಎಂಟಿ/ಸ್ವಿಫ್ಟ್

ದೇಶಕ್ಕೆ ಎಎಂಟಿ ತಂತ್ರಜ್ಞಾನವನ್ನು ಪರಿಚಯಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಮಾರುತಿ ಪಾತ್ರವಾಗಿದೆ. ಪ್ರಸ್ತುತ ಸೆಲೆರಿಯೊ, ಆಲ್ಟೊ ಕೆ10 ಯಶಸ್ಸಿನ ಬಳಿಕ ಇದೇ ಯಶಸ್ಸನ್ನು ಸ್ವಿಫ್ಟ್ ಹಾಗೂ ಸ್ವಿಫ್ಟ್ ಡಿಜೈರ್ ಮಾದರಿಯಲ್ಲೂ ಇದೇ ಯಶಸ್ಸನ್ನು ಮುಂದುವರಿಸುವ ಇರಾದೆ ಹೊಂದಿದೆ. ಡಿಜೈರ್ ಟಾಪ್ ಎಂಡ್ ಡೀಸೆಲ್ ಝಡ್‌ಡಿಐ ವೆರಿಯಂಟ್ ಎಎಂಟಿ ಗೇರ್ ಬಾಕ್ಸ್ ಪಡೆದುಕೊಳ್ಳುವ ಸಾಧ್ಯತೆಯಿದೆ. ಇದು ಈಗಿರುವ ಮಾದರಿಗಿಂತಲೂ 35ರಿಂದ 40,000 ರು.ಗಳಷ್ಟು ಹೆಚ್ಚು ದುಬಾರಿಯೆನಿಸಲಿದೆ.

04. ದಟ್ಸನ್ ರೆಡಿ ಗೊ

04. ದಟ್ಸನ್ ರೆಡಿ ಗೊ

ನಿಸ್ಸಾನ್ ಬಜೆಟ್ ಬ್ರಾಂಡ್ ಆಗಿರುವ ದಟ್ಸನ್ ಈಗಾಗಲೇ ಎರಡು ಮಾದರಿಗಳನ್ನು ದೇಶಕ್ಕೆ ಪರಿಚಯಿಸಿದೆ. ಈಗ ಭಾರತದಲ್ಲಿರುವ ತನ್ನ ಶ್ರೇಣಿಯ ಕಾರುಗಳನ್ನು ವಿಸ್ತರಿಸುವ ಯೋಜನೆಯಲ್ಲಿರುವ ಜಪಾನ್ ಮೂಲದ ಈ ಸಂಸ್ಥೆಯು ಇನ್ನಷ್ಟೇ ಬಿಡುಗಡೆಯಾಗಿರುವ ದಟ್ಸನ್ ರೆಡಿ ಗೊ ಸೆಮಿ ಆಟೋಮ್ಯಾಟಿಕ್ ಕಾರನ್ನು ಸಹ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ನಿಮ್ಮ ಮಾಹಿತಿಗಾಗಿ, ದಟ್ಸನ್ ಗೊದ ಸಿಎಂಎಫ್-ಎ ತಳಹದಿಯನ್ನು ದಟ್ಸನ್ ರೆಡಿ ಗೊ ಹಂಚಿಕೊಂಡಿದೆ.

05. ಮಹೀಂದ್ರ ಕ್ವಾಂಟೊ ಫೇಸ್ ಲಿಫ್ಟ್

05. ಮಹೀಂದ್ರ ಕ್ವಾಂಟೊ ಫೇಸ್ ಲಿಫ್ಟ್

ಮಹೀಂದ್ರ ಕ್ವಾಂಟೊ ಎಎಂಟಿ ಮಾದರಿಯು ಇತ್ತೀಚೆಗಷ್ಟೇ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿತ್ತು. ಅಲ್ಲದೆ 2016 ವರ್ಷಾರಂಭದಲ್ಲೇ ಕ್ವಾಂಟೊ ಫೇಸ್ ಲಿಫ್ಟ್ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಎಎಂಟಿ ಗೇರ್ ಬಾಕ್ಸ್ ಸಹ ಪಡೆಯಲಿದೆ.

English summary
Upcoming AMT cars in 2016
Story first published: Friday, January 1, 2016, 16:28 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark