ಅತ್ಯಂತ ಶಕ್ತಿಶಾಲಿ ಫೋಕ್ಸ್‌ವ್ಯಾಗನ್ ಗಾಲ್ಫ್ ಕಾರು ತವರೂರಿಗೆ ಪ್ರವೇಶ

Written By:

ತವರೂರಾದ ಜರ್ಮನಿಯಲ್ಲಿ ಅತ್ಯಂತ ಶಕ್ತಿಶಾಲಿ ಫೋಕ್ಸ್‌ವ್ಯಾಗನ್ ಗಾಲ್ಫ್ ಕಾರು ಎಂಟ್ರಿ ಕೊಟ್ಟಿದೆ. ಅದುವೇ ಫೋಕ್ಸ್‌ವ್ಯಾಗನ್ ಗಾಲ್ಫ್ ಆರ್. ಈ ಕ್ರಿಸ್ಮಸ್ ಹಾಗೂ ಹೊಸ ವರ್ಷದ ವೇಳೆಯಲ್ಲಿ ಹೊಸ ಗಾಲ್ಫ್ ಆರ್ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಳ್ಳಲಿದೆ.

To Follow DriveSpark On Facebook, Click The Like Button
ಅತ್ಯಂತ ಶಕ್ತಿಶಾಲಿ ಫೋಕ್ಸ್‌ವ್ಯಾಗನ್ ಗಾಲ್ಫ್ ಆರ್ ಪ್ರವೇಶ

ಅತ್ಯಂತ ಶಕ್ತಿಶಾಲಿ ಗಾಲ್ಫ್ ಹ್ಯಾಚ್ ಬ್ಯಾಕ್ ಕಾರು ಇದಾಗಿದೆ. ಇದೀಗಷ್ಟೇ ಪರಿಷ್ಕೃತ ಜಿಟಿಐ ಪ್ರದರ್ಶನಗೊಂಡಿತ್ತು. ಇದರ ಬೆನ್ನಲ್ಲೇ ಗಾಲ್ಫ್ ಪ್ರವೇಶವಾಗಿದೆ.

ಅತ್ಯಂತ ಶಕ್ತಿಶಾಲಿ ಫೋಕ್ಸ್‌ವ್ಯಾಗನ್ ಗಾಲ್ಫ್ ಆರ್ ಪ್ರವೇಶ

ನೂತನ ಫೋಕ್ಸ್ ವ್ಯಾಗನ್ ಗಾಲ್ಫ್ ಆರ್ ಕಾರಿನಲ್ಲಿ ಎಲ್ ಇಡಿ ಲೈಟ್ಸ್ ಸೇವೆಯಿರಲಿದೆ. ಇನ್ನು ಹೊಸತಾದ ರಿಯರ್ ಲೈಟ್ ಗಳನ್ನು ಆಡಿಯನ್ನೇ ಮೀರಿಸುವಂತಿದೆ.

ಅತ್ಯಂತ ಶಕ್ತಿಶಾಲಿ ಫೋಕ್ಸ್‌ವ್ಯಾಗನ್ ಗಾಲ್ಫ್ ಆರ್ ಪ್ರವೇಶ

ಕಾರಿನಡಿಯಲ್ಲಿರುವ ಅತ್ಯಂತ ಶಕ್ತಿಶಾಲಿ 2.0 ಲೀಟರ್ ಟರ್ಬೊ ಎಂಜಿನ್ 400 ಎನ್ ಎಂ ತಿರುಗುಬಲದಲ್ಲಿ 306 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಮ್ಯಾನುವಲ್ ಹಾಗೂ ಏಳು ಸ್ಪೀಡ್ ಆಟೋಮ್ಯಾಟಿಕ್ ಡಿಎಸ್ ಜಿ ಗೇರ್ ಬಾಕ್ಸ್ ಇದರಲ್ಲಿದೆ.

ಅತ್ಯಂತ ಶಕ್ತಿಶಾಲಿ ಫೋಕ್ಸ್‌ವ್ಯಾಗನ್ ಗಾಲ್ಫ್ ಆರ್ ಪ್ರವೇಶ

ನೂತನ ಫೋಕ್ಸ್ ವ್ಯಾಗನ್ ಗಾಲ್ಫ್ ಆರು ಕೇವಲ 4.6 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಲಿದೆ. ಇದು ಹಿಂದಿನ ಮಾದರಿಗಿಂತಲೂ 0.3 ಸಕೆಂಡುಗಳಷ್ಟು ವೇಗವಾಗಿರಲಿದೆ.

ಅತ್ಯಂತ ಶಕ್ತಿಶಾಲಿ ಫೋಕ್ಸ್‌ವ್ಯಾಗನ್ ಗಾಲ್ಫ್ ಆರ್ ಪ್ರವೇಶ

ಕಾರಿನೊಳಗೆ ಆಕ್ಟಿವ್ ಇನ್ಪೋ ಡಿಸ್ ಪ್ಲೇ ಜೊತೆಗೆ 12.3 ಹೈ ಡೆಫಿನೇಷನ್ ಪರದೆಗಳಿರಲಿದೆ. ಇನ್ನು ಗರಿಷ್ಠ ತಂತ್ರಜ್ಞಾನಕ್ಕೆ ಆದ್ಯತೆ ಕೊಡಲಾಗಿದೆ.

ಅತ್ಯಂತ ಶಕ್ತಿಶಾಲಿ ಫೋಕ್ಸ್‌ವ್ಯಾಗನ್ ಗಾಲ್ಫ್ ಆರ್ ಪ್ರವೇಶ

ನೂತನ ಗಾಲ್ಫ್ ಆರ್ ಟ್ರಾಫಿಕ್ ಜಾಮ್ ಅಸಿಸ್ಟ್, ಎಮರ್ಜನ್ಸಿ ಅಸಿಸ್ಟ್ ಲೇನ್ ಅಸಿಸ್ಟ್ ಪ್ಲಸ್ ಎಸಿಸಿ, ಆಕ್ಟಿವ್ ಲೇನ್ ಕೀಪಿಂಗ್ ಇತ್ಯಾದಿ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಅತ್ಯಂತ ಶಕ್ತಿಶಾಲಿ ಫೋಕ್ಸ್‌ವ್ಯಾಗನ್ ಗಾಲ್ಫ್ ಆರ್ ಪ್ರವೇಶ

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಇತ್ಯಾದಿ ಸೌಲಭ್ಯಗಳು ಕಂಡುಬರಲಿದೆ.

ಅತ್ಯಂತ ಶಕ್ತಿಶಾಲಿ ಫೋಕ್ಸ್‌ವ್ಯಾಗನ್ ಗಾಲ್ಫ್ ಆರ್ ಪ್ರವೇಶ

ಅಂದ ಹಾಗೆ ಫೋಕ್ಸ್ ವ್ಯಾಗನ್ ಗಾಲ್ಫ್ ಆರ್ ಆಟೋಮ್ಯಾಟಿಕ್ ಹಾಗೂ ಮ್ಯಾನುವಲ್ ಆವೃತ್ತಿಗಳು ಜರ್ಮನಿಯಲ್ಲಿ 30.20 ಹಾಗೂ 28.78 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

English summary
2017 Volkswagen Golf R Revealed: The Most Powerful Production Golf Of All Time
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark