ಚಾಲಕ ರಹಿತ ಕಾರುಗಳ ಪರಿಕಲ್ಪನೆಯನ್ನು ಬಿಚ್ಚಿಡಲಿದೆ ಆಡಿ..!!

Written By:

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ಫ್ರಾಂಕ್‌ಫರ್ಟ್ ಆಟೋ ಮೇಳಕ್ಕಾಗಿ ದಿನಗಣನೆ ಆರಂಭವಾಗಿದ್ದು, ಈ ಹಿನ್ನೆಲೆ ಆಡಿ ಸಂಸ್ಥೆಯು ಚಾಲಕ ರಹಿತ ಕಾರುಗಳ ಪರಿಕಲ್ಪನೆಯನ್ನು ಬಹಿರಂಗಗೊಳಿಸಲು ಸಜ್ಜುಗೊಳ್ಳುತ್ತಿದೆ.

To Follow DriveSpark On Facebook, Click The Like Button
ಚಾಲಕ ರಹಿತ ಕಾರುಗಳ ಪರಿಕಲ್ಪನೆಯನ್ನು ಬಿಚ್ಚಿಡಲಿದೆ ಆಡಿ..!!

ಇದಕ್ಕೂ ಮುನ್ನ ತನ್ನ ಹೊಸ ಪರಿಕಲ್ಪನೆ ಕುರಿತು ಟೀಸರ್ ಒಂದನ್ನು ಬಿಡುಗಡೆ ಮಾಡಿರುವ ಆಡಿ ಸಂಸ್ಥೆಯು, ಆಟೋ ಉದ್ಯಮವನ್ನೇ ಬೆರಗುಗಣ್ಣಿನಿಂದ ನೋಡುವಂತೆ ಮಾಡಿರುವುದು ಸುಳ್ಳಲ್ಲ. ಯಾಕೇಂದ್ರೆ ಆಡಿ ಚಾಲಕ ರಹಿತ ಪರಿಕಲ್ಪನೆ ಅಂತದೊಂದು ವಿಶೇಷತೆ ಹೊಂದಿದೆ.

ಚಾಲಕ ರಹಿತ ಕಾರುಗಳ ಪರಿಕಲ್ಪನೆಯನ್ನು ಬಿಚ್ಚಿಡಲಿದೆ ಆಡಿ..!!

ಇದಕ್ಕೆ ಕಾರಣ ಆಡಿ ಸಂಸ್ಥೆಯು ತನ್ನದೇ ಆದ ಉತ್ಪನ್ನಗಳಾದ ಪ್ರಮುಖ 4 ಕೂಪೆ ಮಾದರಿಗಳು ಮತ್ತು ಎ8 ಸೂಪರ್ ಕಾರು ಮಾದರಿಗಳ ವೈಶಿಷ್ಟ್ಯತೆಗಗಳನ್ನು ಚಾಲಕ ರಹಿತ ಕಾರುಗಳಲ್ಲಿ ಅಳವಡಿಸುವ ಯೋಚನೆಯಲ್ಲಿದ್ದು, ಮುಂದಿನ ವಾರ ಆರಂಭಗೊಳ್ಳಲಿರುವ ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಹೊಸ ಪರಿಕ್ಪನೆ ಅನಾವರಣಗೊಳ್ಳಲಿದೆ.

ಚಾಲಕ ರಹಿತ ಕಾರುಗಳ ಪರಿಕಲ್ಪನೆಯನ್ನು ಬಿಚ್ಚಿಡಲಿದೆ ಆಡಿ..!!

ಇನ್ನು ಆಡಿ ಪರಿಚಯಿಸುತ್ತಿರುವ ಚಾಲಕ ರಹಿತ ಕಾರುಗಳು ಐದನೇ ಹಂತದ ಮಾದರಿಗಳಾಗಿದ್ದು, ಪ್ರತಿ ಚಕ್ರದ ಮೇಲೆ ಪ್ರತ್ಯೇಕ್ ಮೋಟಾರ್ ಜೋಡಿಸಿರುವ ಹಿನ್ನೆಲೆ ಇವುಗಳು ಚಾಲಕನಿಲ್ಲದೆಯೇ ಸರಾಗವಾಗಿ ಚಲಿಸಬಲ್ಲವು.

Recommended Video
Tata Tiago XTA AMT Launched In India | In Kannada - DriveSpark ಕನ್ನಡ
ಚಾಲಕ ರಹಿತ ಕಾರುಗಳ ಪರಿಕಲ್ಪನೆಯನ್ನು ಬಿಚ್ಚಿಡಲಿದೆ ಆಡಿ..!!

ಸದ್ಯ ಆಟೋ ಮೊಬೈಲ್ ಜಗತ್ತಿನಲ್ಲಿ ಎಲ್ಲಾ ಪ್ರಮುಖ ಆಟೋ ಉತ್ಪಾದಕರು ಚಾಲಕ ರಹಿತ ಕಾರುಗಳ ಉತ್ಪಾದನೆಗೆ ವಿಶೇಷ ಒತ್ತು ನೀಡುತ್ತಿದ್ದು, ಆಡಿ ಕೂಡಾ ಸುಧಾರಿತ ಮಾದರಿಯ ಕಾರೊಂದನ್ನು ಪರಿಚಯಿಸುವ ಯೋಜನೆಯಲ್ಲಿದೆ.

ಚಾಲಕ ರಹಿತ ಕಾರುಗಳ ಪರಿಕಲ್ಪನೆಯನ್ನು ಬಿಚ್ಚಿಡಲಿದೆ ಆಡಿ..!!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಕೇವಲ ಚಾಲಕ ರಹಿತ ಕಾರು ಮಾದರಿ ಅಷ್ಟೇ ಅಲ್ಲದೇ ಆರ್8 ಜಿಟಿ ಸೂಪರ್ ಕಾರು ಮತ್ತು ಆರ್‌ಎಸ್4 ಅವಂತಾ ಸೂಪರ್ ಕಾರು ಮಾದರಿಯನ್ನು ಪ್ರದರ್ಶನ ಕೈಗೊಳ್ಳಲಿರುವ ಆಡಿ, ಮುಂದಿನ ವರ್ಷ ಹೊಸ ಉತ್ಪನ್ನಗಳನ್ನು ಬಿಡುಗಡೆಗೊಳಿಸಲಿದೆ.

ಚಾಲಕ ರಹಿತ ಕಾರುಗಳ ಪರಿಕಲ್ಪನೆಯನ್ನು ಬಿಚ್ಚಿಡಲಿದೆ ಆಡಿ..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

2030ರ ವೇಳೆಗೆ ಚಾಲಕ ರಹಿತ ಕಾರುಗಳಿಗೆ ವಿಶೇಷ ಬೇಡಿಕೆ ಸೃಷ್ಠಿಯಾಗಲಿದ್ದು, ಈ ಹಿನ್ನೆಲೆ ಭವಿಷ್ಯ ಯೋಜನೆಗಳನ್ನು ಇದೀಗ ಆಡಿ ಪ್ರಸ್ತುತ ಪಡಿಸಲು ಸಜ್ಜುಗೊಳ್ಳುತ್ತಿರುವುದು ಆಟೋ ಉದ್ಯಮದಲ್ಲಿ ಭಾರೀ ಸಂಚಲನ ಸೃಷ್ಠಿಸಿದೆ.

English summary
Read in Kannada about Audi Teases Autonomous Concept For Frankfurt Motor Show.
Story first published: Saturday, September 9, 2017, 18:10 [IST]
Please Wait while comments are loading...

Latest Photos