ಇಂಧನ ಉಳಿತಾಯ ಮಾಡಬಲ್ಲ ಹೊಸ ತಂತ್ರಜ್ಞಾನ ಪರಿಚಯಿಸುತ್ತಿದೆ ಆಡಿ

Written By:

ಬೆಳೆಯುತ್ತಿರುವ ಬೃಹತ್ ನಗರಗಳಲ್ಲಿ ಇದೀಗ ಟ್ರಾಫಿಕ್ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದ್ದು, ಇಂಧನ ಉಳಿತಾಯಕ್ಕಾಗಿ ಆಡಿ ಸಂಸ್ಥೆಯು ಹೊಸದೊಂದು ತಂತ್ರಜ್ಞಾನ ಪರಿಚಯಿಸಲು ಮುಂದಾಗಿದೆ.

ಜರ್ಮನ್ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆ ಆಡಿ'ಯು ಇಂಧನ ಉಳಿತಾಯ ಮಾಡಬಲ್ಲ ವ್ಯಾಲಿಯೋಸ್ ಮೈಕ್ರೋ ಹ್ರೈಬಿಡ್ ತಂತ್ರಜ್ಞಾನ ಪರಿಚಯಿಸುತ್ತಿದ್ದು, ಟ್ರಾಫಿಕ್ ಸಂದರ್ಭಗಳಲ್ಲಿ ಅನಗತ್ಯ ಇಂಧನ ವ್ಯರ್ಥವನ್ನು ತಡೆಗಟ್ಟಲಿದೆ.

ವ್ಯಾಲಿಯೋಸ್ ಮೈಕ್ರೋ ಹ್ರೈಬಿಡ್ ತಂತ್ರಜ್ಞಾನ ಬಳಕೆಯಿಂದ ಕಾರುಗಳಲ್ಲಿ ಸ್ವಯಂಚಾಲಿತ ಸ್ಟಾರ್ಟ್ ಆ್ಯಂಡ್ ಸ್ಟಾಪ್ ವ್ಯವಸ್ಥೆ ಇರಲಿದ್ದು, ಟ್ರಾಫಿಕ್‌ ಸಂದರ್ಭದಲ್ಲಿ ಇದು ಸಹಾಯಕ್ಕೆ ಬರಲಿದೆ.

ಪ್ಯಾರಿಸ್ ಮೂಲದ ವ್ಯಾಲಿಯೋಸ್ ಸಂಸ್ಥೆಯು ಈ ಹೊಸ ಮಾದರಿಯ ಮೈಕ್ರೋ ಹ್ರೈಬಿಡ್ ತಂತ್ರಜ್ಞಾನ ಪರಿಚಯಿಸುತ್ತಿದ್ದು, ಆಡಿ ಸಂಸ್ಥೆಯ ಆರ್‌ಎಸ್5 ಕಾರಿನಲ್ಲಿ ಮೊದಲ ಬಾರಿಗೆ ಅಳವಡಿಸಲಾಗುತ್ತಿದೆ.

ಒಂದು ವೇಳೆ ವ್ಯಾಲಿಯೋಸ್ ಮೈಕ್ರೋ ಹ್ರೈಬಿಡ್ ತಂತ್ರಜ್ಞಾನ ಬಳಕೆ ಮಾಡಿದ್ದಲ್ಲಿ ಶೇ.15ರಷ್ಟು ಇಂಧನ ವ್ಯರ್ಥ ತಪ್ಪಲಿದ್ದು, ಮೈಲೇಜ್ ಪ್ರಮಾಣ ಕೂಡಾ ಹೆಚ್ಚಲಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮೊದಲ ಬಾರಿಗೆ ವ್ಯಾಲಿಯೋಸ್ ಮೈಕ್ರೋ ಹ್ರೈಬಿಡ್ ತಂತ್ರಜ್ಞಾನ ಪರಿಚಯಿಸುತ್ತಿರುವ ಆಡಿ ಹೊಸ ಯೋಜನೆ ಮಹತ್ವದ ಹೆಜ್ಜೆಯಾಗಿದ್ದು, ಮುಂಬರುವ ದಿನಗಳಲ್ಲಿ ಇದು ಇನ್ನಷ್ಟು ಜನಪ್ರಿಯತೆ ಪಡೆಯುವ ಮೂಲಕ ಆಟೋ ಉದ್ಯಮದಲ್ಲಿ ಹೊಸ ಕ್ರಾಂತಿಗೆ ಪ್ರೇರಣೆಯಾಗಲಿದೆ.

English summary
Read in Kannada about Audi To Use Valeo’s Micro-Hybrid Technology.
Story first published: Friday, June 30, 2017, 15:23 [IST]
Please Wait while comments are loading...

Latest Photos