ಇನ್ಮುಂದೆ ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಜಿಪಿಎಸ್ ಅಳವಡಿಕೆ ಕಡ್ಡಾಯ

Written By:

ಇತ್ತೀಚೆಗೆ ಖಾಸಗಿ ಮಾಲಿಕತ್ವದ ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಪೂರ್ಣ ಪ್ರಮಾಣದ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗುತ್ತಿದ್ದು, ಈ ಹಿನ್ನೆಲೆ ಟ್ಯಾಕ್ಸಿ, ಆಟೋ ಸೇರಿದಂತೆ ಪ್ರತಿಯೊಂದು ಪ್ರಯಾಣಿಕ ವಾಹನಗಳಲ್ಲಿ ಜಿಪಿಎಸ್ ಅಳವಡಿಕೆ ಕಡ್ಡಾಯ ಕುರಿತಂತೆ ಚರ್ಚೆ ನಡೆಯುತ್ತಿದೆ.

ಇನ್ಮುಂದೆ ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಜಿಪಿಎಸ್ ಅಳವಡಿಕೆ ಕಡ್ಡಾಯ

ಈಗಾಗಲೇ ಈ ಬಗ್ಗೆ ಮಹತ್ವದ ಸುಳಿವು ನೀಡಿರುವ ಮಹಾರಾಷ್ಟ್ರ ಗೃಹ ಇಲಾಖೆಯು ಸದ್ಯದಲ್ಲೇ ಟ್ಯಾಕ್ಸಿ ಮತ್ತು ಆಟೋಗಳಲ್ಲಿ ಕಡ್ಡಾಯ ಜಿಪಿಎಸ್ ಅಳವಡಿಕೆ ಕುರಿತಂತೆ ಹೊಸ ನಿಯಮಾವಳಿಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ.

ಇನ್ಮುಂದೆ ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಜಿಪಿಎಸ್ ಅಳವಡಿಕೆ ಕಡ್ಡಾಯ

ಈ ಕುರಿತು ಮಹಾರಾಷ್ಟ್ರ ಮುಂಗಾರು ಅಧಿವೇಶನದಲ್ಲಿ ಚರ್ಚೆ ನಡೆದಿದ್ದು, ಮಹಿಳಾ ಪ್ರಯಾಣಿಕರ ರಕ್ಷಣೆ ಕುರಿತಂತೆ ಪ್ರತಿಪಕ್ಷಗಳ ಪ್ರಶ್ನೆಗೆ ಸರ್ಕಾರ ಖಡಕ್ ಉತ್ತರ ನೀಡಿದೆ.

ಇನ್ಮುಂದೆ ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಜಿಪಿಎಸ್ ಅಳವಡಿಕೆ ಕಡ್ಡಾಯ

ಸದ್ಯ ಟ್ಯಾಕ್ಸಿ ಸೇವೆಗಳನ್ನು ಒದಗಿಸುತ್ತಿರುವ ಕಂಪನಿಗಳು ತಮ್ಮ ಅಧೀನದಲ್ಲಿರುವ ವಾಹನಗಳಲ್ಲಿ ಜಿಪಿಎಸ್ ಅಳವಡಿಕೆ ಮಾಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಹೊಸ ನಿಯಮಗಳನ್ನು ಜಾರಿ ತಂದು ಪ್ರತಿಯೊಂದು ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಕಡ್ಡಾಯ ಜಿಪಿಎಸ್ ಅಳವಡಿಕೆ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಇನ್ಮುಂದೆ ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಜಿಪಿಎಸ್ ಅಳವಡಿಕೆ ಕಡ್ಡಾಯ

ಜಿಪಿಎಸ್ ಕಡ್ಡಾಯ ಅಳವಡಿಕೆ ಬಗ್ಗೆ ಮಾತನಾಡಿರುವ ಮಹಾರಾಷ್ಟ್ರ ಗೃಹ ಸಚಿವ ರಂಜೀತ್ ಪಾಟೀಲ್, ಮಹಿಳೆಯರ ಸುರಕ್ಷತೆಗೆ ರಾಜ್ಯ ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ಸಿದ್ಧವಿದ್ದು, ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಕಡ್ಡಾಯ ಜಿಪಿಎಸ್ ಅಳವಡಿಕೆಗೆ ಸದ್ಯದಲ್ಲೇ ಚಾಲನೆ ಸಿಗಲಿದೆ ಎಂದಿದ್ದಾರೆ.

ಇನ್ಮುಂದೆ ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಜಿಪಿಎಸ್ ಅಳವಡಿಕೆ ಕಡ್ಡಾಯ

ಒಂದು ವೇಳೆ ಜಿಪಿಎಸ್ ಕಡ್ಡಾಯವಾದಲ್ಲಿ ಪ್ರಯಾಣಿಕರಿಗೆ ಸೇವೆ ನೀಡುವ ಪ್ರತಿಯೊಂದು ವಾಹನವು ಹೊಸ ನಿಯಮವನ್ನು ಅಳವಡಿಸಿಕೊಳ್ಳಬೇಕಲ್ಲದೆ ಮಹಿಳಾ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತಿದೆ.

ಇನ್ಮುಂದೆ ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಜಿಪಿಎಸ್ ಅಳವಡಿಕೆ ಕಡ್ಡಾಯ

ಹೀಗಾಗಿ ಮಹಾರಾಷ್ಟ್ರದಲ್ಲಿ ಈ ಯೋಜನೆ ಸಫಲಗೊಂಡಲ್ಲಿ ಇತರೆ ಮೆಟ್ರೋ ನಗರಗಳಲ್ಲೂ ಜಾರಿ ಸಾಧ್ಯತೆಯಿದ್ದು, ಮಹಿಳೆಯರಿಗೆ ಪೂರ್ಣ ಪ್ರಮಾಣದ ಸುರಕ್ಷತೆ ಕೂಡಾ ಸಿಗಲಿದೆ.

ಇನ್ಮುಂದೆ ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಜಿಪಿಎಸ್ ಅಳವಡಿಕೆ ಕಡ್ಡಾಯ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಓಲಾ ಮತ್ತು ಉಬರ್ ಸೇರಿದಂತೆ ಕೆಲವು ಕ್ಯಾಬ್ ಸೇವೆಗಳನ್ನು ಒದಗಿಸುತ್ತಿರುವ ಟ್ಯಾಕ್ಸಿಗಳಲ್ಲಿ ಜಿಪಿಎಸ್ ಅಳವಡಿಕೆ ಜಾರಿಯಲ್ಲಿದ್ದು, ಇದು ಅನಧಿಕೃತವಾಗಿ ಪ್ರಯಾಣಿಕ ಸೇವೆಗಳನ್ನು ನೀಡುತ್ತಿರುವ ಟ್ಯಾಕ್ಸಿ ಮತ್ತು ಆಟೋಗಳಲ್ಲು ಜಿಪಿಎಸ್ ಕಡ್ಡಾಯ ಮಾಡುತ್ತಿರುವುದು ಒಳ್ಳೆಯ ವಿಚಾರ.

English summary
Read in kannada about Auto and Call Taxi's Must Install GPS.
Story first published: Monday, July 31, 2017, 20:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark