ಡೈಮ್ಲರ್ ಇಂಡಿಯಾ ಕಮರ್ಷಿಯಲ್ ವೆಹಿಕಲ್ಸ್(ಡಿಐಸಿವಿ) ಕಂಪನಿಯ 'ಭಾರತ್‌ಬೆಂಝ್' ಟ್ರಕ್ ಕಂಪನಿಯು ಭಾರತದಲ್ಲಿ ತನ್ನ ಐದನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.
ಸೆಪ್ಟೆಂಬರ್ 2012ರಿಂದ, ಭಾರತ್‌ಬೆಂಝ್ ಭಾರತದಲ್ಲಿ ಸಾಕಷ್ಟು ಕಷ್ಟ ಪರಿಸ್ಥಿತಿಗಳ ಹೊರತಾಗಿಯೂ ಇಲ್ಲಿಯವರೆಗೆ ಮುಂದುವರೆದುಕೊಂಡು ಬಂದಿದ್ದು, ಕಳೆದ 5 ವರ್ಷಗಳಲ್ಲಿ ಭಾರತದಾದ್ಯಂತ ಸರಿ ಸುಮಾರು 55,000ಕ್ಕೂ ಅಧಿಕ ಟ್ರಕ್‌ಗಳನ್ನು ಗ್ರಾಹಕರಿಗೆ ಮಾರಾಟ ಮಾಡಿ ಸೈ ಎನ್ನಿಸಿಕೊಂಡಿದೆ.
2017ರಲ್ಲಿ, ಭಾರತ್ ಬೆಂಝ್ ಜೊತೆ ಗಮನಾರ್ಹ ಬೆಳವಣಿಗೆ ಸಾಧಿಸುವ ಗುರಿಯನ್ನು ಡಿಸಿಐವಿ ಹೊಂದಿದೆ. ಹಾಗು, ಮೊದಲ ಬಾರಿಗೆ ಕಂಪನಿಯು ಎರಡು-ಅಂಕಿಯ ಮಾರುಕಟ್ಟೆ ಪಾಲನ್ನು ಗಳಿಸುವ ಮೂಲಕ ಹೊಸ ಸಾಧನೆ ಮಾಡಿದೆ.
ಚೆನ್ನೈ ಸಮೀಪದ ಒರಾಗಾಡಮ್‌ನಲ್ಲಿರುವ ಟ್ರಕ್ ಕಾರ್ಖಾನೆಯಲ್ಲಿ ಡಿಸಿಐವಿ ಕಂಪನಿ ಎರಡನೇ ಶಿಫ್ಟ್ ಪ್ರಾರಂಭಿಸಲು ನಿರ್ಧರಿಸಿದ್ದು, ಇದರಿಂದಾಗಿ, ಉತ್ಪಾದನೆಯನ್ನು ಹೆಚ್ಚಳ ಮಾಡುವ ಮೂಲಕ ಕಂಪೆನಿಯ ರಫ್ತು ವಹಿವಾಟಿನ ಬೆಳವಣಿಗೆಯನ್ನು ವೃದ್ಧಿಸುತ್ತದೆ.
ಭಾರತ್ ಬೆಂಝ್ ಕಂಪನಿಯು ಸೆಪ್ಟೆಂಬರ್ 2012ರಲ್ಲಿ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿತು ಮತ್ತು ಈ ಬ್ರಾಂಡ್ ಏಪ್ರಿಲ್ 2014ರಲ್ಲಿ 10,000 ಟ್ರಕ್‌ಗಳನ್ನು ವಿತರಿಸುವುದರ ಮೂಲಕ ಮೊದಲ ಮೈಲುಗಲ್ಲನ್ನು ಸಾಧಿಸಿತು.
ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಐದನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ, ಭಾರತ್ ಬೆಂಝ್ ಕಂಪನಿಯು ಗ್ರಾಹಕರಿಗೆ ತನ್ನ ಮೊದಲ ಯುರೊ-ವಿ ರೆಡಿ ಮೀಡಿಯಂ-ಡ್ಯೂಟಿ ಟ್ರಕ್‌ಗಳನ್ನು ಬಿಡುಗಡೆಗೊಳಿಸಿದೆ.ಯುರೊ-ವಿ ಹೊರಸೂಸುವಿಕೆಯ ಪ್ರಮಾಣಕ್ಕೆ ಅನುಗುಣವಾಗಿ, ನೈಟ್ರೋಜನ್ ಆಕ್ಸೈಡ್ (ಎನ್ಒಎಕ್ಸ್) ವಿಸರ್ಜನೆಯನ್ನು ಶೇಕಡಾ 40% ರಷ್ಟು ಕಡಿಮೆಗೊಳಿಸುತ್ತದೆ ಈ ಯುರೊ-ವಿ ಹೊರಸೂಸುವಿಕೆಯ ತಂತ್ರಜ್ಞಾನ.
ಎಹೆಚ್‌ಓ ಹಾಗೂ ಬಿಎಸ್-4 ಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಹಕರ ಮನಗೆದ್ದಿರುವ ಭಾರತ್ ಬೆಂಝ್, ಸುರಕ್ಷಾ ದೃಷ್ಠಿಯಿಂದಲೂ ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತಿದೆ.
ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Subscribe to Kannada DriveSpark