ಬಹುನಿರೀಕ್ಷಿತ 5ನೇ ಸರಣಿಯ ಬಿಎಂಡಬ್ಲ್ಯೂ ಕಾರು ಭಾರತದಲ್ಲಿ ಬಿಡುಗಡೆ

Written By:

ಬಿಎಂಡಬ್ಲ್ಯೂ ಸಂಸ್ಥೆಯು 5ನೇ ಸರಣಿಯ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ತಿಳಿದುಕೊಳ್ಳಿ.

ಹೌದು, ಐಷಾರಾಮಿ ಕಾರು ತಯಾರಕ ಸಂಸ್ಥೆಯಾದಂತಹ ಬಿಎಂಡಬ್ಲ್ಯೂ ತನ್ನ ಹೊಚ್ಚ ಹೊಸ 5 ಸರಣಿಯ ಕಾರನ್ನು ಭಾರತದಲ್ಲಿ ಅಮೋಘವಾಗಿ ಬಿಡುಗಡೆಗೊಳಿಸಿದ್ದು, ಈ ಕಾರಿನ ಬೆಲೆ ರೂ. 49.90(ಎಕ್ಸ್‌ ಷೋ ರೂಂ) ಲಕ್ಷ ನಿಗದಿಪಡಿಸಲಾಗಿದೆ.

ಹೊಸ ಬಿಎಂಡಬ್ಲ್ಯೂ 5 ಸರಣಿಯ ಕಾರು ಭಾರತದಲ್ಲಿ ಸೋಲಿಟರಿ ಪೆಟ್ರೋಲ್ ಮತ್ತು ಎರಡು ಡೀಸೆಲ್ ಪವರ್‌ಪ್ಲ್ಯಾಂಟ್ ಎಂಬ ಮೂರು ವಿಭಿನ್ನ ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಯಾಗುತ್ತಿದೆ.

ಮೂರು ರೀತಿಯ ಕಾರುಗಳೂ ಸಹ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರಲಿದ್ದು, ಹಿಂದಿನ ಚಕ್ರಗಳಿಗೆ ಶಕ್ತಿ ಮತ್ತು ಟಾರ್ಕ್ ಕಳುಹಿಸುವ ತಂತ್ರಜ್ಞಾನ ಪಡೆದುಕೊಂಡಿವೆ.

ಅತ್ಯದ್ಭುತ ಹಿಡಿತ ಹೊಂದಿರುವ ಈ ಕಾರಿನ ಟರ್ಬೊ‌ಚಾರ್ಜ್ಡ್ ಪೆಟ್ರೋಲ್ ಇಂಜಿನ್ ಬಗ್ಗೆ ಹೇಳುವುದಾದರೆ, ಈ ಪೆಟ್ರೋಲ್ ಎಂಜಿನ್ 350ಏನ್‌ಎಂ ತಿರುಗುಬಲದಲ್ಲಿ 248.5ರಷ್ಟು ಅಶ್ವಶಕ್ತಿ ಉತ್ಪಾದಿಸುವಷ್ಟು ಬಲಿಷ್ಠವಾಗಿದ್ದು, ಕೇವಲ 6.2 ಸೆಕೆಂಡುಗಳಲ್ಲಿ 0 ಕಿ.ಮೀ ಇಂದ 100 ಕಿ.ಮೀ.ವರೆಗೂ ವೇಗ ಪಡೆದುಕೊಳ್ಳಲಿದೆ.

ಇನ್ನು ಡೀಸೆಲ್ ಕಾರುಗಳು ಟರ್ಬೊ‌ಚಾರ್ಜ್ಡ್ ಎಂಜಿನ್ ಹೊಂದಿದ್ದು, 400ಏನ್‌ಎಂ ತಿರುಗುಬಲದಲ್ಲಿ 187ರಷ್ಟು ಅಶ್ವಶಕ್ತಿ ಉತ್ಪಾದಿಸುವಷ್ಟು ಶಕ್ತಿ ಹೊಂದಿವೆ ಹಾಗು ಈ ಡೀಸೆಲ್ ಕಾರುಗಳು 100 ಕಿ.ಮೀ ವೇಗವನ್ನು ಪಡೆದುಕೊಳ್ಳಲು 7.5 ತೆಗೆದುಕೊಳ್ಳಲಿವೆ.

ಪೆಟ್ರೋಲ್ ಎಂಜಿನ್ ಪಡೆದ ಬಿಎಂಡಬ್ಲ್ಯೂ 5ನೇ ಸರಣಿಯ ಕಾರಿನಲ್ಲಿ ಗಂಟೆಗೆ ಗರಿಷ್ಠ 250 ಕಿ/ಮೀ ಸಂಚರಿಸಬಹುದಾಗಿದ್ದು, ಡೀಸೆಲ್ ಕಾರಿನಲ್ಲಿ 235 ಕಿ/ಮೀ ಮಾತ್ರ ಸಂಚರಿಸುವಷ್ಟು ಸಾಮರ್ಥ್ಯ ಹೊಂದಿದೆ.

'ಎಂ ಸ್ಪೋರ್ಟ್' ಮಾದರಿಯ ಕಾರು ಬಿಎಂಡಬ್ಲ್ಯೂ 5 ಸರಣಿಯ ಕಾರಿನಲ್ಲಿಯೇ ಅತ್ಯಂತ ದೊಡ್ಡ ಎಂಜಿನ್ ಪಡೆದುಕೊಂಡಿದ್ದು, ಈ ಕಾರು 3.0-ಲೀಟರ್ ಅವಳಿ-ಟರ್ಬೊ ನೇರ 6 ಡೀಸೆಲ್ ಎಂಜಿನ್ ಪಡೆದುಕೊಂಡಿದೆ.

ಹೊಸ ಬಿಎಂಡಬ್ಲ್ಯು 5 ಸರಣಿಯ ಕಾರು (ಸಂಕೇತ ನಾಮ ಜಿ30) 4,935 ಮಿ.ಮೀ ಉದ್ದ, 1,868 ಮಿ.ಮೀ ಅಗಲ, 1,466 ಮಿಮೀ ಎತ್ತರ ಹೊಂದಿದೆ.

ಹೆಡ್ ಲ್ಯಾಂಪ್‌ಗಳು ಕ್ರೋಮ್-ಲೇಪಿತ ಐಕಾನಿಕ್ ಬಿಎಂಡಬ್ಲ್ಯೂ ಕಾರಿನ ಮೂತ್ರಪಿಂಡ ಮಾದರಿಯ ಗ್ರಿಲ್‌ನೊಂದಿಗೆ ಸಂಪರ್ಕ ಹೊಂದಿವೆ ಮತ್ತು ಈ ಮೊದಲಿದ್ದ ವೃತ್ತಾಕಾರದ ವಿನ್ಯಾಸವನ್ನು ಡಿಆರ್‌ಎಲ್‌ಗಳು ಕಳೆದುಕೊಂಡಿವೆ.

ಕಾರಿನ ಒಳಭಾಗದಲ್ಲಿ ಅಳವಡಿಸಿರುವ 10.25 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ‌ಯನ್ನು ಸನ್ನೆಗಳ ಮೂಲಕ ನಿಯಂತ್ರಿಸಬಹುದು ಮತ್ತು ಪ್ರದರ್ಶನ ಕೀಲಿಯ ಸಹಾಯದಿಂದ ಸಕ್ರಿಯಗೊಳಿಸಬಹುದಾದ ರಿಮೋಟ್ ಕಂಟ್ರೋಲ್ ಪಾರ್ಕಿಂಗ್ ಆಯ್ಕೆಯನ್ನು ಒಳಗೊಂಡಿರುತ್ತದೆ.

ಆರು ಏರ್‌ಬ್ಯಾಗ್, ಕ್ರಿಯಾತ್ಮಕ ಬ್ರೇಕಿಂಗ್ ದೀಪಗಳು, ಪಾರ್ಕ್ ದೂರ ನಿಯಂತ್ರಣ, ಎಳೆತ ನಿಯಂತ್ರಣ, ಸ್ಥಿರತೆ ನಿಯಂತ್ರಣ ಮತ್ತು ಕಾರ್ನರ್ ಬ್ರೇಕ್ ನಿಯಂತ್ರಣ ವ್ಯವಸ್ಥೆಯನ್ನು ಈ ಕಾರು ಪಡೆದುಕೊಂಡಿದೆ.

ಅಲ್ಪೈನ್ ವೈಟ್, ಬ್ಲಾಕ್ ಸಪ್ಫಿರೆ, ಬ್ಲೂಸ್ಟೋನ್ ಮೆಟಾಲಿಕ್, ಕಾರ್ಬನ್ ಬ್ಲಾಕ್, ಕ್ಯಾಷ್ಮೆರೆ ಸಿಲ್ವರ್, ಇಂಪೀರಿಯಲ್ ಬ್ಲೂ ಬ್ರಿಲಿಯಂಟ್ ಎಫೆಕ್ಟ್ ಜಟೊಬ ಮತ್ತು ಮೆಡಿಟರೇನಿಯನ್ ಬ್ಲೂ ಎಂಬ ಎಂಟು ಬಣ್ಣಗಳಲ್ಲಿ ಈ ಕಾರು ಲಭ್ಯವಿದೆ.

ಮಾದರಿ                      ಎಕ್ಸ್ ಷೋ ರೂಂ ಬೆಲೆ

520ಡಿ ಸ್ಪೋರ್ಟ್ ಲೈನ್     ರೂ. 49.90 ಲಕ್ಷ
530ಐ ಸ್ಪೋರ್ಟ್ ಲೈನ್     ರೂ. 49.90 ಲಕ್ಷ
520ಡಿ ಲಗ್ಜುರಿ ಲೈನ್        ರೂ. 53.60 ಲಕ್ಷ
530ಡಿ ಎಂ ಸ್ಪೋರ್ಟ್       ರೂ. 61.30 ಲಕ್ಷ

English summary
Read in kannada about BMW 5 Series launched in India. Prices for the seventh-generation BMW 5 Series in India start at Rs 49.90 lakh ex-showroom.
Story first published: Thursday, June 29, 2017, 15:03 [IST]
Please Wait while comments are loading...

Latest Photos