ದಟ್ಸನ್ ರೆಡಿ ಗೋ ಎಎಂಟಿ ಆವೃತಿ ಜನವರಿಯಲ್ಲಿ ಬಿಡುಗಡೆ ?

Written By:

ದಟ್ಸನ್ ರೆಡಿ ಗೋ ಹ್ಯಾಚ್‌ಬ್ಯಾಕ್ ಕಾರಿನ ಸ್ವಯಂಚಾಲಿತ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್(ಎಎಂಟಿ) ಆವೃತ್ತಿಯು ಮುಂದಿನ ವರ್ಷದ ಜನವರಿಯಲ್ಲಿ ಬಿಡುಗಡೆಯಾಗಲಿದೆ ಎಂದು ದಟ್ಸನ್ ಘೋಷಿಸಿದೆ.

ದಟ್ಸನ್ ರೆಡಿ ಗೋ ಎಎಂಟಿ ಆವೃತಿ ಜನವರಿಯಲ್ಲಿ ಬಿಡುಗಡೆ ?

ಕಳೆದ ವರ್ಷ ಬಿಡುಗಡೆಯಾದ ದಟ್ಸನ್ ರೆಡಿ-ಗೋ ಕಾರು ಹೆಚ್ಚು ಪ್ರಸಿದ್ದಿ ಪಡೆದುಕೊಂಡಿತ್ತು. ಈ ವರ್ಷದ ಆರಂಭದಲ್ಲಿ ಹೆಚ್ಚು ಶಕ್ತಿಯುತ 1.0 ಲೀಟರ್ ಎಂಜಿನ್ ಸಹ ಹೊಂದುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಿತ್ತು. ಈಗ ಸ್ವಯಂಚಾಲಿತ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್(ಎಎಂಟಿ) ಸೌಲಭ್ಯ ಪಡೆದು ಮತ್ತೆ ಅಖಾಡಕ್ಕಿಳಿಯಲಿದೆ.

ದಟ್ಸನ್ ರೆಡಿ ಗೋ ಎಎಂಟಿ ಆವೃತಿ ಜನವರಿಯಲ್ಲಿ ಬಿಡುಗಡೆ ?

ಕಾರಿನ ಎಎಂಟಿ ಆವೃತ್ತಿಯು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎನ್ನಲಾಗಿತ್ತು, ಆದರೆ ದಿನಾಂಕ ನಿಗದಿಯಾಗಿರಲಿಲ್ಲ. ಆದರೆ, ಈಗ ಈ ಕಾರು ಜನವರಿ ತಿಂಗಳಿನಲ್ಲಿ 15ರ ನಂತರ ಬಿಡುಗಡೆಯಾಗಲಿದೆ ಎಂಬ ಖಚಿತ ಮಾಹಿತಿ ಡ್ರೈವ್ ಸ್ಪಾರ್ಕ್‌ಗೆ ಸಿಕ್ಕಿದೆ.

ದಟ್ಸನ್ ರೆಡಿ ಗೋ ಎಎಂಟಿ ಆವೃತಿ ಜನವರಿಯಲ್ಲಿ ಬಿಡುಗಡೆ ?

ರೆನಾಲ್ಟ್ ಕ್ವಿಡ್ ಕಾರಿನ ಪ್ಲ್ಯಾಟ್ ಫಾರಂ ಆದರಿಸಿ ಈ ದಟ್ಸನ್ ರೆಡಿ ಗೋ ಕಾರು ನಿರ್ಮಾಣವಾಗಿದೆ ಹಾಗು ಕ್ವಿಡ್ ಕಾರಿನಲ್ಲಿ ಅಳವಡಿಸಿರುವ 5 ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಆಯ್ಕೆಯನ್ನು ಈ ಕಾರೂ ಸಹ ಪಡೆದುಕೊಂಡಿದೆ.

ದಟ್ಸನ್ ರೆಡಿ ಗೋ ಎಎಂಟಿ ಆವೃತಿ ಜನವರಿಯಲ್ಲಿ ಬಿಡುಗಡೆ ?

1-ಲೀಟರ್ ಎಂಜಿನ್ ಆವೃತ್ತಿಯೊಂದಿಗೆ ಮಾತ್ರ ಎಎಂಟಿ ಆವೃತ್ತಿಯು ಲಭ್ಯವಿದ್ದು, ಈ ಎಂಜಿನ್ ಗರಿಷ್ಠ 67 ಬಿಎಚ್‌ಪಿ ಶಕ್ತಿ ಮತ್ತು 91 ಎನ್‌ಎಂ ಉತ್ಪಾದಿಸುತ್ತದೆ ಹಾಗು ರೆಡಿ ಗೋ ಕಾರಿನ 0.8-ಲೀಟರ್ ಆವೃತ್ತಿಯು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್‌ನೊಂದಿಗೆ ಮುಂದುವರಿಯುತ್ತದೆ.

ದಟ್ಸನ್ ರೆಡಿ ಗೋ ಎಎಂಟಿ ಆವೃತಿ ಜನವರಿಯಲ್ಲಿ ಬಿಡುಗಡೆ ?

ರೆಡಿ ಗೋ ಕಾರಿನ ಹೊರಭಾಗವು ಮತ್ತು ಒಳಾಂಗಣವು ಹಳೆಯ ಮಾದರಿಯನ್ನು ಹೋಲುತ್ತದೆ. ಉಳಿದಂತೆ ವೈಶಿಷ್ಟ್ಯ ಪಟ್ಟಿಯೂ ಸಹ ಒಂದೇ ಆಗಿರುತ್ತದೆ.

ದಟ್ಸನ್ ರೆಡಿ ಗೋ ಎಎಂಟಿ ಆವೃತಿ ಜನವರಿಯಲ್ಲಿ ಬಿಡುಗಡೆ ?

ಉನ್ನತ ಆವೃತ್ತಿಯು ಹಗಲು ಹೊತ್ತು ಬೆಳಗುವ ಎಲ್ಇಡಿ ದೀಪಗಳು, ಕಪ್ಪು ಥೀಮ್ ಕ್ಯಾಬಿನ್, ಆಸನಗಳ ಮೇಲೆ ಕೆಂಪು ಉಚ್ಚಾರಣೆ, ಎಸಿ ದ್ವಾರಗಳಲ್ಲಿ ಸಿಲ್ವರ್ ಫಿನಿಷ್ ನೋಡಬಹುದಾಗಿದೆ ಹಾಗು ಇನ್ಫೋಟೈನ್ಮೆಂಟ್ ಸಿಸ್ಟಮ್ ಮುಂದುವರೆಸುವ ನಿರೀಕ್ಷೆಯಿದೆ.

ದಟ್ಸನ್ ರೆಡಿ ಗೋ ಎಎಂಟಿ ಆವೃತಿ ಜನವರಿಯಲ್ಲಿ ಬಿಡುಗಡೆ ?

ಎಎಂಟಿ ಆಯ್ಕೆಯು ರೆಡಿ ಗೋ ಕಾರಿನ ಟಿ(ಓ) ಮತ್ತು ಎಸ್ ರೂಪಾಂತರಗಳೊಂದಿಗೆ ಮಾತ್ರ ಲಭ್ಯವಿರುತ್ತದೆ. ಟಾಟಾ ಟಿಯಾಗೊ ಎಎಂಟಿ ಮತ್ತು ಮಾರುತಿ ಆಲ್ಟೊ 800 ಎಎಂಟಿ ಕಾರುಗಳೊಂದಿಗೆ ಈ ರೆಡಿ ಗೋ ಎಎಂಟಿ ಕಾರು ಸ್ಪರ್ಧಿಸಲಿದೆ. ಸಾಮಾನ್ಯ ಮಾದರಿಗಿಂತ ಹೊಸ ಎಎಂಟಿ ಆವೃತ್ತಿಯ ಬೆಲೆ ರೂ. 25 ಸಾವಿರ ಹೆಚ್ಚಿಗೆ ಇರಲಿದೆ.

Read more on datsun ದಟ್ಸನ್
English summary
Read in Kannada about Datsun redi-GO AMT to be launched in January.
Story first published: Monday, December 4, 2017, 19:15 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark