ನೆಲಕಚ್ಚಿದ ವ್ಯಾಪಾರ- ಸದ್ಯದಲ್ಲೇ ಮುಚ್ಚಲಿದೆ ಗುಜರಾತ್‌ನಲ್ಲಿರುವ ಜಿಎಂ ಮೊದಲ ಕಾರು ಉತ್ಪಾದನಾ ಘಟಕ.!!

Written By:

21 ವರ್ಷಗಳ ಹಿಂದೆ ಗುಜರಾತ್‌ನಲ್ಲಿ ಮೊದಲ ಬಾರಿಗೆ ಸ್ಧಾಪನೆಗೊಂಡಿದ್ದ ಜನರಲ್ ಮೋಟಾರ್ಸ್(ಜಿಎಂ) ಸಂಸ್ಥೆಯ ಮೊದಲ ಉತ್ಪಾದನಾ ಘಟಕ ಸದ್ಯದಲ್ಲೇ ಸ್ಥಗಿತಗೊಳ್ಳಲಿದೆ. ವ್ಯಾಪಾರದಲ್ಲಿ ಹಿನ್ನಡೆ ಕಂಡಿರುವ ಜಿಎಂ ಸಂಸ್ಥೆಯು, ಮೊದಲ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ.

ನೆಲಕಚ್ಚಿದ ವ್ಯಾಪಾರ- ಸದ್ಯದಲ್ಲೇ ಮುಚ್ಚಲಿದೆ ಗುಜರಾತ್‌ನಲ್ಲಿರುವ ಜಿಎಂ ಮೊದಲ ಕಾರು ಉತ್ಪಾದನಾ ಘಟಕ.!!

1996ರಲ್ಲಿ ಗುಜರಾತ್‌ನ ವಡೋದರಾ ಬಳಿಯ ಹೋಲಾಲ್‌ನಲ್ಲಿ ಸ್ಥಾಪನೆಗೊಂಡಿದ್ದ ಜನರಲ್ ಮೋಟಾರ್ಸ್‌ನ ಮೊದಲ ಉತ್ಪಾದನಾ ಘಟಕವು ಇತ್ತೀಚಿನ ದಿನಗಳಲ್ಲಿ ಭಾರೀ ಪ್ರಮಾಣದ ನಷ್ಟ ಅನುಭವಿಸಿತ್ತು. ಹೀಗಾಗಿ ಭಾರತದಲ್ಲಿರುವ ತನ್ನ ಮೊದಲ ಘಟಕವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ನೆಲಕಚ್ಚಿದ ವ್ಯಾಪಾರ- ಸದ್ಯದಲ್ಲೇ ಮುಚ್ಚಲಿದೆ ಗುಜರಾತ್‌ನಲ್ಲಿರುವ ಜಿಎಂ ಮೊದಲ ಕಾರು ಉತ್ಪಾದನಾ ಘಟಕ.!!

ಕಳೆದ ವರ್ಷವೇ ಜಿಎಂ ಸಂಸ್ಥೆಯು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿತ್ತು. ಜೊತೆಗೆ ಖಾಯಂ ಆಗಿ ಕಾರ್ಯನಿರ್ವಹಿಸುತ್ತಿರುವ 650 ಸಿಬ್ಬಂದಿಗೆ ಸೂಕ್ತ ಪರಿಹಾರದ ಭರವಸೆ ನೀಡಿತ್ತು. ಆದ್ರೆ ಕಂಪನಿ ನಿರ್ಧಾರವನ್ನು ಖಂಡಿಸಿದ್ದ ಕಾರ್ಮಿಕರು, ಜೀವನ ಭದ್ರತೆಗಾಗಿ ಭಾರೀ ಪ್ರಮಾಣದ ಪರಿಹಾರಕ್ಕಾಗಿ ಪಟ್ಟು ಹಿಡಿದಿವೆ.

ನೆಲಕಚ್ಚಿದ ವ್ಯಾಪಾರ- ಸದ್ಯದಲ್ಲೇ ಮುಚ್ಚಲಿದೆ ಗುಜರಾತ್‌ನಲ್ಲಿರುವ ಜಿಎಂ ಮೊದಲ ಕಾರು ಉತ್ಪಾದನಾ ಘಟಕ.!!

ಸದ್ಯ ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಿರುವ ಜಿಎಂ ಸಂಸ್ಥೆಯು, ಗುಜರಾತ್ ಸರ್ಕಾರದೊಂದಿಗೆ ಮಹತ್ವದ ಚರ್ಚೆ ನಡೆಸಿ ಕಾರ್ಮಿಕರ ಭವಿಷ್ಯಕ್ಕೆ ತೊಂದರೆಯಾಗದಂತೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದೆ. ಜೊತೆಗೆ ವರ್ಷದ 100 ದಿನಗಳ ಕೆಲಸದ ಭರವಸೆ ನೀಡಿದ್ದು, ಇದಕ್ಕಾಗಿ ಹೊಸ ಯೋಜನೆಯೊಂದನ್ನು ರೂಪಿಸಲು ಸಜ್ಜಾಗಿದೆ.

ನೆಲಕಚ್ಚಿದ ವ್ಯಾಪಾರ- ಸದ್ಯದಲ್ಲೇ ಮುಚ್ಚಲಿದೆ ಗುಜರಾತ್‌ನಲ್ಲಿರುವ ಜಿಎಂ ಮೊದಲ ಕಾರು ಉತ್ಪಾದನಾ ಘಟಕ.!!

ಕಳೆದ ವರ್ಷವೇ ಸ್ಥಗಿತಗೊಳ್ಳಬೇಕಿದ್ದ ಜಿಎಂ ಉತ್ವಾದನಾ ಘಟಕವು, ಕೆಲ ಆಂತರಿಕ ಸಮಸ್ಯೆಗಳಿಂದಾಗಿ ಈ ವರ್ಷ ಏಪ್ರಿಲ್ ಅಂತ್ಯಕ್ಕೆ ಸಂಪೂರ್ಣವಾಗಿ ಕದಮುಚ್ಚಲಿದೆ. ಹೀಗಾಗಿ ಕಾರ್ಮಿಕರು ಆತಂಕದಲ್ಲಿದ್ದು, ಜಿಎಂ ಸಂಸ್ಥೆಯಿಂದ ಸೂಕ್ತ ಪರಿಹಾರ ಕೊಡಿಸುವಂತೆ ಸರ್ಕಾರಕ್ಕೆ ಒತ್ತಡ ತರಲಾಗುತ್ತಿದೆ.

ನೆಲಕಚ್ಚಿದ ವ್ಯಾಪಾರ- ಸದ್ಯದಲ್ಲೇ ಮುಚ್ಚಲಿದೆ ಗುಜರಾತ್‌ನಲ್ಲಿರುವ ಜಿಎಂ ಮೊದಲ ಕಾರು ಉತ್ಪಾದನಾ ಘಟಕ.!!

ಮಾಹಿತಿಗಳ ಪ್ರಕಾರ 650 ಖಾಯಂ ಸಿಬ್ಬಂದಿಯು ತಲಾ 35 ರಿಂದ 40 ಲಕ್ಷ ರೂಪಾಯಿ ಪರಿಹಾರಕ್ಕಾಗಿ ಪಟ್ಟು ಹಿಡಿದ್ದಾರೆ. ಆದ್ರೆ ಗುಜರಾತ್ ಸರ್ಕಾರದ ಮೊರೆ ಹೋಗಿರುವ ಜಿಎಂ ಸಂಸ್ಥೆಯು ಪ್ರತಿ ಕಾರ್ಮಿಕರಿಗೆ ತಲಾ 8-10 ಲಕ್ಷ ರೂಪಾಯಿ ಪರಿಹಾರ ನೀಡಲು ಮುಂದಾಗಿದೆ. ಆದ್ರೆ ಇದಕ್ಕೆ ಕಾರ್ಮಿಕ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿವೆ.

ನೆಲಕಚ್ಚಿದ ವ್ಯಾಪಾರ- ಸದ್ಯದಲ್ಲೇ ಮುಚ್ಚಲಿದೆ ಗುಜರಾತ್‌ನಲ್ಲಿರುವ ಜಿಎಂ ಮೊದಲ ಕಾರು ಉತ್ಪಾದನಾ ಘಟಕ.!!

ಈ ನಡುವೆ ಜಿಎಂ ಉತ್ಪಾದನಾ ಘಟಕ ಮುಚ್ಚಿಕೊಳ್ಳುತ್ತಿದ್ದಂತೆ ಅದೇ ಜಾಗಕ್ಕೆ ಮತ್ತೊಂದು ಬೃಹತ್ ಕಾರು ಉತ್ಪಾದನಾ ಸಂಸ್ಥೆ ಲಗ್ಗೆಯಿಡಲು ಸಜ್ಜಾಗಿದೆ. ಚೀನಾ ಮೂಲದ ಸೈಕ್(SAIC)ಮೋಟಾರ್ ಕಾರ್ಪ್ ಕಾರು ಉತ್ಪಾದನಾ ಘಟಕ ತೆರೆದುಕೊಳ್ಳುವ ಸಾಧ್ಯತೆಗಳಿದ್ದು, ಕೇಂದ್ರದ ಜೊತೆ ಮಾತುಕತೆ ನಡೆಸಿದೆ.

ನೆಲಕಚ್ಚಿದ ವ್ಯಾಪಾರ- ಸದ್ಯದಲ್ಲೇ ಮುಚ್ಚಲಿದೆ ಗುಜರಾತ್‌ನಲ್ಲಿರುವ ಜಿಎಂ ಮೊದಲ ಕಾರು ಉತ್ಪಾದನಾ ಘಟಕ.!!

ಆದರೆ ಸೈಕ್(SAIC)ಮೋಟಾರ್ ಕಾರ್ಪ್ ಕಾರು ಉತ್ಪಾದನಾ ಘಟಕ ಸ್ಥಾಪನೆಗೆ ದೇಶದ ಬೇರೆ ಬೇರೆ ರಾಜ್ಯಗಳಿಂದ ಆಹ್ವಾನ ಬಂದಿದ್ದು, ತಮ್ಮಲ್ಲೇ ಉತ್ಪಾದನಾ ಘಟಕ ನಿರ್ಮಿಸುವಂತೆ ಪ್ರಸ್ತಾಪ ಸಲ್ಲಿಸುತ್ತಿವೆ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಹೆಚ್ಚಿನ ಭೂಮಿ ಹಾಗೂ ಮೂಲಭೂತ ಸೌಕರ್ಯಗಳನ್ನುನೀಡುವ ಭರವಸೆ ನೀಡಲಾಗಿದ್ದು, ಗುಜರಾತಿನಲ್ಲಿ ಸೈಕ್(SAIC)ಮೋಟಾರ್ ಕಾರ್ಪ್ ಸ್ಥಾಪನೆ ಸಾಧ್ಯವಾಗದೇ ಇರಬಹುದು ಎನ್ನಲಾಗಿದೆ.

ನೆಲಕಚ್ಚಿದ ವ್ಯಾಪಾರ- ಸದ್ಯದಲ್ಲೇ ಮುಚ್ಚಲಿದೆ ಗುಜರಾತ್‌ನಲ್ಲಿರುವ ಜಿಎಂ ಮೊದಲ ಕಾರು ಉತ್ಪಾದನಾ ಘಟಕ.!!

ಈ ಬಗ್ಗೆ ಮಾತನಾಡಿರುವ ಗುಜರಾತ್ ರಾಜ್ಯದ ಮುಖ್ಯಕಾರ್ಯದರ್ಶಿ ಜೆ.ಎನ್.ಸಿಂಗ್, ಯಾವುದೇ ಕಾರಣಕ್ಕೂ ಕಾರ್ಮಿಕರಿಗೆ ಅನ್ಯಾಯವಾಗಲು ಬೀಡುವುದಿಲ್ಲವೆಂಬ ಭರವಸೆ ನೀಡಿದ್ದಾರೆ. ಜೊತೆಗೆ ಕಾರ್ಮಿಕರ ಭವಿಷ್ಯಕ್ಕಾಗಿ ಸೂಕ್ತ ವ್ಯವಸ್ಥೆ ಮಾಡುವಂತೆ ಜಿಎಂ ಸಂಸ್ಥೆ ಜೊತೆ ಚರ್ಚೆ ನಡೆಸಲಾಗಿದೆ ಎಂದಿದ್ದಾರೆ.

ನೆಲಕಚ್ಚಿದ ವ್ಯಾಪಾರ- ಸದ್ಯದಲ್ಲೇ ಮುಚ್ಚಲಿದೆ ಗುಜರಾತ್‌ನಲ್ಲಿರುವ ಜಿಎಂ ಮೊದಲ ಕಾರು ಉತ್ಪಾದನಾ ಘಟಕ.!!

ಒಟ್ಟಿನಲ್ಲಿ ಹತ್ತಾರು ವರ್ಷಗಳಿಂದ ಜಿಎಂ ಸಂಸ್ಥೆಯನ್ನೇ ನಂಬಿಕೊಂಡು ಬಂದಿದ್ದ ಕಾರ್ಮಿಕರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಹೀಗಾಗಿ ಕಾರ್ಮಿಕರ ಭವಿಷ್ಯಕ್ಕೆ ಸೂಕ್ತ ಪರಿಹಾರ ನೀಡಿದ ನಂತರವಷ್ಟೇ ಜಿಎಂ ಉತ್ಪಾದನಾ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಜಿಎಂ ಸಂಸ್ಥೆಗೆ ಗುಜರಾತ್ ಸರ್ಕಾರ ಸೂಚಿಸಬೇಕಿದೆ.

ನೆಲಕಚ್ಚಿದ ವ್ಯಾಪಾರ- ಸದ್ಯದಲ್ಲೇ ಮುಚ್ಚಲಿದೆ ಗುಜರಾತ್‌ನಲ್ಲಿರುವ ಜಿಎಂ ಮೊದಲ ಕಾರು ಉತ್ಪಾದನಾ ಘಟಕ.!!

2017ರ ಚೆವ್ರೊಲೆಟ್ ಕ್ಯಾಮರೊನ ZL1 ಕಾರಿನ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
GM is set to shut down their manufacturing plant located in Gujarat after 21 years.
Story first published: Monday, March 6, 2017, 16:11 [IST]
Please Wait while comments are loading...

Latest Photos