ಭಾರತಕ್ಕೆ ಬರಲಿವೆ ಚಾಲಕ ರಹಿತ ಕಾರು- ಟ್ರಾಫಿಕ್ ಕಡಿವಾಣಕ್ಕೆ ಗೂಗಲ್ ಹೊಸ ಪ್ಲ್ಯಾನ್..!!

Written By:

ಜಗತ್ತಿನಾದ್ಯಂತ ಆಟೋಮೊಬೈಲ್ ಕ್ಷೇತ್ರದಲ್ಲಿ ದಿನೇ ದಿನೇ ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಈ ನಡುವೆ ಚಾಲಕ ರಹಿತ ಕಾರು ಭಾರತದ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿದ್ದು, ಗೂಗಲ್‌ನಿಂದ ಸಿದ್ಧಗೊಂಡಿರುವ ಹೊಸ ಮಾದರಿಯ ಕಾರು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಭಾರತಕ್ಕೆ ಬರಲಿದೆ ಚಾಲಕ ರಹಿತ ಕಾರು- ಟ್ರಾಫಿಕ್ ಕಡಿವಾಣಕ್ಕೆ ಗೂಗಲ್ ಹೊಸ ಪ್ಲ್ಯಾನ್..!!

ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಚಾಲಕರಹಿತ ಕಾರುಗಳ ಆವಿಷ್ಕಾರ ಭರದಿಂದ ಸಾಗಿದ್ದು, ಟೆಸ್ಲಾ, ಉಬರ್ ಮತ್ತು ಗೂಗಲ್ ವಿನೂತನ ಪ್ರಯೋಗಗಳನ್ನು ನಡೆಸುತ್ತಿವೆ. ಈ ನಡುವೆ ಭಾರತೀಯ ರಸ್ತೆಗಳಿಗೆ ಹೊಂದಾಣಿಕೆಯಾಗಬಲ್ಲ ಸಣ್ಣಕಾರುಗಳನ್ನು ಗೂಗಲ್ ಸಿದ್ಧಗೊಳಿಸಿದ್ದು, ಇಷ್ಟರಲ್ಲೇ ಗ್ರಾಹಕರ ಸೇವೆಗೆ ಸಜ್ಜಾಗಲಿವೆ.

ಭಾರತಕ್ಕೆ ಬರಲಿದೆ ಚಾಲಕ ರಹಿತ ಕಾರು- ಟ್ರಾಫಿಕ್ ಕಡಿವಾಣಕ್ಕೆ ಗೂಗಲ್ ಹೊಸ ಪ್ಲ್ಯಾನ್..!!

ಸದ್ಯ ವಿನೂತನ ಕಾರುಗಳ ಬಗೆಗೆ ಕೂಲಂಕುಶವಾಗಿ ಪರೀಕ್ಷೆ ನಡೆಸುತ್ತಿರುವ ಭಾರತೀಯ ರಸ್ತೆ ಸಾರಿಗೆ ನಿಗಮವು, ಟೆಸ್ಟಿಂಗ್ ಪೂರ್ಣಗೊಂಡ ನಂತರವಷ್ಟೇ ಚಾಲಕ ರಹಿತ ಕಾರುಗಳಿಗೆ ಹಸಿರು ನಿಶಾನೆ ತೊರಲಿದೆ.

ಭಾರತಕ್ಕೆ ಬರಲಿದೆ ಚಾಲಕ ರಹಿತ ಕಾರು- ಟ್ರಾಫಿಕ್ ಕಡಿವಾಣಕ್ಕೆ ಗೂಗಲ್ ಹೊಸ ಪ್ಲ್ಯಾನ್..!!

ಚಾಲಕ ರಹಿತ ಕಾರುಗಳು ಜಾಗತಿಕ ಮಟ್ಟದಲ್ಲಿ ಹೆಚ್ಚು ಹೆಚ್ಚು ಬೇಡಿಕೆ ಸೃಷ್ಠಿಸಿದ್ದು, ಭಾರತದಲ್ಲೂ ಹತ್ತಾರು ಆವಿಷ್ಕಾರಗಳನ್ನು ನಡೆಸಲಾಗುತ್ತಿದೆ. ಟಾಟಾ ಎಸ್‌ಎಕ್ಸ್‌ಸಿ ಕೂಡಾ ಈಗಾಗಲೇ ಟೆಸ್ಟ್ ಡ್ರೈವಿಂಗ್ ನಡೆಸಿದ್ದು, ಸ್ವಯಂಚಾಲಿತವಾಗಿ ಕಾರು ಚಾಲನೆ ಸಾಧ್ಯವಾಗಿಸಿದೆ. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಳ್ಳದ ಟಾಟಾ, ಮಹತ್ತರ ಸಂಶೋಧನೆ ಮುಂದುವರೆಸಿದೆ.

ಭಾರತಕ್ಕೆ ಬರಲಿದೆ ಚಾಲಕ ರಹಿತ ಕಾರು- ಟ್ರಾಫಿಕ್ ಕಡಿವಾಣಕ್ಕೆ ಗೂಗಲ್ ಹೊಸ ಪ್ಲ್ಯಾನ್..!!

ಗೂಗಲ್ ಹೊರತರಲಿರುವ ಚಾಲಕ ರಹಿತ ಕಾರುಗಳ ಕಾರ್ಯನಿರ್ವಹಣಾ ಶಕ್ತಿ ಅತ್ಯಬ್ಧುತವಾಗಿದೆ. ಅತಿಸೂಕ್ಷ್ಮ ವಿವರಗಳನ್ನು ಕ್ಷಣಮಾತ್ರದಲ್ಲೇ ತನ್ನ ಮೂಲ ಕೇಂದ್ರಕ್ಕೆ ರವಾನಿಸುವುದಲ್ಲೇ ಮುಂದೆ ಏನಾಗಿಲಿದೆ ಎಂಬುವುದನ್ನು ಉಹಿಸಬಲ್ಲದು. ಸ್ಪೀರಿಯೋಸ್ಕೋಪಿಕ್ ಕ್ಯಾಮೆರಾ, ಅಲ್ಟ್ರಾಸಾನಿಕ್ ಮತ್ತು ರಡಾರ್ ಸೇರಿದಂತೆ ವಿನೂತನ ತಂತ್ರಜ್ಞಾಗಳ ಹೊತ್ತು ನಿಂತಿದ್ದು, ಹತ್ತಾರು ಸುರಕ್ಷಾ ಕ್ರಮಗಳನ್ನು ಅಳವಡಿಸಲಾಗಿದೆ.

ಭಾರತಕ್ಕೆ ಬರಲಿದೆ ಚಾಲಕ ರಹಿತ ಕಾರು- ಟ್ರಾಫಿಕ್ ಕಡಿವಾಣಕ್ಕೆ ಗೂಗಲ್ ಹೊಸ ಪ್ಲ್ಯಾನ್..!!

ಈ ಬಗ್ಗೆ ಕೇಂದ್ರದ ತಿದ್ದುಪಡಿ ಮಸೂದೆಯಲ್ಲಿ ಕೆಲವು ಷರತ್ತುಗಳನ್ನು ತರಲಾಗಿದ್ದು, ಇಂತಹ ಆವಿಷ್ಕಾರ ಬಗೆಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿದ ನಂತರವೇ ಚಾಲಕ ರಹಿತ ಕಾರುಗಳಿಗೆ ಅವಕಾಶ ನೀಡುವಂತೆ ಕಟ್ಟುನಿಟ್ಟಿನ ಆದೇಶ ಜಾರಿಗೆ ತಂದಿದೆ. ಹೀಗಾಗಿ ಹತ್ತಾರು ಆಯಾಮಗಳಲ್ಲಿ ಪರೀಕ್ಷೆ ನಡೆಸಿದ ನಂತರವೇ ಇವುಗಳಿಗೆ ಗ್ರೀನ್ ಸಿಗ್ನಲ್ ಸಿಗಲಿದೆ.

ಭಾರತಕ್ಕೆ ಬರಲಿದೆ ಚಾಲಕ ರಹಿತ ಕಾರು- ಟ್ರಾಫಿಕ್ ಕಡಿವಾಣಕ್ಕೆ ಗೂಗಲ್ ಹೊಸ ಪ್ಲ್ಯಾನ್..!!

ಇನ್ನು ಈ ಕುರಿತು ಮಾತನಾಡಿರುವ ಪಿಡಬ್ಲ್ಯೂಸಿ ಪಾಲುದಾರ ಅಬ್ದುಲ್ ಮಜೀದ್, "ಇದೊಂದು ಅತ್ಯುತ್ತಮ ಆವಿಷ್ಕಾರವಾಗಿದ್ದು, ಮುಂಬರುವ ದಿನಗಳಲ್ಲಿ ಸಾರಿಗೆ ವ್ಯವಸ್ಥೆಗಳಲ್ಲಿ ಇದು ಅನಿವಾರ್ಯವಾಗಲಿದೆ. ಆದ್ರೆ ಸಾರ್ವಜನಿಕ ವ್ಯವಸ್ಧೆಗಳಲ್ಲಿ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗದಿದ್ದರೂ, ಸೀಮಿತ ಪ್ರಮಾಣದಲ್ಲಿ ತನ್ನ ಕಾರ್ಯನಿರ್ವಹಣೆ ನಡೆಸಬಲ್ಲದು"ಎಂದಿದ್ದಾರೆ.

ಭಾರತಕ್ಕೆ ಬರಲಿದೆ ಚಾಲಕ ರಹಿತ ಕಾರು- ಟ್ರಾಫಿಕ್ ಕಡಿವಾಣಕ್ಕೆ ಗೂಗಲ್ ಹೊಸ ಪ್ಲ್ಯಾನ್..!!

ಗೂಗಲ್ ಕೂಡಾ ಇದೇ ನಿಟ್ಟಿನಲ್ಲಿ ಪೂರ್ಣಪ್ರಮಾಣದ ಟೆಸ್ಟ್ ಡ್ರೈವಿಂಗ್ ನಡೆಸಿದ್ದು, ಅಂತಿಮ ಹಂತದ ರೂಪ ನೀಡುತ್ತಿದೆ. ಹೀಗಾಗಿ ಸದ್ಯದಲ್ಲೇ ಭಾರತೀಯ ಮಾರುಕಟ್ಟೆ ಪ್ರವೇಶಪಡೆಯಲಿದ್ದು ಗ್ರಾಹಕರ ಬೇಡಿಕೆಗಳಿಗೆ ತಕ್ಕಂತೆ ಸ್ಪಂದಿಸಲಿವೆ.

ಭಾರತಕ್ಕೆ ಬರಲಿದೆ ಚಾಲಕ ರಹಿತ ಕಾರು- ಟ್ರಾಫಿಕ್ ಕಡಿವಾಣಕ್ಕೆ ಗೂಗಲ್ ಹೊಸ ಪ್ಲ್ಯಾನ್..!!

ಇಷ್ಟೇಲ್ಲಾ ತುರ್ತು ಆವಿಷ್ಕಾರ ನಡೆದರೂ ಚಾಲಕರಹಿತ ಕಾರುಗಳ ಖರೀದಿಗೆ ಇನ್ನು ಸ್ಪಲ್ಪದಿನಗಳ ಕಾಯಲೇಬೇಕಿದೆ. 2020-21ರ ವೇಳೆಗೆ ನಿಮ್ಮ ಕೈಸೆರಲಿದ್ದು, ಚಾಲಕ ರಹಿತ ಕಾರುಗಳು ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಹೆಜ್ಜೆಗಳಿಗೆ ಕಾರಣವಾಗಲಿವೆ.

2017ರ ಮಾರುತಿ ಸ್ವಿಫ್ಟ್ ಹೊಚ್ಚ ಹೊಸ ಕಾರಿನ ಚಿತ್ರಗಳ ವೀಕ್ಷಣೆಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಗೂಗಲ್ google
English summary
Google will help change the experience of car ownership, which means safer roads with fewer accidents.
Please Wait while comments are loading...

Latest Photos