ಜಿಎಸ್‌ಟಿ ಎಫೆಕ್ಟ್- ಸಾರಿಗೆ ಬಸ್‌ಗಳಿಗೂ ತಟ್ಟಲಿದೆ ಬೆಲೆ ಬಿಸಿ..!

Written By:

ಜುಲೈ 1ರಿಂದ ಜಿಎಸ್‌ಟಿ(ಏಕರೂಪದ ತೆರಿಗೆ ನೀತಿ) ಜಾರಿಗೆ ತರಲು ಕೇಂದ್ರ ಸರ್ಕಾರ ಸಿದ್ಧತೆಯಲ್ಲಿದ್ದು, ಹೊಸ ತೆರಿಗೆ ಪದ್ದತಿಯಿಂದ ಸಾರಿಗೆ ಬಸ್‌ಗಳ ಬೆಲೆಗಳು ಹೆಚ್ಚಳವಾಗಲಿವೆ.

ಜಿಎಸ್‌ಟಿ ಜಾರಿಯಾಗುತ್ತಿರುವ ಹಿನ್ನೆಲೆ ಆಟೋ ಉದ್ಯಮದ ಮೇಲೆ ಅನುಕೂಲಕರ ಮತ್ತು ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಸಾರಿಗೆ ಬಸ್‌ಗಳ ಉತ್ಪಾದನೆ ಇನ್ಮುಂದೆ ದುಬಾರಿಯಾಗಲಿದೆ.

ಕೇಂದ್ರ ಸರ್ಕಾರ ಸಾರಿಗೆ ಬಸ್ ಉತ್ಪಾದನೆ ಮೇಲೆ ಶೇ.15ರಷ್ಟು ಸೆಸ್ ವಿಧಿಸುತ್ತಿದ್ದು, ಇದರ ಜೊತೆಗೆ ಶೇ.28ರಷ್ಟು ಜಿಎಸ್‌ಟಿ ತೆರಿಗೆಗೆ ನಿರ್ಧರಿಸಿದೆ.

ಇದರಿಂದ ಸಾರಿಗೆ ಬಸ್‌ಗಳ ಬೆಲೆಗಳು ಹಾಗೂ ಬಿಡಿಭಾಗಗಳು ಕೂಡಾ ದುಬಾರಿಯಾಗಲಿದ್ದು, ಸಾರಿಗೆ ಬಸ್ ಉತ್ಪಾದಕರು ಹೊಸ ತೆರಿಗೆ ನೀತಿಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದಕ್ಕೆ ಕಾರಣ ಒಂದು ಕಡೆ ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಸಾರಿಗೆ ವ್ಯವಸ್ಥೆಯನ್ನು ಪ್ರೋತ್ಸಾಹಿಸುತ್ತಿರುವ ಕೇಂದ್ರ ಸರ್ಕಾರವು ಅದೇ ವ್ಯವಸ್ಥೆ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವ ಅಸಮಂಜಸ ಎನ್ನಲಾಗುತ್ತಿದೆ.

ಈ ಬಗ್ಗೆ ಮಾತಾನಾಡಿರುವ "ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರ್"(ಎಸ್‌ಐಎಎಂ) ಅಧ್ಯಕ್ಷ ವಿಷ್ಣು ಮಥುರ್, ಹೊಸ ತೆರಿಗೆ ಪದ್ಧತಿಯಿಂದ ಸಾರಿಗೆ ಬಸ್ ಉತ್ಪಾದನೆ ಮೇಲೆ ಅನುಕೂಲಕರ ಪರಿಣಾಮ ಬೀರಲಿದೆ ಎಂದಿದ್ದಾರೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಸಾರಿಗೆ ವ್ಯವಸ್ಥೆ ಅಭಿವೃದ್ಧಿಯನ್ನು ಬೆಂಬಲಿಸುವ ಕೇಂದ್ರ ಸರ್ಕಾರವು ಹೆಚ್ಚುವರಿ ಸೆಸ್ ವಿಧಿಸುವ ಮೂಲಕ ಚರ್ಚೆಗೆ ಕಾರಣವಾಗಿದ್ದು, ಈ ಕೂಡಲೇ ಹೊಸ ತೆರಿಗೆ ಪದ್ಧತಿಯನ್ನು ಪರಾಮರ್ಶೆ ನಡೆಸುವ ಅವಶ್ಯಕತೆಯಿದೆ.

English summary
Read in Kannada about Transport Buses To Be Pricier after july 01.
Story first published: Friday, June 30, 2017, 17:03 [IST]
Please Wait while comments are loading...

Latest Photos