ಜಿಎಸ್‌ಟಿ ಎಫೆಕ್ಟ್- ಹೋಂಡಾ ಸಿಟಿ ಬೆಲೆಗಳಲ್ಲಿ ಭಾರೀ ಇಳಿಕೆ

Written By:

ಜುಲೈ 1ರಿಂದ ಜಿಎಸ್‌ಟಿ ಜಾರಿಯಾದ ಹಿನ್ನೆಲೆ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಹೋಂಡಾ ಮೋಟಾರ್ಸ್, ತನ್ನ ಹೋಂಡಾ ಸಿಟಿ ಕಾರು ಮಾದರಿಯ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ.

ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕಾರು ಉತ್ಪಾದನೆ ಮತ್ತು ಮಾರಾಟ ಮೇಲೆ ಶೇ.3 ರಷ್ಟು ತೆರಿಗೆ ಹಿಂಪಡೆದ ಹಿನ್ನೆಲೆ ಕಾರುಗಳ ಬೆಲೆಗಳು ಇಳಿಕೆಯಾಗಿದ್ದು, ಹೋಂಡಾ ಸಿಟಿ ಕಾರಿನ ಬೆಲೆಗಳನ್ನು ಕಡಿತಗೊಳಿಸಲಾಗಿದೆ.

ಜುಲೈ 1ರಿಂದಲೇ ಹೊಸ ದರಗಳು ಅನ್ವಯವಾಗುವಂತೆ ಹೊಸ ದರ ಪಟ್ಟಿ ಬಿಡುಗಡೆ ಮಾಡಿರುವ ಹೋಂಡಾ, ವಿವಿಧ ಮಾದರಿಗಳ ಮೇಲೆ 10 ಸಾವಿರದಿಂದ 1.31 ಲಕ್ಷದ ವರೆಗೆ ರಿಯಾಯ್ತಿ ಘೋಷಣೆ ಮಾಡಿದೆ.

ಹೀಗಾಗಿ ಹೋಂಡಾ ಸಿಟಿ ಸದ್ಯದ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ.8.46 ಲಕ್ಷದಿಂದ ರೂ. 13.43 ಲಕ್ಷ ಇದ್ದು, ಜುಲೈ 1ರಿಂದಲೇ ಹೊಸ ದರಗಳು ಚಾಲ್ತಿಯಲ್ಲಿವೆ.

ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಯಲ್ಲೂ ಹೋಂಡಾ ಸಿಟಿ ಮಾರಾಟಕ್ಕೆ ಲಭ್ಯವಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವ್ಯವಸ್ಥೆ ಹೊಂದಿವೆ.

ಇದರಿಂದಾಗಿ ಸೆಡಾನ್ ಮಾದರಿಗಳಲ್ಲಿ ಹೋಂಡಾ ಸಿಟಿ ಮಾರಾಟ ಪ್ರಮಾಣ ಮತ್ತಷ್ಟು ಹೆಚ್ಚಳವಾಗಲಿದ್ದು, ಕಳೆದ ಜೂನ್ ಮಾರಾಟ ದಾಖಲೆಯನ್ನು ಮತ್ತೊಮ್ಮೆ ಸರಿಗಟ್ಟಲಿದೆ.

English summary
Read in Kannada about Honda City Prices Reduced After GST.
Story first published: Saturday, July 8, 2017, 19:43 [IST]
Please Wait while comments are loading...

Latest Photos