1.3-ಲೀಟರ್ ಎಂಜಿನ್ ಉತ್ಪಾದನೆಯನ್ನು ಸ್ಥಗಿತಗೊಳಿಸಲು ಮುಂದಾದ ಫಿಯೆಟ್
ಭಾರತದಲ್ಲಿ ಈಗಾಗಲೇ ಕಠಿಣ ಮಾಲಿನ್ಯ ನಿಯಮಾವಳಿಗಳನ್ನು ವಿಧಿಸಿ ಕೇಂದ್ರ ಸರ್ಕಾರವು ಆದೇಶ ಹೊರಡಿಸಿದ್ದು, ಫಿಯಟ್ ಇಂಡಿಯಾ ಸಂಸ್ಥೆ ತನ್ನ ನೆಚ್ಚಿನ 1.3-ಲೀಟರ್ ಎಂಜಿನ್ ಉತ್ಪಾದನೆಯನ್ನು ಭಾರತದಲ್ಲಿ ಸ್ಥಗಿತಗೊಳ್ಳಲಿದೆ.
ಭಾರತದಲ್ಲಿ ಈಗಾಗಲೇ ಕಠಿಣ ಮಾಲಿನ್ಯ ನಿಯಮಾವಳಿಗಳನ್ನು ವಿಧಿಸಿ ಕೇಂದ್ರ ಸರ್ಕಾರವು ಆದೇಶ ಹೊರಡಿಸಿದ್ದು, ಫಿಯಟ್ ಇಂಡಿಯಾ ಸಂಸ್ಥೆ ತನ್ನ ನೆಚ್ಚಿನ 1.3-ಲೀಟರ್ ಎಂಜಿನ್ ಉತ್ಪಾದನೆಯನ್ನು ಭಾರತದಲ್ಲಿ ಸ್ಥಗಿತಗೊಳ್ಳಲಿದೆ.

ಭಾರತವು ಮುಂಬರುವ 2020ರ ಹೊತ್ತಿಗೆ ಭಾರತ್ ಸ್ಟೇಜ್ VI(ಬಿಎಸ್ VI) ಮಾಲಿನ್ಯದ ನಿಯಮಗಳಿಗೆ ಅಪ್ಡೇಟ್ ಆಗಲು ಈಗಾಗಲೇ ಯೋಜನೆ ರೂಪಿಸಿತ್ತಿದ್ದು, ಈ ಸಂದರ್ಭದಲ್ಲಿ ಹೊಸ ಕಠಿಣ ನಿಯಮಗಳಿಗೆ ಅನುಸರಿಸುವ ಯಾವುದೇ ರೀತಿಯ ಯೋಜನೆಗಳು ನಮ್ಮ ಮುಂದೆ ಇಲ್ಲ ಎಂದು ಫಿಯಟ್ ಸಂಸ್ಥೆ ಸ್ಪಷ್ಟಪಡಿಸಿದೆ.

ಫಿಯೆಟ್ ಕಂಪನಿಯು ಭಾರತದಲ್ಲಿ ಮಾರುತಿ ಮತ್ತು ಟಾಟಾ ಕಂಪನಿಗಳಿಗೆ 1.3-ಲೀಟರ್ ಡೀಸೆಲ್ ಎಂಜಿನ್ ಸರಬರಾಜು ಮಾಡುತ್ತಿದ್ದು, ಭವಿಷ್ಯದಲ್ಲಿ ಈ ಎರಡೂ ಸಂಸ್ಥೆಗಳೂ ಸಹ ತಮ್ಮ ಸ್ವಂತ ಎಂಜಿನ್ ಅಭಿವೃದ್ಧಿಪಡಿಸಲು ನಿರ್ಧರಿಸಿವೆ.

ಇದರೊಂದಿಗೆ, ಭವಿಷ್ಯದಲ್ಲಿ ಫಿಯೆಟ್ ಎಂಜಿನ್ ಖರೀದಿಸಲು ಯಾವುದೇ ಕಂಪನಿಗಳು ಮುಂದೆ ಬರದೇ ಇರುವುದು ಈ ನಿರ್ಧಾರ ಕೈಗೊಳ್ಳಲು ಪ್ರಮುಖ ಕಾರಣ ಎನ್ನಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಸ್ವಿಫ್ಟ್ ಸೇರಿದಂತೆ ಹಲವು ಕಾರುಗಳು 1.3 ಲೀಟರ್ ಡೀಸಲ್ ಎಂಜಿನ್ ಹೊಂದಿದ್ದು, ಆದಾಗ್ಯೂ, 2020ರಿಂದ, ಮಾರುತಿ ತನ್ನ ಎಲ್ಲ ಹೊಸ ಕಾರುಗಳಲ್ಲಿ 1.5-ಲೀಟರ್ ನಾಲ್ಕು-ಸಿಲಿಂಡರ್ ಸುಜುಕಿ ಎಂಜಿನ್ ಅಳವಡಿಸಲಿದೆ ಎನ್ನಲಾಗಿದೆ.

ಟಾಟಾ ಕಂಪನಿಯ ವಿಸ್ಟಾ, ಝೆಸ್ಟ್, ಮಂಝ ಮತ್ತು ಬೋಲ್ಟ್ ಕಾರುಗಳಲ್ಲಿ 1.3-ಲೀಟರ್ ಎಂಜಿನ್ ಇರಿಸಲಾಗಿದ್ದು, ಭವಿಷ್ಯದಲ್ಲಿ ಈ 1.3 ಎಂಜಿನ್ ಆಯ್ಕೆಯ ಬದಲಾಗಿ ಬೇರೆ ಎಂಜಿನ್ ಅಳವಡಿಸಲು ಟಾಟಾ ನಿರ್ಧರಿಸಿದೆ ಎನ್ನಲಾಗಿದೆ.

ಟಾಟಾ ಮೋಟಾರ್ಸ್ ಕೂಡ 1.3 ಲೀಟರ್ ಎಂಜಿನ್ ಕಾರುಗಳನ್ನು ಸ್ಥಗಿತಗೊಳಿಸಲಿದೆ ಎನ್ನಲಾಗಿದೆ. ಇತ್ತೀಚಿಗೆ, ಬಿಡುಗಡೆಯಾದ ಟಿಯಾಗೊ 1.05-ಲೀಟರ್ ಡೀಸೆಲ್ ಎಂಜಿನ್ ಈ ತಿಂಗಳು ಬಿಡುಗಡೆಯಾಗಲಿರುವ ನೆಕ್ಸನ್ ಕಾರು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿವೆ.


Click it and Unblock the Notifications








