ಚಾಲಕ ರಹಿತ ವಾಹನವನ್ನು ಅಭಿವೃದ್ಧಿಗೊಳಿಸಿದ ಇನ್ಪೋಸಿಸ್..!

Written By:

ಇತ್ತೀಚಿನ ದಿನಗಳಲ್ಲಿ ಚಾಲಕ ರಹಿತ ವಾಹನಗಳ ಉತ್ಪಾದನೆಗೆ ಭಾರೀ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಆವಿಷ್ಕಾರ ಮಾಡಿರುವ ಮಾಹಿತಿ ತಂತ್ರಜ್ಞಾನ ದಿಗ್ಗಜ ಇನ್ಫೋಸಿಸ್ ಸಂಸ್ಥೆಯು ಡ್ರೈವರ್ ಲೆಸ್ ಕಾರ್ಟ್ ಅಭಿವೃದ್ಧಿಗೊಳಿಸಿದೆ.

ಚಾಲಕ ರಹಿತ ವಾಹನವನ್ನು ಅಭಿವೃದ್ಧಿಗೊಳಿಸಿದ ಇನ್ಪೋಸಿಸ್..!

ಪ್ರತಿಷ್ಠಿತ ಇನ್ಪೋಸಿಸ್ ಸಂಸ್ಥೆಯ ಎಂಜನಿಯರ್ಸ್ ಸರ್ವಿಸ್ ಟೀಂ ಸದಸ್ಯರಿಂದ ಚಾಲಕ ರಹಿತ ಕಾರ್ಟ್ ಅಭಿವೃದ್ದಿಗೊಂಡಿದ್ದು, ಹೊಸ ಆವಿಷ್ಕಾರದ ಕುರಿತು ಇನ್ಪೋಸಿಸ್ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ವಿಶಾಲ್ ಸಿಕ್ಕಾ ಟ್ಪಿಟ್ ಮಾಡಿದ್ದಾರೆ.

ಮೈಸೂರಿನಲ್ಲಿರುವ ಇನ್ಪೋಸಿಸ್ ಕ್ಯಾಂಪಸ್‌ನಲ್ಲಿ ಈ ವಿಶೇಷ ಕಾರ್ಟ್ ಅನ್ನು ಪ್ರಾಯೋಗಿಕವಾಗಿ ಬಳಕೆ ಮಾಡಲಾಗುತ್ತಿದ್ದು, ಚಾಲಕ ರಹಿತವಾಗಿ ನಿಮಗೆ ಬೇಕೆಂದ ಸ್ಥಳಕ್ಕೆ ಹೋಗಬಹುದಾಗಿದೆ.

ಚಾಲಕ ರಹಿತ ವಾಹನವನ್ನು ಅಭಿವೃದ್ಧಿಗೊಳಿಸಿದ ಇನ್ಪೋಸಿಸ್..!

ಈ ಮೂಲಕ ಭವಿಷ್ಯದ ಯೋಜನೆಗಳ ಬಗ್ಗೆ ಸುಳಿವು ನೀಡಿರುವ ಇನ್ಪೋಸಿಸ್ ಸಂಸ್ಥೆಯ ಸಿಇಒ ವಿಶಾಲ್ ಸಿಕ್ಕಾ, ಚಾಲಕ ರಹಿತ ಕಾರ್ಟ್‌ನಲ್ಲಿನ ಅವಿಸ್ಮರಣಿಯ ಕ್ಷಣಗಳನ್ನು ಟ್ಪೀಟರ್ ಹಂಚಿಕೊಂಡಿದ್ದಾರೆ.

ಸಂವೇದಕಗಳ ಸಹಾಯದೊಂದಿಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿರುವ ಚಾಲಕ ರಹಿತ ಕಾರ್ಟ್‌ಗಳು, ಕೇಲವೇ ಕ್ಷಣಗಳಲ್ಲಿ ನೀವು ನಿರ್ದಿಷ್ಟವಾಗಿ ಗುರಿಪಡಿಸಿದ ಸ್ಥಾನ ಸಾಗಬಲ್ಲ ಶಕ್ತಿಯನ್ನು ಪಡೆದುಕೊಂಡಿವೆ.

ಚಾಲಕ ರಹಿತ ವಾಹನವನ್ನು ಅಭಿವೃದ್ಧಿಗೊಳಿಸಿದ ಇನ್ಪೋಸಿಸ್..!

ಈ ಹಿನ್ನೆಲೆ ಇನ್ಪೋಸಿಸ್ ಎಂಜಿನಿಯರ್ಸ್ ಸರ್ವೀಸ್ ಟೀಂ ಸಾಧನೆಗೆ ವಿಶೇಷ ಕೃತಜ್ಞತೆ ಸಲ್ಲಿಸಿರುವ ವಿಶಾಲ್ ಸಿಕ್ಕಾ, ಮುಂಬರುವ ದಿನಗಳಲ್ಲಿ ಇಸ್ಪೋಸಿಸ್ ಸಂಸ್ಥೆಯು ಅಟೋನೊಮಸ್‌ ತಂತ್ರಜ್ಞಾನ ಬೆಳವಣಿಗೆ ತನ್ನ ಗಮನಹರಿಸಲಿದೆ ಎಂಬ ಮಹತ್ಪದ ಸುಳಿವು ನೀಡಿದ್ದಾರೆ.

English summary
Read in Kannada about Infosys Develops Indigenous 'Driverless' Golf Cart.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark