ಭಾರತದಲ್ಲೇ ಜೋಡಣೆಗೊಂಡ ಜಾಗ್ವಾರ್ ಎಫ್-ಪೇಸ್ ಕಾರು ಬಿಡುಗಡೆ; ಬೆಲೆ ರೂ.60.02 ಲಕ್ಷ

Written By:

ಸ್ಥಳೀಯವಾಗಿ ಒಟ್ಟುಗೂಡಿಸಲಾಗಿರುವ ಜಾಗ್ವಾರ್ ಎಫ್-ಪೇಸ್ ಭಾರತದಲ್ಲಿ ಬಿಡುಗಡೆಯಾಗಿದೆ. ಹೊಸ ಜಾಗ್ವಾರ್ ಎಫ್-ಪೇಸ್ ಕಾರು ರೂ.60.02 ಲಕ್ಷ ಎಕ್ಸ್ ಶೋರೂಂ(ಇಂಡಿಯಾ)ದರದಲ್ಲಿ ಲಭ್ಯವಿದೆ.

ಭಾರತದಲ್ಲೇ ಜೋಡಣೆಗೊಂಡ ಜಾಗ್ವಾರ್ ಎಫ್-ಪೇಸ್ ಕಾರು ಬಿಡುಗಡೆ; ಬೆಲೆ ರೂ.60.02 ಲಕ್ಷ

ಎಫ್-ಪೇಸ್ ಕಾರಿನ 2.0-ಲೀಟರ್ ಪ್ರೆಸ್ಟೀಜ್ ರೂಪಾಂತರವು ಸಂಪೂರ್ಣ ಬಿಲ್ಟ್ ಯುನಿಟ್‌ಗೆ(ಸಿಬಿಯು) ಹೋಲಿಸಿದರೆ ಸುಮಾರು ರೂ.20 ಲಕ್ಷ ಕಡಿಮೆಯಾಗಿದೆ. ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಯು ಪುಣೆಯಲ್ಲಿರುವ ತನ್ನ ಘಟಕದಲ್ಲಿ ಎಫ್-ಪೇಸ್ ಕಾರನ್ನು ಜೋಡಿಸುವ ನಿರ್ಧಾರ ಕೈಗೊಂಡಿರುವುದು ಬೆಲೆ ಕಡಿತಕ್ಕೆ ಮುಖ್ಯ ಕಾರಣವಾಗಿದೆ.

ಭಾರತದಲ್ಲೇ ಜೋಡಣೆಗೊಂಡ ಜಾಗ್ವಾರ್ ಎಫ್-ಪೇಸ್ ಕಾರು ಬಿಡುಗಡೆ; ಬೆಲೆ ರೂ.60.02 ಲಕ್ಷ

ಹೆಚ್ಚು ಶಕ್ತಿಶಾಲಿಯಾಗಿರುವ ಜಾಗ್ವಾರ್ ಎಫ್-ಪೇಸ್ 30ಡಿ ಕಾರನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತೆ ಪರಿಚಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಾರತದಲ್ಲೇ ಜೋಡಣೆಗೊಂಡ ಜಾಗ್ವಾರ್ ಎಫ್-ಪೇಸ್ ಕಾರು ಬಿಡುಗಡೆ; ಬೆಲೆ ರೂ.60.02 ಲಕ್ಷ

ಜಾಗ್ವಾರ್ ಎಫ್-ಪೇಸ್ 20ಡಿ ಕಾರು 2.0 ಲೀಟರ್, ಟರ್ಬೊಚಾರ್ಜ್ಡ್, ನಾಲ್ಕು ಸಿಲಿಂಡರ್ ಇಂಜಿನಿಯಂ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದ್ದು, ಈ ಎಂಜಿನ್ 179 ಬಿಎಚ್‌ಪಿ ಮತ್ತು 430 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ ಹಾಗು 8 ಸ್ಪೀಡ್ ಆಟೊಮ್ಯಾಟಿಕ್ ಗೇರ್ ಬಾಕ್ಸ್ ಸಹಾಯದೊಂದಿಗೆ ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿ ಕಳುಹಿಸುತ್ತದೆ.

ಭಾರತದಲ್ಲೇ ಜೋಡಣೆಗೊಂಡ ಜಾಗ್ವಾರ್ ಎಫ್-ಪೇಸ್ ಕಾರು ಬಿಡುಗಡೆ; ಬೆಲೆ ರೂ.60.02 ಲಕ್ಷ

ಸ್ಥಳೀಯವಾಗಿ ಜಾಗ್ವಾರ್ ಎಫ್-ಪೇಸ್ 20ಡಿ ಕಾರನ್ನು ಜೋಡಿಸುವ ನಿರ್ಧಾರದೊಂದಿಗೆ ಜೆಎಲ್ಆರ್ ಕಂಪನಿಯು ಈ ಎಸ್‌ಯುವಿ ಕಾರಿನ ಬೆಲೆಯನ್ನು ಕಡಿಮೆಗೊಳಿಸುವ ಮೂಲಕ ತನ್ನ ಪ್ರತಿಸ್ಪರ್ಧಿಗಳಿಗೆ ಎಚ್ಚರಿಕೆಯ ಗಂಟೆಯನ್ನು ನೀಡಿದೆ ಎನ್ನಬಹುದು.

English summary
Locally assembled Jaguar F-Pace launched in India. The new Jaguar F-Pace is priced at Rs 60.02 lakh ex-showroom (India).

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark