ಹಗಲಿನ ವೇಳೆ ವಾಹನದ ಹೆಡ್‌ಲೈಟ್ ಆನ್ ಮಾಡಿಕೊಂಡು ವಾಹನ ಚಲಾಯಿಸಿ ಎಂದ ಜಾರ್ಖಂಡ್ ಸರ್ಕಾರ

Written By:

2018ರ ಜನವರಿಯಿಂದ ಹಗಲಿನ ವೇಳೆಯಲ್ಲಿ ತಮ್ಮ ವಾಹನಗಳ ಹೆಡ್‌ಲೈಟ್‌ಗಳನ್ನು ಆನ್ ಮಾಡಿಕೊಂಡು ಚಲಾಯಿಸಬೇಕು ಎಂದು ಜಾರ್ಖಂಡ್ ಮುಖ್ಯಮಂತ್ರಿ, ರಘುಬರ್ ದಾಸ್ ಅವರು ಎಲ್ಲಾ ವಾಹನ ಚಾಲಕರಿಗೆ ನಿರ್ದೇಶನ ನೀಡಿದ್ದಾರೆ.

ಹಗಲಿನ ವೇಳೆ ವಾಹನದ ಹೆಡ್‌ಲೈಟ್ ಆನ್ ಮಾಡಿಕೊಂಡು ವಾಹನ ಚಲಾಯಿಸಿ ಎಂದ ಜಾರ್ಖಂಡ್ ಸರ್ಕಾರ

ರಾಜ್ಯದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಇದನ್ನು ಕಡಿಮೆಗೊಳಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇದಲ್ಲದೆ, ಹೆದ್ದಾರಿಗಳಲ್ಲಿ ಟ್ರಾಮಾ ಸೆಂಟರ್‌ಗಳನ್ನು ಸ್ಥಾಪಿಸಲು ಯೋಜಿಸಲಾಗಿದ್ದು, ಈ ಮೂಲಕ ಅಪಘಾತಗಳಿಗೆ ಬೇಗ ಚಿಕಿತ್ಸೆ ನೀಡಲು ಉದ್ದೇಶಿಸಲಾಗಿದೆ.

ಹಗಲಿನ ವೇಳೆ ವಾಹನದ ಹೆಡ್‌ಲೈಟ್ ಆನ್ ಮಾಡಿಕೊಂಡು ವಾಹನ ಚಲಾಯಿಸಿ ಎಂದ ಜಾರ್ಖಂಡ್ ಸರ್ಕಾರ

ರಸ್ತೆ ಸುರಕ್ಷತಾ ಮಂಡಳಿಯ ಸಭೆಯಲ್ಲಿ, "ಹಗಲಿನ ವೇಳೆಯಲ್ಲಿ ವಾಹನಗಳು ಹೆಡ್ ಲೈಟ್‌ಗಳನ್ನು ಆನ್ ಸ್ಥಿತಿಯಲ್ಲಿ ಇರಿಸಬೇಕು" ಎಂದು ಮುಖ್ಯಮಂತ್ರಿ ನಿರ್ದೇಶಿಸಿದ್ದಾರೆ. ಈ ನಿಯಮವನ್ನು ಗ್ರಾಮೀಣ ಪ್ರದೇಶದಲ್ಲಿಯೂ ಜಾರಿಗೆ ತರಲಾಗಿದೆ.

ಹಗಲಿನ ವೇಳೆ ವಾಹನದ ಹೆಡ್‌ಲೈಟ್ ಆನ್ ಮಾಡಿಕೊಂಡು ವಾಹನ ಚಲಾಯಿಸಿ ಎಂದ ಜಾರ್ಖಂಡ್ ಸರ್ಕಾರ

ಹೆಲ್ಮೆಟ್ ಧರಿಸದೇ ಇರುವುದು, ಕುಡಿದು ವಾಹನ ಚಲಾಯಿಸುವುದು ಮತ್ತು ಹೈ ಸ್ಪೀಡ್ ಡ್ರೈವಿಂಗ್‌ನಿಂದ ರಾಜ್ಯದಲ್ಲಿ ಅಪಘಾತಗಳ ಸಂಖ್ಯೆಯು ಹೆಚ್ಚಾಗಿದ್ದು, ಎಡಕ್ಕೆ ಕಡಿವಾಣ ಹಾಕಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಹಗಲಿನ ವೇಳೆ ವಾಹನದ ಹೆಡ್‌ಲೈಟ್ ಆನ್ ಮಾಡಿಕೊಂಡು ವಾಹನ ಚಲಾಯಿಸಿ ಎಂದ ಜಾರ್ಖಂಡ್ ಸರ್ಕಾರ

ದ್ವಿಚಕ್ರ ವಾಹನವನ್ನು ಬಳಸುವ ರೈಡರ್ ಮತ್ತು ಹಿಂಬದಿಯ ಸವಾರ ಇಬ್ಬರೂ ಸಹ ಹೆಲ್ಮೆಟ್ ಧರಿಸುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಮುಖ್ಯಮಂತ್ರಿಯವರು ನಿರ್ದೇಶನ ನೀಡಿದ್ದಾರೆ. ಹೈವೆ ಪೆಟ್ರೋಲ್‌ಗಳಿಗೆ Breath-analyzers ಸೌಲಭ್ಯವನ್ನು ಸಹ ನೀಡಲು ಯೋಜಿಸಲಾಗಿದೆ.

ಹಗಲಿನ ವೇಳೆ ವಾಹನದ ಹೆಡ್‌ಲೈಟ್ ಆನ್ ಮಾಡಿಕೊಂಡು ವಾಹನ ಚಲಾಯಿಸಿ ಎಂದ ಜಾರ್ಖಂಡ್ ಸರ್ಕಾರ

ಭಾರತದಲ್ಲಿ ಈಗ ತಯಾರಾಗುತ್ತಿರುವ ಹೊಸ ಕಾರುಗಳಲ್ಲಿ ಡಿಆರ್‌ಎಲ್ (ಡೇಟೈಮ್ ರನ್ನಿಂಗ್ ಲೈಟ್ಸ್) ಅಳವಡಿಕೆಯು ಕಡ್ಡಾಯವಾಗಿದ್ದು, ಈ ನಿಯಮ ಹಳೆಯ ವಾಹನಗಳಿಗೆ ಮಾತ್ರ ಅನ್ವಯಿಸಲಿದೆ.

ಹಗಲಿನ ವೇಳೆ ವಾಹನದ ಹೆಡ್‌ಲೈಟ್ ಆನ್ ಮಾಡಿಕೊಂಡು ವಾಹನ ಚಲಾಯಿಸಿ ಎಂದ ಜಾರ್ಖಂಡ್ ಸರ್ಕಾರ

ಆದಾಗ್ಯೂ, ಯಾವಾಗಲೂ ಸಹ ಹೆಡ್‌ಲೈಟ್ ಚಾಲನಾ ಸ್ಥಿತಿಯಲ್ಲಿ ಇಡುವುದರಿಂದ ಹಳೆಯ ವಾಹನಗಳ ಮಾಲೀಕರು ಇನ್ನು ಮುಂದೆ ಕಾರಿನ ಬ್ಯಾಟರಿ ಬಗ್ಗೆ ಹೆಚ್ಚು ಗಮನ ಹರಿಸಬೇಕಾದ ಅಗತ್ಯ ಇದ್ದು, ಇಲ್ಲದೆ ಹೋದರೆ ಕಾರಿನ ಇತರ ವಿದ್ಯುತ್ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಬಹುದು.

English summary
Vehicles Should Keep Headlights ON During Daytime. Says Jharkhand Government.
Story first published: Thursday, December 7, 2017, 17:29 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark