ಮಹೀಂದ್ರಾ ಸ್ಕಾರ್ಪಿಯೊ ಫೇಸ್‌ಲಿಸ್ಟ್ ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ. 9.97 ಲಕ್ಷ

Written By:

ಭಾರತದಲ್ಲಿ ಮಹೀಂದ್ರಾ ಸಂಸ್ಥೆಯು ತನ್ನ ಸ್ಕಾರ್ಪಿಯೊ ಕಾರಿನ ಫೇಸ್‌ಲಿಫ್ಟ್ ಆವೃತಿಯನ್ನು ಬಿಡುಗಡೆಗೊಳಿಸಿದೆ. ಈ ಸುಧಾರಿತ ಎಸ್‌ಯುವಿ ಕಾರು ರೂ. 9.97 ಲಕ್ಷ ಎಕ್ಸ್ ಶೋರೂಂ ದೆಹಲಿ ಬೆಲೆಯೊಂದಿಗೆ ಪ್ರಾರಂಭವಾಗುತ್ತದೆ.

ಮಹೀಂದ್ರಾ ಸ್ಕಾರ್ಪಿಯೊ ಫೇಸ್‌ಲಿಸ್ಟ್ ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ. 9.97 ಲಕ್ಷ

ಕೆಲವು ಸೌಂದರ್ಯವರ್ಧಕ ಅಂಶಗಳು ಮತ್ತು ಯಾಂತ್ರಿಕ ಬದಲಾವಣೆಗಳ ಹೊರತಾಗಿ, 2018ರ ಸ್ಕಾರ್ಪಿಯೊ ಕಾರು ಯಾವುದೇ ರೀತಿಯ ಬದಲಾವಣೆಗಳನ್ನು ಪಡೆದುಕೊಂಡಿಲ್ಲ. ಎಸ್ಆರ್ 3(75 ಬಿಎಚ್‌ಪಿ), ಎಸ್5, ಎಸ್7(120 ಬಿಎಚ್‌ಪಿ), ಎಸ್7(140 ಬಿಎಚ್‌ಪಿ), ಎಸ್11(140 ಬಿಎಚ್‌ಪಿ) ಮತ್ತು ಎಸ್11(140 ಬಿಎಚ್ಪಿ 4WD)ಎಂಬ 6 ಮಾದರಿಗಳಲ್ಲಿ ಈ ಕಾರು ಬಿಡುಗಡೆಯಾಗಿದೆ.

ಮಹೀಂದ್ರಾ ಸ್ಕಾರ್ಪಿಯೊ ಫೇಸ್‌ಲಿಸ್ಟ್ ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ. 9.97 ಲಕ್ಷ

ಹೆಚ್ಚು ಶಕ್ತಿಶಾಲಿ ಡೀಸಲ್ ಎಂಜಿನ್ 6 ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಪಡೆಯುತ್ತದೆ. ಈಗಲೂ ಸಹ ಸ್ಕಾರ್ಪಿಯೊ ಲೈನ್-ಅಪ್‌ನಲ್ಲಿ ಸ್ವಯಂಚಾಲಿತ ಗೇರ್‌ಬಾಕ್ಸ್ ಕಾಣಿಸುವುದಿಲ್ಲ. ಹೆಚ್ಚುವರಿ ಶಕ್ತಿಯನ್ನು ನಿರ್ವಹಿಸಲು ದೊಡ್ಡದಾಗಿರುವ ಬ್ರೇಕ್ ಬೂಸ್ಟರ್ ಇರಿಸಲಾಗಿದೆ.

ಮಹೀಂದ್ರಾ ಸ್ಕಾರ್ಪಿಯೊ ಫೇಸ್‌ಲಿಸ್ಟ್ ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ. 9.97 ಲಕ್ಷ

ಕಾಸ್ಮೆಟಿಕ್ ಬದಲಾವಣೆಗಳ ವಿಷಯದಲ್ಲಿ, 2018 ಸ್ಕಾರ್ಪಿಯೊ ಕಾರು ಪರಿಷ್ಕೃತ ಮುಂಭಾಗ ಮತ್ತು ಹಿಂಭಾಗದ ಕೊನೆಯಲ್ಲಿ ವಿನ್ಯಾಸಗಳನ್ನು ಪಡೆಯುತ್ತದೆ. ಹಳೆಯ ಆವೃತ್ತಿಯಲ್ಲಿರುವ ಹಳೆಯ ಅಲಾಯ್ ವೀಲ್‌ಗಳ ಬದಲಾಗಿ ಹೊಸ ವೀಲ್‌ಗಳನ್ನು ನೀಡಲಾಗಿದೆ.

ಮಹೀಂದ್ರಾ ಸ್ಕಾರ್ಪಿಯೊ ಫೇಸ್‌ಲಿಸ್ಟ್ ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ. 9.97 ಲಕ್ಷ

ಹೊಸ ಫೇಸ್‌ಲಿಫ್ಟ್ ಮಾದರಿಯು ಕಾಸ್ಮೆಟಿಕ್ ಅಪ್‌ಡೇಟ್ ಹೊಂದಿದೆ ಎಂಬುದು ಸ್ಪಷ್ಟವಾಗಿದೆ. ಹೊಸ ಸ್ಕಾರ್ಪಿಯೋ ಕಾರು ನವೀನ ಗ್ರಿಲ್‌ನೊಂದಿಗೆ ಮುಂಭಾಗದ ಪ್ರೊಫೈಲ್ ಪುನರ್ವಿನ್ಯಾಸಗೊಂಡಿದೆ. ಮುಂಭಾಗದ ಬಂಪರ್ ಹೊಸ ಕೇಂದ್ರೀಕೃತ ಸೆಂಟ್ರಲ್ ಏರ್-ಡ್ಯಾಮ್‌ನೊಂದಿಗೆ ಪರಿಷ್ಕೃತ ಶೈಲಿಯನ್ನು ಪಡೆಯುತ್ತದೆ.

ಮಹೀಂದ್ರಾ ಸ್ಕಾರ್ಪಿಯೊ ಫೇಸ್‌ಲಿಸ್ಟ್ ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ. 9.97 ಲಕ್ಷ

ಹೊಸ ಸ್ಕಾರ್ಪಿಯೊ ಫೇಸ್‌ಲಿಫ್ಟ್ ಕಾರು ಹೊಸ ಪ್ರೀಮಿಯಂ ಪರ್ಲ್‌ ವೈಟ್(ಎಸ್ 11), ಡೈಮಂಡ್ ವೈಟ್(ಎಸ್11 ಹೊರತುಪಡಿಸಿ), ನಪೋಲಿ ಬ್ಲ್ಯಾಕ್, ಡಿ ಸ್ಯಾಟ್ ಸಿಲ್ವರ್ ಮತ್ತು ಮೊಲ್ಟನ್ ರೆಡ್ ಎಂಬ ಐದು ವಿಭಿನ್ನ ಬಣ್ಣಗಳ ಆಯ್ಕೆಗಳಲ್ಲಿ ಅನಾವರಣಗೊಂಡಿದೆ.

ಮಹೀಂದ್ರಾ ಸ್ಕಾರ್ಪಿಯೊ ಫೇಸ್‌ಲಿಸ್ಟ್ ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ. 9.97 ಲಕ್ಷ

ಕ್ಯಾಬಿನ್ ಒಳಗೆ, ಮಹೀಂದ್ರಾ ಕಂಪನಿಯು ಗಮನಾರ್ಹ ಬದಲಾವಣೆಗಳನ್ನು ಮಾಡಿದೆ, ಸ್ಕಾರ್ಪಿಯೊ ಫೇಸ್‌ಲಿಫ್ಟ್ ಒಳಾಂಗಣವು ಫಾಕ್ಸ್ ಚರ್ಮದ ಅಳವಡಿಕೆ ಮತ್ತು ಪರಿಷ್ಕೃತ ಡ್ಯಾಶ್‌ಬೋರ್ಡ್ ಹೊಂದಿದ್ದು, ಇದೀಗ ಜಿಪಿಎಸ್ ನ್ಯಾವಿಗೇಶನ್‌ನೊಂದಿಗೆ 6 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಪಡೆದು ಹೆಚ್ಚು ಆಧುನಿಕ ಶೈಲಿಯನ್ನು ತನ್ನದಾಗಿಸಿಕೊಂಡಿದೆ.

ಮಹೀಂದ್ರಾ ಸ್ಕಾರ್ಪಿಯೊ ಫೇಸ್‌ಲಿಸ್ಟ್ ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ. 9.97 ಲಕ್ಷ

ಮಹೀಂದ್ರಾ ಡೈನಾಮಿಕ್ ಸಹಾಯಕ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, 1 ಟಚ್ ಲೇನ್ ಚೇಂಜ್ ಇಂಡಿಕೇಟರ್, ಆಟೋ ವಿಂಡೊ ರೋಲ್-ಅಪ್, ಜಿಪಿಎಸ್ ನ್ಯಾವಿಗೇಷನ್ ಸೇರಿದಂತೆ 10 ಭಾಷೆಗಳಲ್ಲಿ ಸಹಾಯದೊಂದಿಗೆ ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ.

ಮಹೀಂದ್ರಾ ಸ್ಕಾರ್ಪಿಯೊ ಫೇಸ್‌ಲಿಸ್ಟ್ ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ. 9.97 ಲಕ್ಷ

2017 ಮಹೀಂದ್ರಾ ಸ್ಕಾರ್ಪಿಯೊ ಫೇಸ್‌ಲಿಫ್ಟ್ ಎಂದಿನಂತೆ 2.2-ಲೀಟರ್ ಎಂವ್ಯಾಕ್ ಡೀಸೆಲ್ ಎಂಜಿನ್ ಹೊಂದಿದೆ. ಆದರೆ ಈ ಎಂಜಿನ್ ಅಸ್ತಿತ್ವದಲ್ಲಿರುವ 120 ಬಿಎಚ್‌ಪಿ ಆವೃತ್ತಿ ಮತ್ತು ಟ್ಯೂನ್ಡ್ 140 ಬಿಎಚ್‌ಪಿ ಆವೃತ್ತಿಯಲ್ಲಿ ಬಿಡುಗಡೆಗೊಂಡಿದೆ.

ಮಹೀಂದ್ರಾ ಸ್ಕಾರ್ಪಿಯೊ ಫೇಸ್‌ಲಿಸ್ಟ್ ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ. 9.97 ಲಕ್ಷ

ಹೊಸ ಸ್ಕಾರ್ಪಿಯೋಯೊ ಕಾರು ಉತ್ತಮವಾದ ಎನ್‌ವಿಎಚ್ ಮಟ್ಟವನ್ನು ಹೊಂದಿದೆ ಮತ್ತು ಹೊಸ 6ನೇ ಪೀಳಿಗೆಯ ಬೋರ್ಗ್ ವಾರ್ನರ್ ಟರ್ಬೊ ಚಾರ್ಜರ್ ಹಾಗು 9.1 ಬಾಷ್ ಎಬಿಎಸ್ ಸೌಕರ್ಯದ ಜೊತೆ ಬಿಡುಗಡೆಯಾಗಿದೆ ಎಂದು ಕಂಪನಿಯು ಹೇಳಿದೆ.

ಮಹೀಂದ್ರಾ ಸ್ಕಾರ್ಪಿಯೊ ಫೇಸ್‌ಲಿಸ್ಟ್ ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ. 9.97 ಲಕ್ಷ

2017ರ ಮಹೀಂದ್ರಾ ಕಂಪನಿಯ ಸ್ಕಾರ್ಪಿಯೊ ಕಾರು ಈಗ ಹೆಚ್ಚು ಶಕ್ತಿಯುತವಾಗಿದೆ ಮತ್ತು ಟಾಟಾ ಸಫಾರಿ ಸ್ಟಾರ್ಮ್, ರೆನಾಲ್ಟ್ ಡಸ್ಟರ್, ಕ್ಯಾಪ್ಟರ್ ಮತ್ತು ಹ್ಯುಂಡೈ ಕ್ರೆಟಾದಂತಹ ಪ್ರಸಿದ್ಧ ಕಾರುಗಳೊಂದಿಗೆ ಸ್ಪರ್ಧಿಸಲು ಸಜ್ಜುಗೊಂಡಿದೆ.

English summary
2017 Mahindra Scorpio facelift launched in India. Prices for the new Mahindra Scorpio facelift start at Rs 9.97 lakh ex-showroom (Delhi).

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark