ಬಿಡುಗಡೆಗೊಳ್ಳಲಿರುವ ಹೊಸ ಸ್ಕಾರ್ಪಿಯೊ ಫೇಸ್‌ಲಿಸ್ಟ್ ಕಾರಿನ ಬಗ್ಗೆ ಮಾಹಿತಿ ಇಲ್ಲಿದೆ

Written By:

2002ರಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕಾರನ್ನು ಮೊದಲ ಬಾರಿಗೆ ಪ್ರಾರಂಭಿಸಿತ್ತು ಮತ್ತು ಈ ಎಸ್‌ಯುವಿ ಕಾರು ಕಂಪೆನಿಯ ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿದೆ. ಈ ಕಾರಿನ ಫೇಸ್ ಲಿಫ್ಟ್ ಮಾದರಿಯನ್ನು ಸದ್ಯದರಲ್ಲಿಯೇ ಬಿಡುಗಡೆಗೊಳಿಸಲಿದೆ.

ಬಿಡುಗಡೆಗೊಳ್ಳಲಿರುವ ಹೊಸ ಸ್ಕಾರ್ಪಿಯೊ ಫೇಸ್‌ಲಿಸ್ಟ್ ಕಾರಿನ ಬಗ್ಗೆ ಮಾಹಿತಿ ಇಲ್ಲಿದೆ

ಮಹೀಂದ್ರಾ ಸಂಸ್ಥೆಯು 2006ರಲ್ಲಿ ಎರಡನೇ ತಲೆಮಾರಿನ ಸ್ಕಾರ್ಪಿಯೋ ಕಾರನ್ನು ಪರಿಚಯಿಸಿತ್ತು ಮತ್ತು 2014ರಲ್ಲಿ ಮೂರನೆಯ ತಲೆಮಾರಿನೊಂದಿಗೆ ಮತ್ತಷ್ಟು ಜನಕ್ಕೆ ಹತ್ತಿರವಾಯಿತು ಎನ್ನಬಹುದು. ಈ ವರ್ಷದ ನವೆಂಬರ್ 14ರಂದು ಮಹೀಂದ್ರಾ ಫೇಸ್‌ಲಿಸ್ಟ್ ಸ್ಕಾರ್ಪಿಯೋವನ್ನು ಪ್ರಾರಂಭಿಸಲು ಸಿದ್ಧವಾಗಿದೆ.

ಬಿಡುಗಡೆಗೊಳ್ಳಲಿರುವ ಹೊಸ ಸ್ಕಾರ್ಪಿಯೊ ಫೇಸ್‌ಲಿಸ್ಟ್ ಕಾರಿನ ಬಗ್ಗೆ ಮಾಹಿತಿ ಇಲ್ಲಿದೆ

ಹಾಗಾದ್ರೆ ಹೊಸ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಕಾರಿನಲ್ಲಿ ಯಾವ ಯಾವ ಬದಲಾವಣೆಗಳನ್ನು ಪಡೆದುಕೊಂಡಿದೆ ? ಮಹೀಂದ್ರಾ ಕಾಸ್ಮೆಟಿಕ್ ಅಪ್‌ಡೇಟ್ ಮಾತ್ರ ನೀಡುತ್ತಿದೆಯೇ ಅಥವಾ ಹೆಚ್ಚಿನ ಬದಲಾವಣೆಗಳನ್ನು ಹೊಂದಲಿದೆಯೇ ? ತಿಳಿದುಕೊಳ್ಳೋಣ.

ಬಿಡುಗಡೆಗೊಳ್ಳಲಿರುವ ಹೊಸ ಸ್ಕಾರ್ಪಿಯೊ ಫೇಸ್‌ಲಿಸ್ಟ್ ಕಾರಿನ ಬಗ್ಗೆ ಮಾಹಿತಿ ಇಲ್ಲಿದೆ

ಡಿಸೈನ್ :

ಹೊಸ ಫೇಸ್‌ಲಿಫ್ಟ್ ಮಾದರಿಯು ಕಾಸ್ಮೆಟಿಕ್ ಅಪ್‌ಡೇಟ್ ಹೊಂದಿದೆ ಎಂಬುದು ಸ್ಪಷ್ಟವಾಗಿದೆ. ಹೊಸ ಸ್ಕಾರ್ಪಿಯೋ ಕಾರು ನವೀನ ಗ್ರಿಲ್‌ನೊಂದಿಗೆ ಮುಂಭಾಗದ ಪ್ರೊಫೈಲ್ ಪುನರ್ವಿನ್ಯಾಸಗೊಂಡಿದೆ.

ಬಿಡುಗಡೆಗೊಳ್ಳಲಿರುವ ಹೊಸ ಸ್ಕಾರ್ಪಿಯೊ ಫೇಸ್‌ಲಿಸ್ಟ್ ಕಾರಿನ ಬಗ್ಗೆ ಮಾಹಿತಿ ಇಲ್ಲಿದೆ

ಮುಂಭಾಗದ ಬಂಪರ್ ಹೊಸ ಕೇಂದ್ರೀಕೃತ ಸೆಂಟ್ರಲ್ ಏರ್-ಡ್ಯಾಮ್‌ನೊಂದಿಗೆ ಪರಿಷ್ಕೃತ ಶೈಲಿಯನ್ನು ಪಡೆಯುತ್ತದೆ ಮತ್ತು ಜಾಲರಿಯಂತಹ ಗ್ರಿಲ್ ಜೊತೆಗೆ ಹೊಸ ಸ್ಕಾರ್ಪಿಯೊದ ಮುಂಭಾಗದ ಪ್ರೊಫೈಲ್ ಮೊದಲಿನಷ್ಟು ಅಗಲವಾಗಿರುತ್ತದೆ.

ಬಿಡುಗಡೆಗೊಳ್ಳಲಿರುವ ಹೊಸ ಸ್ಕಾರ್ಪಿಯೊ ಫೇಸ್‌ಲಿಸ್ಟ್ ಕಾರಿನ ಬಗ್ಗೆ ಮಾಹಿತಿ ಇಲ್ಲಿದೆ

ಸ್ಕಾರ್ಪಿಯೋ ಫೇಸ್‌ಲಿಫ್ಟ್ ಕಾರಿನ ಸೈಡ್ ಪ್ರೊಫೈಲ್ ಹಿಂದಿನ ಮಾದರಿಗೆ ಹೋಲುತ್ತದೆ. ಆದಾಗ್ಯೂ, ಎಸ್‌ಯುವಿ ಹೊಸ ಮತ್ತು ನವೀಕರಿಸಿದ ಮಿಶ್ರಲೋಹದ ಚಕ್ರಗಳನ್ನು ಪಡೆಯುತ್ತದೆ. ಹಿಂಭಾಗದಲ್ಲಿ, ಹಿಂದಿನ ಮಾದರಿಯಲ್ಲಿ ಕಂಡು ಬರುವ ಹಿಂಭಾಗದ ಟೈಲ್‌ಗೇಟ್ ಮತ್ತು ಬಾಹ್ಯರೇಖೆಗಳನ್ನು ಕಳೆದುಕೊಳ್ಳುತ್ತದೆ.

ಬಿಡುಗಡೆಗೊಳ್ಳಲಿರುವ ಹೊಸ ಸ್ಕಾರ್ಪಿಯೊ ಫೇಸ್‌ಲಿಸ್ಟ್ ಕಾರಿನ ಬಗ್ಗೆ ಮಾಹಿತಿ ಇಲ್ಲಿದೆ

ಒಳಭಾಗ :

ಮಹೀಂದ್ರಾ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಎಕ್ಸ್‌ಯುವಿ 500 ಮಾದರಿಯ ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಸೇರಿದಂತೆ ಇತರ ವೈಶಿಷ್ಟ್ಯತೆಗಳನ್ನು ಒಳಗೊಂಡ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್‌ನೊಂದಿಗೆ ಬರಲಿದೆ.

ಬಿಡುಗಡೆಗೊಳ್ಳಲಿರುವ ಹೊಸ ಸ್ಕಾರ್ಪಿಯೊ ಫೇಸ್‌ಲಿಸ್ಟ್ ಕಾರಿನ ಬಗ್ಗೆ ಮಾಹಿತಿ ಇಲ್ಲಿದೆ

ಪ್ರಸ್ತುತ ಮಾದರಿಯು ಕೆಳ ಮತ್ತು ಮಧ್ಯದ ಮಾದರಿಯಲ್ಲಿ ಏರ್‌ಬ್ಯಾಗ್ ನೀಡುವುದಿಲ್ಲ ಆದರೆ ಹೊಸ ಕಾರು ಈ ಹೊಸ ಸೌಲಭ್ಯಗಳನ್ನು ಹೊಂದಬಹುದು. ಎಬಿಎಸ್ ಜೊತೆಗೆ ಇಬಿ ನಾವು ನಿರೀಕ್ಷಿಸಬಹುದಾಗಿದೆ.

ಬಿಡುಗಡೆಗೊಳ್ಳಲಿರುವ ಹೊಸ ಸ್ಕಾರ್ಪಿಯೊ ಫೇಸ್‌ಲಿಸ್ಟ್ ಕಾರಿನ ಬಗ್ಗೆ ಮಾಹಿತಿ ಇಲ್ಲಿದೆ

ಎಂಜಿನ್ :

ಹೊಸ ಮಹೀಂದ್ರಾ ಸ್ಕಾರ್ಪಿಯೋ ಫೇಸ್ ಲಿಫ್ಟ್ ಕಾರಿನ ಎಂಜಿನ್‌ನಲ್ಲಿ ಗಮನಾರ್ಹ ಬದಲಾವಣೆಯನ್ನು ನಿರೀಕ್ಷಿಸಲಾಗಿದೆ. ಹೊಸ ಸ್ಕಾರ್ಪಿಯೋ 2.2-ಲೀಟರ್ ಎಂಹಾಕ್ ಡೀಸೆಲ್ ಎಂಜಿನ್ ಹೊಂದಲಿದ್ದು, ಹಳೆಯ ಮಾದರಿಗಿಂತ 20 ಬಿಎಚ್‌ಪಿಯಷ್ಟು ಹೆಚ್ಚು ಶಕ್ತಿ ಉತ್ಪಾದಿಸುತ್ತದೆ ಮತ್ತು 280 ಎನ್‌ಎಂ ಟಾರ್ಕ್ ಮುಂದುವರಿಸುತ್ತದೆ.

English summary
Mahindra is all set to launch the facelifted Scorpio on November 14, 2017. So what are the changes to the new Scorpio facelift? Is Mahindra offering only a cosmetic upgrade or are there more changes? Let us find out what Mahindra has to offer on the Scorpio facelift.
Story first published: Monday, November 13, 2017, 18:37 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark