ಹೊಸ ಎಂಜಿನ್ ಆಯ್ಕೆ ಪಡೆಯಲಿವೆ ಸಿಯಾಜ್, ಎರ್ಟಿಗಾ ಮತ್ತು ಎಸ್-ಕ್ರಾಸ್ ಕಾರುಗಳು

Written By:

ಮೂಲಗಳ ಪ್ರಕಾರ ಭಾರತದಲ್ಲಿ ಮಾರಾಟವಾಗುತ್ತಿರುವ ಮಾರುತಿ ಸಿಯಾಜ್, ಎರ್ಟಿಗಾ ಮತ್ತು ಎಸ್-ಕ್ರಾಸ್ ಮಾದರಿಗಳು ಹೊಸ 1.5 ಲೀಟರ್ ಪೆಟ್ರೋಲ್ ಇಂಜಿನ್‌ಗಳನ್ನು ಪಡೆಯಲಿವೆ ಎಂದು ಕಂಪನಿ ಅಧಿಕೃತ ಮಾಹಿತಿ ಹೊರ ಬಂದಿದೆ.

ಹೊಸ ಎಂಜಿನ್ ಆಯ್ಕೆ ಪಡೆಯಲಿವೆ ಸಿಯಾಜ್, ಎರ್ಟಿಗಾ ಮತ್ತು ಎಸ್-ಕ್ರಾಸ್ ಕಾರುಗಳು

ಹೊಸ ಪೆಟ್ರೋಲ್ ಇಂಜಿನ್ ಮತ್ತು ಫೇಸ್‌ಲಿಫ್ಟ್ ಆಯ್ಕೆಯ ಸಿಯಾಜ್ ಕಾರು 2018ರಲ್ಲಿ ಪ್ರಾರಂಭವಾಗಲಿದೆ ಹಾಗು ಭಾರತದಲ್ಲಿ ಇಲ್ಲಿಯವರೆಗೆ ಕೇವಲ ಡೀಸೆಲ್ ಮಾದರಿಯ ಎಸ್-ಕ್ರಾಸ್ ಕಾರನ್ನು ಮಾರಾಟ ಮಾಡುತ್ತಿದ್ದು, ಮುಂದಿನ ವರ್ಷದಲ್ಲಿ ಎಸ್-ಕ್ರಾಸ್ ಪೆಟ್ರೋಲ್ ಇಂಜಿನ್ ಆಯ್ಕೆಯನ್ನು ಪಡೆದುಕೊಳ್ಳಲಿದೆ.

ಹೊಸ ಎಂಜಿನ್ ಆಯ್ಕೆ ಪಡೆಯಲಿವೆ ಸಿಯಾಜ್, ಎರ್ಟಿಗಾ ಮತ್ತು ಎಸ್-ಕ್ರಾಸ್ ಕಾರುಗಳು

ಪೆಟ್ರೋಲ್ ಇಂಜಿನ್ ಸೇರ್ಪಡೆಯಿಂದಾಗಿ ನಗರದಲ್ಲಿ ಕ್ರಾಸ್ಒವರ್ ಕಾರನ್ನು ಬಯಸುವ ಗ್ರಾಹಕರನ್ನು ಹೆಚ್ಚು ಆಕರ್ಷಕವಾಗಿ ಮಾಡುತ್ತದೆ ಎನ್ನಬಹುದು ಮತ್ತು ಈ ವಾಹನದ ಆರಂಭಿಕ ಬೆಲೆಯು ಕಡಿಮೆಯಾಗಲಿದೆ ಎಂಬ ಮಾಹಿತಿ ಇದೆ.

ಹೊಸ ಎಂಜಿನ್ ಆಯ್ಕೆ ಪಡೆಯಲಿವೆ ಸಿಯಾಜ್, ಎರ್ಟಿಗಾ ಮತ್ತು ಎಸ್-ಕ್ರಾಸ್ ಕಾರುಗಳು

ಮಾರುತಿ ಸಂಸ್ಥೆಯು ಈಗಾಗಲೇ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಭಾರತದಲ್ಲಿ ತಯಾರಿಸುತ್ತದ್ದು, ಈ ನಾಲ್ಕು ಸಿಲಿಂಡರ್ ಎಂಜಿನ್ 1500 ಸಿಸಿ ಎಂಜಿನ್ ಸ್ಥಳಾಂತರಗೊಳಿಸುತ್ತದೆ. ಈ ಕಾರು 108 ಬಿಎಚ್‌ಪಿ ಮತ್ತು 138 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಎಂಜಿನ್ ಆಯ್ಕೆ ಪಡೆಯಲಿವೆ ಸಿಯಾಜ್, ಎರ್ಟಿಗಾ ಮತ್ತು ಎಸ್-ಕ್ರಾಸ್ ಕಾರುಗಳು

ಹೊಸ 1.5 ಲೀಟರ್ M15A ಪೆಟ್ರೋಲ್ ಕಾರು ಮುಂದಿನ ಪೀಳಿಗೆಯ ಮಾರುತಿ ಎರ್ಟಿಗಾ ಎಂಪಿವಿ ಕಾರಿನಲ್ಲಿ ಬಳಸಬಹುದಾಗಿದೆ. ಮುಂದಿನ ವರ್ಷ ಅಂತ್ಯದ ವೇಳೆಗೆ ಹೊಸ ಎರ್ಟಿಗಾ ಕಾರನ್ನು ಭಾರತದ ಪ್ರಾರಂಭಿಸಲಿದೆ ಹಾಗು ಆಂತರಿಕವಾಗಿ ಹೊಸ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆ ಅಭಿವೃದ್ಧಿಪಡಿಸುತ್ತಿದೆ.

ಹೊಸ ಎಂಜಿನ್ ಆಯ್ಕೆ ಪಡೆಯಲಿವೆ ಸಿಯಾಜ್, ಎರ್ಟಿಗಾ ಮತ್ತು ಎಸ್-ಕ್ರಾಸ್ ಕಾರುಗಳು

ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 6 ಸ್ಪೀಡ್ ಗೇರ್ ಬಾಕ್ಸ್ ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆ ಮಾರಾಟವಾಗುತ್ತಿದ್ದು, ಈ ಆಯ್ಕೆಯನ್ನು ಸಿಯೆಜ್, ಹೊಸ ಎರ್ಟಿಗಾ ಮತ್ತು ಪ್ರಸ್ತುತ ಎಸ್-ಕ್ರಾಸ್ ಆವೃತಿಗಲ್ಲಿ ನೀಡುವ ನಿರೀಕ್ಷೆ ಇದೆ.

ಹೊಸ ಎಂಜಿನ್ ಆಯ್ಕೆ ಪಡೆಯಲಿವೆ ಸಿಯಾಜ್, ಎರ್ಟಿಗಾ ಮತ್ತು ಎಸ್-ಕ್ರಾಸ್ ಕಾರುಗಳು

4 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಿಂತ ಪ್ರಸ್ತುತ ಬಿಡುಗಡೆಗೊಳ್ಳಲಿರುವ ಗೇರ್‌ಬಾಕ್ಸ್‌ ಹೆಚ್ಚು ಸ್ಪಂದಿಸುವ ನಿರೀಕ್ಷೆಯಿದೆ, ಅದು ಪ್ರಸ್ತುತ ಎರ್ಟಿಗಾ ಮತ್ತು ಸಿಯಾಜ್‌ನಲ್ಲಿ ಲಭ್ಯವಿದೆ. ಹೊಸ ಎಂಜಿನ್ ಮತ್ತು ಗೇರ್‌ಬಾಕ್ಸ್ ಸಂಯೋಜನೆಯು ಖರೀದಿದಾರರಿಗೆ ಹೆಚ್ಚು ಆಕರ್ಷಕವಾಗಿಸುತ್ತದೆ.

Read more on maruti ಮಾರುತಿ
English summary
The Maruti Ciaz, the Ertiga and the S-Cross models sold in India will get new 1.5 liter petrol engines, according to our sources.
Story first published: Friday, November 3, 2017, 17:22 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark