ಕುತೂಹಲ ಹುಟ್ಟಿಸಿದ ಮಾರುತಿ ಸುಜುಕಿ 'ರೈಡ್ ದೆ ಹಿಮಾಲಯಾ' ರ‍್ಯಾಲಿ

Written By:

ಮಾರುತಿ ಸುಜುಕಿ ಬಹುನೀರಿಕ್ಷಿತ 19ನೇ 'ರೈಡ್ ದೆ ಹಿಮಾಲಯ' ರ‍್ಯಾಲಿಗೆ ಅದ್ಧೂರಿ ಚಾಲನೆ ದೊರೆತಿದ್ದು, ಕಾರ್ಯಕ್ರಮದಲ್ಲಿ ಅಂತರ್‌ರಾಷ್ಟ್ರಿಯ ಖ್ಯಾತಿಯ ನೂರಾರು ಸ್ಪರ್ಧಿಗಳು ಭಾಗಿಯಾಗುವ ಮೂಲಕ ದೇಶದ ಅತಿದೊಡ್ಡ ಆಪ್‌ ರೋಡ್ ಕಾರ್ಯಕ್ರಮಕ್ಕೆ ಮೆರಗು ತಂದಿದ್ದಾರೆ.

To Follow DriveSpark On Facebook, Click The Like Button
ಕುತೂಹಲ ಹುಟ್ಟಿಸಿದ ಮಾರುತಿ ಸುಜುಕಿ 'ರೈಡ್ ದೆ ಹಿಮಾಲಯಾ' ರ‍್ಯಾಲಿ

ಕಳೆದ 2 ದಶಕಗಳಿಂದ ಆಪ್ ರೋಡಿಂಗ್ ಉತ್ತೇಜಿಸುವ ಉದ್ದೇಶದಿಂದ ಆರಂಭಿಸಲಾಗಿರುವ ರೈಡ್ ದೆ ಹಿಮಾಲಯಾ ಯಶಸ್ವಿಯಾಗಿ 18 ಆವೃತ್ತಿಗಳನ್ನು ಪೂರ್ಣಗೊಳಿಸಿದ್ದು, ಇದೀಗ 19ನೇ ಆವೃತ್ತಿಗೆ ಅದ್ಧೂರಿ ಚಾಲನೆ ನೀಡುವ ಮೋಟಾರ್ ಸ್ಪೋರ್ಟ್ ಪ್ರಿಯರನ್ನು ತನ್ನತ್ತ ಸೆಳೆಯುವಂತೆ ಮಾಡಿದೆ.

ಕುತೂಹಲ ಹುಟ್ಟಿಸಿದ ಮಾರುತಿ ಸುಜುಕಿ 'ರೈಡ್ ದೆ ಹಿಮಾಲಯಾ' ರ‍್ಯಾಲಿ

ರೈಡ್ ದೆ ಹಿಮಾಲಯಾ ಮೋಟಾರ್ ಸ್ಪೋರ್ಟ್ ಆವೃತ್ತಿಯು ಸದ್ಯ ಪ್ರಸಿದ್ಧ ಪ್ರವಾಸಿ ತಾಣವಾದ ಮನಾಲಿಯಿಂದ ಚಾಲನೆ ನೀಡಲಾಗಿದ್ದು, ಹಿಮಾಲಯದ ಅಂಚಿನಲ್ಲಿರುವ ಕಾಜಾ ಪ್ರದೇಶವನ್ನು ತಲುಪುವ ಗುರಿ ನೀಡಲಾಗಿದೆ.

ಕುತೂಹಲ ಹುಟ್ಟಿಸಿದ ಮಾರುತಿ ಸುಜುಕಿ 'ರೈಡ್ ದೆ ಹಿಮಾಲಯಾ' ರ‍್ಯಾಲಿ

ಹೀಗಾಗಿ ಅತ್ಯಂತ ಕಠಿಣ ಪ್ರದೇಶಗಳಲ್ಲಿ ಸಾಗಬೇಕಿರುವ ಮೋಟಾರ್ ಸ್ಪೋರ್ಟ್ ಸ್ಪರ್ಧಿಗಳು ಮನಾಲಿಯಿಂದ ಹೊರಟು ಗ್ರ್ಯಾಮಪೊಂ ಮತ್ತು ಲೋಸಾರ್ ಪ್ರದೇಶಗಳಲ್ಲಿ ಸಾಗಿ ಕಾಜಾ ಪ್ರದೇಶವನ್ನು ತಲುಪಬೇಕಿರುವುದು ಹರಸಾಹಸವೇ ಸರಿ.

ಕುತೂಹಲ ಹುಟ್ಟಿಸಿದ ಮಾರುತಿ ಸುಜುಕಿ 'ರೈಡ್ ದೆ ಹಿಮಾಲಯಾ' ರ‍್ಯಾಲಿ

ಈಗಾಗಲೇ ಮೋಟಾರ್ ಸ್ಪೋರ್ಟ್ ರ‍್ಯಾಲಿಯ ಮೊದಲ ಮತ್ತು ಎರಡನೇ ದಿನದ ಸ್ಪರ್ಧೆ ಕೊನೆಗೊಂಡಿದ್ದು, ಎಕ್ಸ್‌ಟ್ರಿಮ್ ಬೈಕ್ ವಿಭಾಗದಲ್ಲಿ ಆರ್ ನಟರಾಜ್, ಅಬ್ದುಲ್ ವಾಹಿದ್ ತನ್ವಿರ್, ಸಂಜಯ್ ಕುಮಾರ್ ಮುನ್ನಡೆ ಸಾಧಿಸಿದ್ದಾರೆ.

ಕುತೂಹಲ ಹುಟ್ಟಿಸಿದ ಮಾರುತಿ ಸುಜುಕಿ 'ರೈಡ್ ದೆ ಹಿಮಾಲಯಾ' ರ‍್ಯಾಲಿ

ಹಾಗೆಯೇ ಎಕ್ಸ್‌ಟ್ರಿಮ್ ಕಾರು ವಿಭಾಗದಲ್ಲಿ ಸುರೇಶ್ ರಾಣಾ, ಹರ್‌ಪ್ರೀತ್ ಸಿಂಗ್ ಬಾವಾ, ಸಂಜಯ್ ರಜ್ದಾನ್ ಮುನ್ನಡೆ ಸಾಧಿಸಿದ್ದು, ಅ.13ದಿಂದ ಅಂತಿಮ ಹಂತದ ಸ್ಪರ್ಧೆಗಳಿಗೆ ಚಾಲನೆ ದೊರೆಯಲಿದೆ.

ಕುತೂಹಲ ಹುಟ್ಟಿಸಿದ ಮಾರುತಿ ಸುಜುಕಿ 'ರೈಡ್ ದೆ ಹಿಮಾಲಯಾ' ರ‍್ಯಾಲಿ

ಈ ವೇಳೆ 17,500 ಅಡಿ ಎತ್ತರದಲ್ಲಿ ಮೋಟಾರ್ ಸ್ಪೋರ್ಟ್ ಸಾಗಲಿದ್ದು, 15 ಡಿಗ್ರಿ ಸೆಲಿಯಸ್ಸ್‌ಗಿಂತಲೂ ಕಡಿಮೆ ಉಷ್ಣಾಂಶದಲ್ಲಿ ಕಾರು ಚಾಲನೆ ಮಾಡಬೇಕಿದೆ. ಜೊತೆಗೆ ರ‍್ಯಾಲಿಯಲ್ಲಿ ಭಾಗಿಯಾಗಿರುವ ಒಟ್ಟು 170 ಸ್ಪರ್ಧಿಗಳಲ್ಲಿ 7 ಮಂದಿ ಮಹಿಳಾ ರೈಡ್‌ಗಳು ಕೂಡಾ ಭಾಗಿಯಾಗಿರುವ ಮತ್ತೊಂದು ವಿಶೇಷ.

English summary
Read in Kannada about 2017 Maruti Suzuki Raid De Himalaya: Scarce Updates From Day 1 & 2.
Story first published: Tuesday, October 10, 2017, 17:41 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark