ಮರ್ಸಿಡಿಸ್ ಬಹುನೀರಿಕ್ಷಿತ ಎಎಂಜಿ ಜಿಟಿ ರೋಡ್‌ಸ್ಟರ್ ಕಾರು ಬಿಡುಗಡೆ

Written By:

ಸೂಪರ್ ಕಾರು ಮಾದರಿಗಳಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿರುವ ಮರ್ಸಿಡಿಸ್ ಎಎಂಜಿ ಜಿಟಿ ರೋಡ್‌ಸ್ಟರ್ ಕಾರು ಭಾರತದಲ್ಲಿ ಬಿಡುಗಡೆಯಾಗಿದ್ದು, ಹೊಸ ಕಾರಿನ ಕುರಿತಾದ ಪ್ರಮುಖ ತಾಂತ್ರಿಕ ಅಂಶಗಳು ಇಲ್ಲಿವೆ.

ಮರ್ಸಿಡಿಸ್ ಬಹುನೀರಿಕ್ಷಿತ ಎಎಂಜಿ ಜಿಟಿ ರೋಡ್‌ಸ್ಟರ್ ಕಾರು ಬಿಡುಗಡೆ

ಸ್ಪೋರ್ಟ್ ಕಾರು ವಿಭಾಗದಲ್ಲಿ ಹೊಸ ಭರವಸೆಯೊಂದಿಗೆ ಎಎಂಜಿ ಜಿಟಿ ರೋಡ್‌ಸ್ಟರ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿರುವ ಮರ್ಸಿಡಿಸ್ ಸಂಸ್ಥೆಯು, ಆರಂಭಿಕ ಕಾರು ಆವೃತ್ತಿಯ ಬೆಲೆಯನ್ನು ರೂ.2.19 ಕೋಟಿಗೆ ಬಿಡುಗಡೆ ಮಾಡಿದೆ.

ಮರ್ಸಿಡಿಸ್ ಬಹುನೀರಿಕ್ಷಿತ ಎಎಂಜಿ ಜಿಟಿ ರೋಡ್‌ಸ್ಟರ್ ಕಾರು ಬಿಡುಗಡೆ

ಎಎಂಜಿ ಜಿಟಿ ರೋಡ್‌ಸ್ಟರ್ ವೈಶಿಷ್ಟ್ಯತೆಗಳು

ಮರ್ಸಿಡಿಸ್ ಎಎಂಜಿ ಜಿಟಿ ರೋಡ್‌ಸ್ಟರ್ ಕಾರು ಆವೃತ್ತಿಗಳು 4-ಲೀಟರ್ ಟ್ವಿನ್ ಟರ್ಬೋ ವಿ8 ಎಂಜಿನ್ ಹೊಂದಿದ್ದು, 469-ಬಿಎಚ್‌ಪಿ ಮತ್ತು 630-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

ಮರ್ಸಿಡಿಸ್ ಬಹುನೀರಿಕ್ಷಿತ ಎಎಂಜಿ ಜಿಟಿ ರೋಡ್‌ಸ್ಟರ್ ಕಾರು ಬಿಡುಗಡೆ

ಹೀಗಾಗಿಯೇ ಕೇವಲ 4 ಸೇಕೆಂಡುಗಳಲ್ಲಿ 100ಕಿಮಿ ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಗರಿಷ್ಠ ಮಟ್ಟದಲ್ಲಿ ಪ್ರತಿ ಗಂಟೆಗೆ 302 ಕಿಮಿ ವೇಗವನ್ನು ಕ್ರಮಿಸಬಲ್ಲವು.

ಮರ್ಸಿಡಿಸ್ ಬಹುನೀರಿಕ್ಷಿತ ಎಎಂಜಿ ಜಿಟಿ ರೋಡ್‌ಸ್ಟರ್ ಕಾರು ಬಿಡುಗಡೆ

ಇದರೊಂದಿಗೆ ಹೊಸ ವಿನ್ಯಾಸ ಅಲಾಯ್ ಚಕ್ರಗಳನ್ನು ಕೂಡಾ ಪರಿಚಯಿಸಲಾಗಿದ್ದು, ಎಲೆಕ್ಟ್ರಿಕ್ ವ್ಯವಸ್ಥೆಯೊಂದಿಗೆ ಕೇವಲ 11 ಸೇಕೆಂಡುಗಳಲ್ಲಿ ಟಾಪ್ ರೂಫ್‌ನ್ನು ತೆಗೆದು ಹಾಕುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಮರ್ಸಿಡಿಸ್ ಬಹುನೀರಿಕ್ಷಿತ ಎಎಂಜಿ ಜಿಟಿ ರೋಡ್‌ಸ್ಟರ್ ಕಾರು ಬಿಡುಗಡೆ

ಇನ್ನು ಗ್ರಾಹಕರ ಬೇಡಿಕೆಯಂತೆ ಕಪ್ಪು, ಕೆಂಪು ಮತ್ತು ಬಿಜೆ ಬಣ್ಣಗಳೊಂದಿಗೆ ಎಎಂಜಿ ಜಿಟಿ ರೋಡ್‌ಸ್ಟರ್ ಕಾರನ್ನು ಅಭಿವೃದ್ಧಿ ಮಾಡಿದ್ದು, ಬಿಡುಗಡೆಗೊಂಡ ಮತ್ತೊಂದು ಮರ್ಸಿಡಿಸ್ ಮಾದರಿ ಎಎಂಜಿ ಜಿಟಿ ಆರ್ ಕಾರಿನ ಕೆಲವು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಮರ್ಸಿಡಿಸ್ ಬಹುನೀರಿಕ್ಷಿತ ಎಎಂಜಿ ಜಿಟಿ ರೋಡ್‌ಸ್ಟರ್ ಕಾರು ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಐಷಾರಾಮಿ ಕಾರು ಪ್ರಿಯರಿಗಾಗಿಯೇ ಸಿದ್ಧಗೊಂಡಿರುವ ಮರ್ಸಿಡಿಸ್ ಎಎಂಜಿ ಜಿಟಿ ರೋಡ್‌ಸ್ಟರ್ ಕಾರು ಹಲವು ವಿಶೇಷತೆ ಕಾರಣವಾಗಿದ್ದು, ಬಲಿಷ್ಠ ಮಾದರಿಯ ವಿ8 ಎಂಜಿನ್‌ನೊಂದಿಗೆ ಮತ್ತಷ್ಛು ವೇಗದ ಚಾಲನೆಗೆ ಸಹಕಾರಿಯಾಗಿದೆ.

English summary
Read in Kannada about Mercedes AMG GT Roadster Launched In India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark