ವರವಾಗಿ ಪರಿಣಮಿಸಿದ ಜಿಎಸ್‌ಟಿ- ಮರ್ಸಿಡಿಸ್ ಬೆಂಝ್ ಕಾರುಗಳ ಬೆಲೆಗಳಲ್ಲಿ ಕಡಿತ

Written By:

ಜರ್ಮನಿ ಮೂಲದ ಐಷಾರಾಮಿ ಉತ್ಪಾದನಾ ಸಂಸ್ಥೆ ಮರ್ಸಿಡಿಸ್ ಬೆಂಝ್ ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ಶೇಕಡಾ 2 ರಿಂದ 9ರಷ್ಟು ರಿಯಾಯ್ತಿ ಘೋಷಣೆ ಮಾಡಿದೆ.

ಮರ್ಸಿಡಿಸ್ ಬೆಂಝ್

ದೇಶಿಯವಾಗಿ ಉತ್ಪಾದನೆಯಾಗುವ ಕಾರು ಮಾದರಿಗಳ ಮೇಲೆ ಹೊಸ ಘೋಷಣೆ ಅನ್ವಯವಾಗಲಿದ್ದು, ಜಿಎಸ್‌ಟಿ ಜಾರಿಗೂ ಮುನ್ನವೇ ಮರ್ಸಿಡಿಸ್ ಬೆಂಝ್ ಮಹತ್ವದ ನಿರ್ಣಯ ಕೈಗೊಂಡಿದೆ.

ಮರ್ಸಿಡಿಸ್ ಬೆಂಝ್

ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಘೋಷಣೆ ಹಿನ್ನೆಲೆಯಲ್ಲಿ ಮರ್ಸಿಡಿಸ್ ಬೆಂಝ್ ದೇಶಿಯ ಉತ್ಪಾದನೆ ಹೆಚ್ಚಿದ್ದು, ಬೆಲೆಗಳನ್ನು ಕಡಿತ ಮಾಡಲು ಇದೇ ಪ್ರಮುಖ ಕಾರಣವಾಗಿದೆ.

ಮರ್ಸಿಡಿಸ್ ಬೆಂಝ್

ಬೆಲೆಗಳನ್ನು ಕಡಿತಗೊಳಿಸಿರುವ ಬಗ್ಗೆ ಮಾತನಾಡಿರುವ ಮರ್ಸಿಡಿಸ್ ಬೆಂಝ್ ಇಂಡಿಯಾ ಕಾರ್ಯನಿರ್ವಾಹಕ ಅಧಿಕಾರಿ ರೋಲ್ಯಾಂಡ್ ಫೋಲ್ಗರ್, ಭಾರತೀಯ ಮಾರುಕಟ್ಟೆಯಲ್ಲಿ ಬೆಂಝ್ ಮಾದರಿಗಳ ಮಾರಾಟದಲ್ಲಿ ಹೊಸ ನೀರಿಕ್ಷೆ ಇಟ್ಟುಕೊಳ್ಳಲಾಗಿದೆ ಎಂದಿದ್ದಾರೆ.

ಮರ್ಸಿಡಿಸ್ ಬೆಂಝ್

ಸದ್ಯ ಭಾರತೀಯ ಆಟೋ ಉದ್ಯಮದಲ್ಲಿ ತನ್ನದೇ ಆದ ಬೇಡಿಕೆ ಹೊಂದಿರುವ ಬೆಂಝ್ ಮರ್ಸಿಡಿಸ್, ಬೆಲೆಗಳ ಕಡಿತದ ಮೂಲಕದ ಮತ್ತಷ್ಟು ಮಾರಾಟ ಪ್ರಮಾಣವನ್ನು ಹೆಚ್ಚಿಸಲಿದೆ.

ಮರ್ಸಿಡಿಸ್ ಬೆಂಝ್

ಇನ್ನು ಇದುವರೆಗೆ ಪ್ರತಿ ರಾಜ್ಯಗಳು ಬಜೆಟ್‌ ಮಂಡನೆ ವೇಳೆ ತಮಗೆ ಇಷ್ಟಬಂದಷ್ಟು ತೆರಿಗೆ ವಿಧಿಸಬಹುದಾಗಿತ್ತು. ಆದರೆ ಜಿಎಸ್‌ಟಿ ಜಾರಿ ಬಳಿಕ ಇದಕ್ಕೆಲ್ಲಾ ತಡೆ ಬೀಳಲಿದೆ.

ಮರ್ಸಿಡಿಸ್ ಬೆಂಝ್

ಹೀಗಾಗಿ ಮನಬಂದಂತೆ ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಗೆ ಬ್ರೇಕ್ ಬಿಳಲಿದ್ದು, ಕಾರು ಉತ್ಪಾದಕರಿಗೆ ವರವಾಗಿ ಪರಿಣಮಿಸಿದೆ.

ಮರ್ಸಿಡಿಸ್ ಬೆಂಝ್

ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಗ್ರಾಹಕರು ತೆರಿಗೆಯ ಜತೆಗೆ ಇತರ ಕೆಲವು ಸೆಸ್‌ಗಳನ್ನೂ ಪಾವತಿಸ ಬೇಕಿದ್ದು, ಜಿಎಸ್‌ಟಿ ಜಾರಿ ನಂತರ ತೆರಿಗೆಯ ಮೇಲೆ ಉಪಕರ ಇರುವುದಿಲ್ಲ.

English summary
Read in Kannada about Mercedes-Benz India Drops Prices Effective Immediately.
Story first published: Friday, May 26, 2017, 19:39 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X