ಬಿಎಂಡಬ್ಲ್ಯು 7 ಸಿರೀಸ್ ಬಿಟ್ಟು ರೇಂಜ್ ರೋವರ್ ಕಾರು ಏರಿದ್ದೇಕೆ ಪ್ರಧಾನಿ ಮೋದಿ?

ಪ್ರಧಾನಿ ನರೇಂದ್ರ ಮೋದಿಯವರು ಅಧಿಕೃತವಾಗಿ ಬಳಸುತ್ತಿದ್ದ ತಮ್ಮ ನೆಚ್ಚಿನ ಬಿಎಂಡಬ್ಲ್ಯು 7 ಸಿರೀಸ್ ಕಾರ್‌ನ್ನು ಕೈಬಿಟ್ಟಿದ್ದಾರೆ.

By Praveen

ಪ್ರಧಾನಿ ನರೇಂದ್ರ ಮೋದಿಯವರು ಅಧಿಕೃತವಾಗಿ ಬಳಸುತ್ತಿದ್ದ ತಮ್ಮ ನೆಚ್ಚಿನ ಬಿಎಂಡಬ್ಲ್ಯು 7 ಸಿರೀಸ್ ಕಾರ್‌ನ್ನು ಕೈಬಿಟ್ಟಿದ್ದು, ಇದೀಗ ಅತ್ಯುತ್ತಮ ರಕ್ಷಣಾ ವೈಶಿಷ್ಟ್ಯತೆಗಳನ್ನು ಹೊಂದಿರುವ ರೇಂಜ್ ರೋವರ್ ಕಾರ್‌ನ್ನು ತಮ್ಮ ಅಧಿಕೃತ ವಾಹನವನ್ನಾಗಿ ಬಳಕೆ ಮಾಡುತ್ತಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಬಿಎಂಡಬ್ಲ್ಯು 7 ಸಿರೀಸ್ ಬಿಟ್ಟು ರೇಂಜ್ ರೋವರ್ ಕಾರು ಏರಿದ್ದೇಕೆ ಪ್ರಧಾನಿ ಮೋದಿ?

ಝಡ್ ಪ್ಲಸ್ ಸೇರಿದಂತೆ ಹತ್ತು ಹಲವು ಗುಪ್ತಚರ ದಳ ರಕ್ಷಣೆಯೊಂದಿಗೆ ಬಿಎಂಡಬ್ಲ್ಯು 7 ಸಿರೀಸ್ ಐಷಾರಾಮಿ ಕಾರುನ್ನು ಬಳಕೆ ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರು ಇದ್ದಕ್ಕಿದ್ದಂತೆ ತಮ್ಮ ಫೇವೆರಿಟ್ ಕಾರುನ್ನು ಬದಲಿಸಿದ್ದು, ರೇಂಜ್ ರೋವರ್ ಎಸ್‌ಯುವಿ ಆಯ್ಕೆಯ ಹಿಂದಿನ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ.

ಬಿಎಂಡಬ್ಲ್ಯು 7 ಸಿರೀಸ್ ಬಿಟ್ಟು ರೇಂಜ್ ರೋವರ್ ಕಾರು ಏರಿದ್ದೇಕೆ ಪ್ರಧಾನಿ ಮೋದಿ?

'ಮೇಕ್ ಇನ್ ಇಂಡಿಯಾ' ಯೋಜನೆಗೆ ಉತ್ತೇಜನ ನೀಡುವ ಮೂಲಕ ಸದಾ ಸ್ವದೇಶಿ ಮಂತ್ರ ಪಠಿಸುವ ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಅಧಿಕೃತ ಪ್ರಯಾಣಕ್ಕೆ ವಿದೇಶಿ ಮೂಲದ ಕಾರನ್ನು ಏಕೆ ಬಳಕೆ ಮಾಡುತ್ತಿದ್ದಾರೆ ಎಂಬುದು ಬಹಳಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.

ಬಿಎಂಡಬ್ಲ್ಯು 7 ಸಿರೀಸ್ ಬಿಟ್ಟು ರೇಂಜ್ ರೋವರ್ ಕಾರು ಏರಿದ್ದೇಕೆ ಪ್ರಧಾನಿ ಮೋದಿ?

ಅಧಿಕಾರಕ್ಕೂ ಮುನ್ನ ಮಹೀಂದ್ರ ಆಂಡ್ ಮಹೀಂದ್ರದ ಸ್ಕಾರ್ಪಿಯೊ ಕ್ರೀಡಾ ಬಳಕೆಯ ವಾಹನವನ್ನು ಬಳಕೆ ಮಾಡುತ್ತಿದ್ದ ನರೇಂದ್ರ ಮೋದಿ ಅವರು ಪ್ರಧಾನಿ ಗದ್ದುಗೇರಿದ ಬಳಿಕ ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ ಎಡಿಷನ್ ಕಾರು ಬಳಕೆಗೆ ಮೋರೆ ಹೋಗಿದ್ದು ಭಾರೀ ಚರ್ಚೆಯನ್ನೇ ಹುಟ್ಟುಹಾಕಿತ್ತು.

ಬಿಎಂಡಬ್ಲ್ಯು 7 ಸಿರೀಸ್ ಬಿಟ್ಟು ರೇಂಜ್ ರೋವರ್ ಕಾರು ಏರಿದ್ದೇಕೆ ಪ್ರಧಾನಿ ಮೋದಿ?

ರೇಂಜ್ ರೋವರ್ ಆಯ್ಕೆ ಯಾಕೆ?

ನಿಮಗೆಲ್ಲಾ ತಿಳಿದುವಂತೆ ರೇಂಜ್ ರೋವರ್ ಸಂಸ್ಥೆಯು ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಟಾಟಾ ಮೋಟಾರ್ಸ್‌ನ ಅಂಗ ಸಂಸ್ಥೆಯಾಗಿದ್ದು, ದೇಶಿಯಾಗಿ ಉತ್ಪಾದನೆಯಾಗುತ್ತಿರುವ ಐಷಾರಾಮಿ ಕಾರು ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ರೇಂಜ್ ರೋವರ್ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

ಬಿಎಂಡಬ್ಲ್ಯು 7 ಸಿರೀಸ್ ಬಿಟ್ಟು ರೇಂಜ್ ರೋವರ್ ಕಾರು ಏರಿದ್ದೇಕೆ ಪ್ರಧಾನಿ ಮೋದಿ?

ಸುರಕ್ಷತೆಗಾಗಿ ವಿಶೇಷ ವಿನ್ಯಾಸ

ಮಾಜಿ ಪಿಎಂ ರಾಜೀವ್ ಗಾಂಧಿ ಬಳಿಕ ದೇಶದ ಅತ್ಯಂತ ಹೆಚ್ಚು ಅಪಾಯ ಆಹ್ವಾನಿತ ಪ್ರಧಾನಿ ಎಂದು ಗುರುತಿಸಿಕೊಂಡಿರುವ ನರೇಂದ್ರ ಮೋದಿ ಅವರಿಗೆ ಗರಿಷ್ಠ ಭದ್ರತೆ ಒದಗಿಸುವ ಹೊಣೆ ಹೊತ್ತಿರುವ ಎನ್ಎಸ್ಐ ಸಂಸ್ಥೆಯು ವಿಶೇಷ ರಕ್ಷಾಣಾ ವಿನ್ಯಾಸ ಹೊಂದಿರುವ ರೇಂಜ್ ರೋವರ್ ಆಯ್ಕೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಬಿಎಂಡಬ್ಲ್ಯು 7 ಸಿರೀಸ್ ಬಿಟ್ಟು ರೇಂಜ್ ರೋವರ್ ಕಾರು ಏರಿದ್ದೇಕೆ ಪ್ರಧಾನಿ ಮೋದಿ?

ಹೀಗಾಗಿಯೇ ಮೊನ್ನೆಯಷ್ಟೇ ದೆಹಲಿ ಕೆಂಪು ಕೋಟೆಯಲ್ಲಿ ನಡೆದ 71ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಭಾಗಿಯಾಗಲು ಬಂದಿದ್ದ ಪ್ರಧಾನಿ ಮೋದಿಯವರು ದೇಶಿಯ ವೈಶಿಷ್ಟ್ಯತೆಗಳನ್ನು ಹೊಂದಿರುವ ರೇಂಜ್ ರೋವರ್‌ನೊಂದಿಗೆ ಪ್ರಯಾಣ ಬೆಳಸಿದ್ದು ವಿಶೇಷವಾಗಿತ್ತು.

ಬಿಎಂಡಬ್ಲ್ಯು 7 ಸಿರೀಸ್ ಬಿಟ್ಟು ರೇಂಜ್ ರೋವರ್ ಕಾರು ಏರಿದ್ದೇಕೆ ಪ್ರಧಾನಿ ಮೋದಿ?

ಇನ್ನು ಇಂಧನ ಟ್ಯಾಂಕ್‌ಗಳನ್ನು ವಿಶೇಷ ಕವಚಗಳಾಗಿ ವಿನ್ಯಾಸಗೊಳಿಸಲಾಗಿದ್ದು, ಎಂತಹುದೇ ಶಕ್ತಿಶಾಲಿ ಬಾಂಬ್ ದಾಳಿಯಲ್ಲೂ ಸ್ಪೋಟಗೊಳ್ಳುವುದಿಲ್ಲ. ಅಷ್ಟೇ ಅಲ್ಲದೆ ಇದರ ಕ್ಯಾಬಿನ್‌ನಲ್ಲಿ ಆಳವಡಿಸಲಾಗಿರುವ ಗ್ಯಾಸ್ ಫ್ರೂಪ್ ಚೇಂಬರ್ ನಿರಂತರ ಆಮ್ಲಜನಕವನ್ನು ಒದಗಿಸುತ್ತದೆ.

Recommended Video

TVS Jupiter Classic Launched In India | In Kannada - DriveSpark ಕನ್ನಡ
ಬಿಎಂಡಬ್ಲ್ಯು 7 ಸಿರೀಸ್ ಬಿಟ್ಟು ರೇಂಜ್ ರೋವರ್ ಕಾರು ಏರಿದ್ದೇಕೆ ಪ್ರಧಾನಿ ಮೋದಿ?

ವೈಯಕ್ತಿಕರಣಗೊಳಿಸಿದ ಮೋದಿ ಬಳಸುವ ಕಾರು ಅತ್ಯುನ್ನತ್ತ ವೈಶಿಷ್ಟ್ಯಗಳನ್ನು ಪಡೆದಿದೆ. ಆದ್ರೆ ಭದ್ರತಾ ದೃಷ್ಟಿಯ ಹಿನ್ನಲೆಯಲ್ಲಿ ವಿಶಿಷ್ಟತೆಗಳನ್ನು ಗೌಪ್ಯವಾಗಿಡಲಾಗಿದ್ದು, ಈ ಪೈಕಿ ಬೆಂಗಾವಲು ಪಡೆಯಲ್ಲಿ ನಕಲಿ ರೇಂಜ್ ರೋವರ್ ಕಾರುಗಳ ಸೇರ್ಪಡೆ ಮಾಡಲಾಗಿದೆ.

ಬಿಎಂಡಬ್ಲ್ಯು 7 ಸಿರೀಸ್ ಬಿಟ್ಟು ರೇಂಜ್ ರೋವರ್ ಕಾರು ಏರಿದ್ದೇಕೆ ಪ್ರಧಾನಿ ಮೋದಿ?

ಒಟ್ಟಿನಲ್ಲಿ ದೇಶಿವಾಗಿ ಸಿದ್ಧಗೊಳ್ಳುವ ಉತ್ಪನ್ನಗಳಿಗೆ ಪರೋಕ್ಷವಾಗಿ ಬೆಂಬಲ ಸೂಚಿಸುತ್ತಿರುವ ಮೋದಿಯುವರು ಈ ಮೂಲಕ ಪರದೇಶಿ ಕಂಪನಿಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವತ್ತ ಮಹತ್ವದ ಹೆಜ್ಜೆಇಟ್ಟಿರುವುದು ಗಮನಾರ್ಹ ಸಂಗತಿ.

Most Read Articles

Kannada
English summary
Read in Kannada about Indian Prime Minister has chosen Range Rover SUV on the occasion of 71st Independence Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X