ಧೋನಿಯವರ ಐಷಾರಾಮಿ ಕಾರು 'ಮಾರುತಿ' ಸರ್ವಿಸ್ ಸ್ಟೇಷನ್‌ನಲ್ಲಿ ಏಕೆ ಕಾಣಿಸಿಕೊಳ್ಳುತ್ತೆ ಗೊತ್ತಾ ?

Written By:

ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಯಾವಾಗಲೂ ತನ್ನ ವಾಹನಗಳ ಬಗ್ಗೆ ಮೊದಲಿನಿಂದಲೂ ಸಹ ಹೆಚ್ಚು ಒಲವು ಹೊಂದಿದ್ದಾರೆ ಎಂಬ ವಿಚಾರ ನಮಗೆ ಮೊದಲಿನಿಂದ ತಿಳಿದಿದೆ. ಈ ಶ್ರೀಮಂತ ಕ್ರಿಕೆಟಿಗ ಹೆಚ್ಚು ಐಷಾರಾಮಿ ವಾಹನಗಳನ್ನು ಖರೀದಿ ಮಾಡಿದ್ದಾರೆ ಕೂಡ.

ಧೋನಿಯವರ ಐಷಾರಾಮಿ ಕಾರು 'ಮಾರುತಿ' ಸರ್ವಿಸ್ ಸ್ಟೇಷನ್‌ನಲ್ಲಿ ಏಕೆ ಕಾಣಿಸಿಕೊಳ್ಳುತ್ತೆ ಗೊತ್ತಾ ?

ದ್ವಿಚಕ್ರ ವಾಹನವಾಗಲಿ ಅಥವಾ ನಾಲ್ಕು ಚಕ್ರದ ವಾಹನವಾಗಲಿ ವಾಹನಗಳ ಮೇಲೆ ತುಸು ಹೆಚ್ಚೇ ಆಸಕ್ತಿ ತೋರಿಸುವ ಭಾರತದ ಕ್ರಿಕೆಟಿಗ, ರಾಂಚಿಯ ತಮ್ಮ ಮನೆಯ ನೆಲಮಾಳಿಗೆಯಲ್ಲಿ ಎಸ್‌ಯುವಿ ಕಾರುಗಳ ಸಂಗ್ರಹ ಹೊಂದಿದ್ದಾರೆ.

ಧೋನಿಯವರ ಐಷಾರಾಮಿ ಕಾರು 'ಮಾರುತಿ' ಸರ್ವಿಸ್ ಸ್ಟೇಷನ್‌ನಲ್ಲಿ ಏಕೆ ಕಾಣಿಸಿಕೊಳ್ಳುತ್ತೆ ಗೊತ್ತಾ ?

ಎಷ್ಟೆಲ್ಲಾ ಐಷಾರಾಮಿ ಕಾರುಗಳನ್ನು ಹೊಂದಿರುವ ಈ ಕ್ರಿಕೆಟಿಗ, ಕೆಲವೊಮ್ಮೆ ತಮ್ಮ ಬೈಕುಗಳ ಸರ್ವಿಸ್, ಸ್ವಚ್ಛತೆಯನ್ನು ಸ್ವತಃ ತಾವೇ ಮಾಡಿಕೊಳ್ಳುವುದುಂಟು.

ಧೋನಿಯವರ ಐಷಾರಾಮಿ ಕಾರು 'ಮಾರುತಿ' ಸರ್ವಿಸ್ ಸ್ಟೇಷನ್‌ನಲ್ಲಿ ಏಕೆ ಕಾಣಿಸಿಕೊಳ್ಳುತ್ತೆ ಗೊತ್ತಾ ?

ಆದರೆ ಬೈಕ್ ಸರ್ವಿಸ್ ಏನೋ ಮಾಡಿಬಿಡಬಹುದು, ಆದ್ರೆ ತಮ್ಮ ದುಬಾರಿ ಕಾರುಗಳ ಸರ್ವಿಸ್ ಎಲ್ಲಿ ಮಾಡಿಸುತ್ತಾರೆ ಎಂಬ ಪ್ರೆಶ್ನೆ ನಿಮಗೆ ಬಂದಿದ್ದರೆ, ಅದಕ್ಕೆ ಉತ್ತರವನ್ನು ನಾವು ಖಂಡಿತ ಮುಂದಿನ ಸ್ಲೈಡ್‌ಗಳಲ್ಲಿ ತಿಳಿಸಲಿದ್ದೇವೆ.

ಧೋನಿಯವರ ಐಷಾರಾಮಿ ಕಾರು 'ಮಾರುತಿ' ಸರ್ವಿಸ್ ಸ್ಟೇಷನ್‌ನಲ್ಲಿ ಏಕೆ ಕಾಣಿಸಿಕೊಳ್ಳುತ್ತೆ ಗೊತ್ತಾ ?

ನಿಮಗೆ ಗೊತ್ತೇ ? ಕ್ರೀಡಾ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಧೋನಿಯವರು, ತಮ್ಮ ಐಷಾರಾಮಿ ಕಾರುಗಳ ಸರ್ವಿಸ್ ಮಾಡಿಸಲು ತಮ್ಮ ಮನೆಯ ಬಳಿಯೇ ಇರುವ ಮಾರುತಿ ಸುಜುಕಿ ಸರ್ವಿಸ್ ಸ್ಟೇಷನ್ ಉಪಯೋಗಿಸುತ್ತಾರೆ ಎಂದರೆ ನೀವು ನಂಬಲೇ ಬೇಕು.

ಧೋನಿಯವರ ಐಷಾರಾಮಿ ಕಾರು 'ಮಾರುತಿ' ಸರ್ವಿಸ್ ಸ್ಟೇಷನ್‌ನಲ್ಲಿ ಏಕೆ ಕಾಣಿಸಿಕೊಳ್ಳುತ್ತೆ ಗೊತ್ತಾ ?

ತನ್ನ ವಾಹನಗಳನ್ನು ಪರಿಪೂರ್ಣ ಸ್ಥಿತಿಯಲ್ಲಿ ಇಡಲು ಇಷ್ಟಪಡುವ ಧೋನಿಯವರು, ಬ್ರಾಂಡ್ ಕಾರುಗಳನ್ನೂ ಸಹ ಮಾರುತಿ ಸುಜುಕಿ ಸರ್ವಿಸ್ ಸ್ಟೇಷನ್‌ನಲ್ಲಿ ಸರ್ವಿಸ್ ಮಾಡುಸುತ್ತಾರಂತೆ.

ಧೋನಿಯವರ ಐಷಾರಾಮಿ ಕಾರು 'ಮಾರುತಿ' ಸರ್ವಿಸ್ ಸ್ಟೇಷನ್‌ನಲ್ಲಿ ಏಕೆ ಕಾಣಿಸಿಕೊಳ್ಳುತ್ತೆ ಗೊತ್ತಾ ?

ಉನ್ನತ ಮಟ್ಟದ ಬ್ರಾಂಡ್‌ಗಳ ಸರ್ವಿಸ್ ಸ್ಟೇಷನ್ ರಾಂಚಿಯಲ್ಲಿ ಇಲ್ಲದೆ ಇರುವ ಕಾರಣ, ಧೋನಿ ತನ್ನ ವಾಹನಗಳನ್ನು ಮಾರುತಿ ಸುಜುಕಿ ಸರ್ವಿಸ್ ಸ್ಟೇಷನ್‌ನಲ್ಲಿ ಸರ್ವಿಸ್ ಮಾಡಿಸಲು ಬಯಸುತ್ತಾರೆ ಎನ್ನಲಾಗಿದೆ.

ಧೋನಿಯವರ ಐಷಾರಾಮಿ ಕಾರು 'ಮಾರುತಿ' ಸರ್ವಿಸ್ ಸ್ಟೇಷನ್‌ನಲ್ಲಿ ಏಕೆ ಕಾಣಿಸಿಕೊಳ್ಳುತ್ತೆ ಗೊತ್ತಾ ?

ಚಿತ್ರದಲ್ಲಿ ನೀವು ಗಮನಿಸಿದಂತೆ ಎಂಎಸ್ ಧೋನಿ ಅವರ ಲ್ಯಾಂಡ್ ರೋವರ್ ಕಾರನ್ನು ಮಾರುತಿ ಕಾರ್ಯಾಗಾರದಲ್ಲಿ ನೋಡಬಹುದಾಗಿದ್ದು, ಮಾರುತಿ ಸರ್ವಿಸ್ ಸ್ಟೇಷನ್ ಮಾಲೀಕರ ಜೊತೆ ಈ ಬಗ್ಗೆ ಚರ್ಚೆ ನೆಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ಧೋನಿಯವರ ಐಷಾರಾಮಿ ಕಾರು 'ಮಾರುತಿ' ಸರ್ವಿಸ್ ಸ್ಟೇಷನ್‌ನಲ್ಲಿ ಏಕೆ ಕಾಣಿಸಿಕೊಳ್ಳುತ್ತೆ ಗೊತ್ತಾ ?

ಹೌದು, ಹೆಚ್ಚಿನ ವಿತರಕರು ಇತರ ಬ್ರ್ಯಾಂಡ್‌ಗಳ ವಾಹನಗಳನ್ನು ಹೊರತುಪಡಿಸಿ ಬೇರೆ ವಾಹನಗಳ ಸರ್ವಿಸ್ ಮಾಡಲು ಒಪ್ಪಿಗೆ ಸೂಚಿಸಿವುದಿಲ್ಲ. ಆದರೆ, ಮಾಲೀಕರು ಧೋನಿಯವರಿಗೆ ವಿನಾಯಿತಿ ನೀಡಿದ್ದಾರೆ ಎನ್ನಲಾಗಿದೆ.

ಧೋನಿಯವರ ಐಷಾರಾಮಿ ಕಾರು 'ಮಾರುತಿ' ಸರ್ವಿಸ್ ಸ್ಟೇಷನ್‌ನಲ್ಲಿ ಏಕೆ ಕಾಣಿಸಿಕೊಳ್ಳುತ್ತೆ ಗೊತ್ತಾ ?

ತಂತ್ರಜ್ಞರು ಹೆಚ್ಚು ಸಂಕೀರ್ಣವಾದ ವಾಹನಗಳನ್ನು ರಿಪೇರ್ ಮಾಡುವ ಕೌಶಲ್ಯ ಹೊಂದಿರುವ ಕಾರಣ ಧೋನಿಯವರು ತಮ್ಮ ಕಾಸ್ಟ್ಲಿ ಕಾರುಗಳನ್ನು ಮಾರುತಿ ಸ್ಟೇಷನ್‌ಗೆ ಬಿಡಲು ನಿರ್ಧರಿಸಿದ್ದಾರೆ ಎನ್ನಬಹುದು.

ಧೋನಿಯವರ ಐಷಾರಾಮಿ ಕಾರು 'ಮಾರುತಿ' ಸರ್ವಿಸ್ ಸ್ಟೇಷನ್‌ನಲ್ಲಿ ಏಕೆ ಕಾಣಿಸಿಕೊಳ್ಳುತ್ತೆ ಗೊತ್ತಾ ?

ಚಿತ್ರದಲ್ಲಿ ಸೂಕ್ಷ್ಮವಾಗಿ ನೋಡಿದರೆ, ಚಿತ್ರದಲ್ಲಿ ಮಾರುತಿ 800 ಮತ್ತು ಸಿಯಾಜ್ ಕಾರುಗಳು ಲ್ಯಾಂಡ್ ರೋವರ್ ಕಾರಿನ ಜೊತೆ ನೋಡಬಹುದಾಗಿದೆ.

ಧೋನಿಯವರ ಐಷಾರಾಮಿ ಕಾರು 'ಮಾರುತಿ' ಸರ್ವಿಸ್ ಸ್ಟೇಷನ್‌ನಲ್ಲಿ ಏಕೆ ಕಾಣಿಸಿಕೊಳ್ಳುತ್ತೆ ಗೊತ್ತಾ ?

ಇದು ಮೊದಲ ಬಾರಿಗೆ ಧೋನಿಯ ಕಾರು ಮಾರುತಿ ಸೇವಾ ಕೇಂದ್ರದಲ್ಲಿ ಪತ್ತೆಯಾಗಿಲ್ಲ ಎಂಬ ವರದಿ ಇದ್ದು, ಕಳೆದ ತಿಂಗಳು ಮಹೀಂದ್ರಾ ಸ್ಕಾರ್ಪಿಯೋ ಕಾರನ್ನು ಕೂಡಾ ಇದೇ ಸರ್ವಿಸ್ ಸ್ಟೇಷನ್‌ನಲ್ಲಿ ಬಿಡಲಾಗಿತ್ತು ಎನ್ನಲಾಗಿದೆ.

Read more on ಮಾರುತಿ maruti
English summary
Read in Kannada MS Dhoni landrover spotted at Maruti service center. Know more about this Dhoni matter and more.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark