ಬ್ರಿಟಿಷ್ ವಾಹನ ತಯಾರಕ ಕಂಪೆನಿಯಾದ ಲ್ಯಾಂಡ್ ರೋವರ್ ತನ್ನ ಹೊಚ್ಚ ಹೊಸ ಎರಡನೆಯ ತಲೆಮಾರಿನ ರೇಂಜ್ ರೋವರ್ ಇವೋಕ್ PHEV(ಪ್ಲಗ್ ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್)ಕಾರಿನ ಮೇಲೆ ಕಾರ್ಯನಿರ್ವಹಿಸುತ್ತಿದೆ.
ಈ ಹೊಸ ತಂತ್ರಜ್ಞಾನ ಪಡೆದ ಎಸ್‌ಯುವಿ ಹೈಬ್ರಿಡ್ ಕಾರು ನವೀನ ಮೂರು ಸಿಲಿಂಡರ್ ಪೆಟ್ರೋಲ್ ಇಂಜಿನ್ ಅಳವಡಿಕೆಗೊಂಡು ಮಾರುಕಟ್ಟೆಗೆ ಪ್ರವೇಶಿಸಲಿದ್ದು, ಈ ಮಾದರಿಯು ಪರೀಕ್ಷೆ ಮಾಡಲಾದ 1.5-ಲೀಟರ್ ಪೆಟ್ರೋಲ್ ಘಟಕದ ಸಹಾಯದಿಂದ ಶಕ್ತಿ ಉತ್ಪಾದನೆ ಮಾಡಲಿದೆ.
ಹೊಸ ಪವರ್ಟ್ರೈನ್ ಎಂಜಿನ್, ಕಡಿಮೆ ಹೊರಸೂಸುವಿಕೆ, ಸುಧಾರಿತ ಕಾರ್ಯಕ್ಷಮತೆಯನ್ನು ನೀಡಲಿದ್ದು, ಸೀಮಿತ ಶ್ರೇಣಿಯ ವಿದ್ಯುತ್ ಶಕ್ತಿಯನ್ನು ಅವಲಂಬಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಎವೊಕ್ಯು ಮೈಲ್ಡ್ ಹೈಬ್ರಿಡ್ ಕಾನ್ಸೆಪ್ಟ್ ಆಧಾರದ ಮೇಲೆ ನಿರ್ಮಾಣವಾಗುತ್ತಿರುವ ಈ ಹೊಸ ರೇಂಜ್ ರೋವರ್ PHEV ಎಲೆಕ್ಟ್ರಿಕ್ ಕಾರು ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕನ್ನು ಬಳಸಲಿದ್ದು, 48ವ್ಯಾಟ್ ವಿದ್ಯುತ್ ಶಕ್ತಿ ಉತ್ಪಾದಿಸುತ್ತದೆ.
ಪರಿಕಲ್ಪನೆಯ ಮಾದರಿಯಂತೆ, ಹೊಸ ಇವೋಕ್ ಎಲೆಕ್ಟ್ರಿಕ್ ಮೋಟಾರ್ ಎಂಜಿನ್ ಶಕ್ತಿಯನ್ನು ದ್ವಿಗುಣಗೊಳಿಸುವ ನಿರೀಕ್ಷೆ ಇದ್ದು, ಲ್ಯಾಂಡ್ ರೋವರ್ ಹೊಸ ಇವೊಕ್ ಬಿಡುಗಡೆಗೊಳಿಸುವ ಬಗ್ಗೆ ಈಗಾಗಲೇ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎನ್ನಲಾಗಿದೆ.
ಈ ಹಿಂದೆ, 2020ರ ನಂತರ ಬಿಡುಗಡೆಗೊಳ್ಳುವ ತನ್ನ ಎಲ್ಲಾ ಲ್ಯಾಂಡ್ ರೋವರ್ ಕಾರುಗಳನ್ನು ವಿದ್ಯುತ್ ರೂಪಾಂತರವಾಗಿ ಪರಿವರ್ತಿಸುವುದಾಗಿ ಹೇಳಿತ್ತು. ಆದರೆ, ಗಡುವಿಗೂ ಒಂದು ವರ್ಷದ ಮೊದಲೇ ಅಂದರೆ 2019ರಲ್ಲಿ ತನ್ನ ಎಲೆಕ್ಟ್ರಿಕ್ ಕಾರನ್ನು ರಸ್ತೆಗೆ ಪರಿಚಯಿಸಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
2019ರಲ್ಲಿ, ಲ್ಯಾಂಡ್ ರೋವರ್ ಮುಂದಿನ ಪೀಳಿಗೆಯ ಇವೊಕ್ ಶ್ರೇಣಿಯನ್ನು ಸಹ ಬಹಿರಂಗಪಡಿಸುತಿದ್ದು, ಈ ಕಾರು ದೊಡ್ಡದಾದ ಪ್ಲೇಟ್ ಫಾರಂಅಡಿಯಲ್ಲಿ, ಪೆಟ್ರೋಲ್ ಮತ್ತು ಟರ್ಬೋಚಾರ್ಜ್ಡ್ ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಯಾಗಲಿದೆ.
ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Subscribe to Kannada DriveSpark