ಬಿಡುಗಡೆಗೂ ಮುನ್ನವೇ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರಿನ ಬಗ್ಗೆ ಮಾಹಿತಿ ಸೋರಿಕೆ ಮಾಡಿದ ಟ್ವಿಟ್ಟರಿಗರು

Written By:

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ಧವಿರುವ ನವೀನ ಸ್ವಿಫ್ಟ್ ಸ್ಪೋರ್ಟ್ ಕಾರಿನ ಮಾಹಿತಿ ಲೀಕ್ ಆಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಬಿಡುಗಡೆಗೂ ಮುನ್ನವೇ ಸುಜುಕಿ ಸ್ವಿಫ್ಟ್ ಕಾರಿನ ಬಗ್ಗೆ ಮಾಹಿತಿ ಸೋರಿಕೆ ಮಾಡಿದ ಟ್ವಿಟ್ಟರಿಗರು

ಜಪಾನಿನ ಕಾರು ತಯಾರಿಕಾ ಸುಜುಕಿ ಸೆಪ್ಟೆಂಬರ್ ತಿಂಗಳಿನಲ್ಲಿ ಫ್ರಾಂಕ್ಫರ್ಟ್ ಮೋಟಾರ್ ಶೋ‌ನಲ್ಲಿ ಬಿಡುಗಡೆಗೊಳಿಸಲು ಉದ್ದೇಶಿಸಿರುವ ಹೊಚ್ಚ ಹೊಸ ಸ್ವಿಫ್ಟ್ ಸ್ಪೋರ್ಟ್ ಕಾರಿನ ಮಾಹಿತಿ ಸೋರಿಕೆಯಾಗಿದ್ದು, ಈ ಹಾಟ್ ಹ್ಯಾಚ್‌ಬ್ಯಾಕ್ ಕಾರಿನ ಬ್ರೌಚರ್ ಹೆಚ್ಚು ಸುದ್ದಿ ಪಡೆದುಕೊಂಡಿದೆ.

ಬಿಡುಗಡೆಗೂ ಮುನ್ನವೇ ಸುಜುಕಿ ಸ್ವಿಫ್ಟ್ ಕಾರಿನ ಬಗ್ಗೆ ಮಾಹಿತಿ ಸೋರಿಕೆ ಮಾಡಿದ ಟ್ವಿಟ್ಟರಿಗರು

ಟ್ವಿಟರ್ ಬಳಕೆದಾರರೊಬ್ಬರು ಈ ಕೈಪಿಡಿಯ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದಾರೆ. ಕ್ರೀಡಾ ವಿನ್ಯಾಸದ ಬಂಪರ್ ಮತ್ತು ಆಕ್ರಮಣಕಾರಿ ಮುಂಭಾಗವನ್ನು ಈ ಕಾರು ಹೊಂದಿರಲಿದೆ ಎನ್ನುವ ವಿಚಾರ ತಿಳಿದುಬಂದಿದೆ.

ಬಿಡುಗಡೆಗೂ ಮುನ್ನವೇ ಸುಜುಕಿ ಸ್ವಿಫ್ಟ್ ಕಾರಿನ ಬಗ್ಗೆ ಮಾಹಿತಿ ಸೋರಿಕೆ ಮಾಡಿದ ಟ್ವಿಟ್ಟರಿಗರು

ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಆವೃತಿಯ ಮುಂಭಾಗದ ಗ್ರಿಲ್, ಮರುವಿನ್ಯಾಸಗೊಳಿಸಲಾದ ಬಂಪರ್, ಚೂಪಾದ ರೇಖೆಗಳ ವಿನ್ಯಾಸ ಮತ್ತು ನವೀನ ಉಬ್ಬು ತಗ್ಗು ಆಕೃತಿಯಲ್ಲಿ ಈ ಕಾರು ಬಿಡುಗಡೆಗೊಳ್ಳಲಿದೆ.

ಬಿಡುಗಡೆಗೂ ಮುನ್ನವೇ ಸುಜುಕಿ ಸ್ವಿಫ್ಟ್ ಕಾರಿನ ಬಗ್ಗೆ ಮಾಹಿತಿ ಸೋರಿಕೆ ಮಾಡಿದ ಟ್ವಿಟ್ಟರಿಗರು

ಈ ಸ್ಪೋರ್ಟ್ಸ್ ಹ್ಯಾಚ್‌ಬ್ಯಾಕ್ ಡುಯಲ್-ಟೋನ್ ಮಿಶ್ರಲೋಹದ ಚಕ್ರಗಳು, ಕಾರಿನ ಹಿಂಬದಿ ಫಾಕ್ಸ್ ಡಿಫ್ಯೂಸರ್ ಮತ್ತು ಉಭಯ ಕ್ರೋಮ್ ಎಕ್ಸಾಸ್ಟ್ ಸೆಟಪ್ ಪಡೆಯುತ್ತದೆ. ಇನ್ನು, ಕಾರಿನ ಒಳಭಾಗದಲ್ಲಿ ಬಕೆಟ್ ವಿನ್ಯಾಸದ ಸೀಟ್ ನೀಡಲಾಗಿದೆ.

ಬಿಡುಗಡೆಗೂ ಮುನ್ನವೇ ಸುಜುಕಿ ಸ್ವಿಫ್ಟ್ ಕಾರಿನ ಬಗ್ಗೆ ಮಾಹಿತಿ ಸೋರಿಕೆ ಮಾಡಿದ ಟ್ವಿಟ್ಟರಿಗರು

ಕಾಲಿನಲ್ಲಿರುವ ಗೇರ್ ಲಿವರ್, ಸೀಟುಗಳು ಮತ್ತು ಕೆಲವು ಭಾಗಗಳು ಕೆಂಪು ಬಣ್ಣ ಪಡೆದು ಕಂಗೊಳಿಸುತ್ತಿವೆ. ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಕೂಡ ಕೆಂಪು ಮತ್ತು ಬೂದು ಬಣ್ಣ ಹೊಂದಿದೆ.

ಬಿಡುಗಡೆಗೂ ಮುನ್ನವೇ ಸುಜುಕಿ ಸ್ವಿಫ್ಟ್ ಕಾರಿನ ಬಗ್ಗೆ ಮಾಹಿತಿ ಸೋರಿಕೆ ಮಾಡಿದ ಟ್ವಿಟ್ಟರಿಗರು

ಹಳದಿ, ಕೆಂಪು, ನೀಲಿ, ಬಿಳಿ, ಬೂದು ಮತ್ತು ಕಪ್ಪು ಎಂಬ ಆರು ಬಣ್ಣ ಆಯ್ಕೆಗಳಲ್ಲಿ ಈ ಕಾರು ಬಿಡುಗಡೆಗೊಳ್ಳಲಿದೆ ಎಂದು ಕೈಪಿಡಿಯಲ್ಲಿ ನಮೂದಿಸಲಾಗಿದೆ. ಇತರೆ ತಾಂತ್ರಿಕ ವಿವರಗಳನ್ನು ಸೆಪ್ಟೆಂಬರ್ 12, 2017 ರಂದು ಫ್ರಾಂಕ್ಫರ್ಟ್ ವಾಹನ ಪ್ರದರ್ಶನದಲ್ಲಿ ತಿಳಿದುಕೊಳ್ಳಬಹುದಾಗಿದೆ.

ಬಿಡುಗಡೆಗೂ ಮುನ್ನವೇ ಸುಜುಕಿ ಸ್ವಿಫ್ಟ್ ಕಾರಿನ ಬಗ್ಗೆ ಮಾಹಿತಿ ಸೋರಿಕೆ ಮಾಡಿದ ಟ್ವಿಟ್ಟರಿಗರು

ಮಾರುತಿ ಸುಜುಕಿ ಸ್ವಿಫ್ಟ್ ಕಾರು 2018ರಲ್ಲಿ ನೆಡೆಯುವ ಆಟೊ ಎಕ್ಸ್‌ಪೋನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಈ ಕಾರು ಹೊಸ 1.4 ಲೀಟರ್ ಬೂಸ್ಟರ್‌ಜೆಟ್ ಟರ್ಬೊ ಎಂಜಿನ್ ಪಡೆಯುವ ಸಾಧ್ಯತೆ ಇದೆ.

English summary
Japanese car maker Suzuki is all set to reveal the new Swift Sport at the Frankfurt Motor in September 2017.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark