ಸೇಕೆಂಡ್ ಹ್ಯಾಂಡ್ ಕಾರುಗಳ ಮಾರಾಟಕ್ಕೆ ಪ್ರತ್ಯೇಕ ವಿಭಾಗವನ್ನೇ ತೆರೆದ ನಿಸ್ಸಾನ್

Written By:

ಆಟೋ ಉದ್ಯಮದಲ್ಲಿ ಹೊಸ ಕಾರುಗಳ ಮಾರಾಟ ಪ್ರಕ್ರಿಯೆಗೆ ಇರುವಷ್ಟೇ ಬೇಡಿಕೆಯೂ ಸೇಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ಮತ್ತು ಖರೀದಿ ಮೇಲೂ ಇದೆ. ಈ ಹಿನ್ನೆಲೆ ನಿನ್ಸಾಸ್ ಇಂಡಿಯಾ ಸಂಸ್ಥೆಯು ಪ್ರಿ ಓನ್ಡ್ ಕಾರುಗಳ ಮಾರಾಟಕ್ಕೆ ಪ್ರತ್ಯೇಕ ವಿಭಾಗವನ್ನೇ ಆರಂಭಿಸಿದ್ದು, ಈ ಕುರಿತಾದ ಮಹತ್ವದ ಮಾಹಿತಿಗಳು ಇಲ್ಲಿವೆ.

ಸೇಕೆಂಡ್ ಹ್ಯಾಂಡ್ ಕಾರುಗಳ ಮಾರಾಟಕ್ಕೆ ಪ್ರತ್ಯೇಕ ವಿಭಾಗವನ್ನೇ ತೆರೆದ ನಿಸ್ಸಾನ್

ಪ್ರತಿಯೊಬ್ಬರಿಗೂ ಕಾರು ಖರೀದಿಸಬೇಕೆಂಬ ಯೋಜನೆಗಳು ಇದ್ದೇ ಇರುತ್ತವೆ. ಆದ್ರೆ ಹಣಕಾಸಿನ ವಿಚಾರಕ್ಕೆ ಬಂದಾಗ ಹೊಸ ಕಾರು ಖರೀದಿ ಕಷ್ಟ ಸಾಧ್ಯವಾಗಬಹುದು. ಈ ವೇಳೆ ನಮ್ಮ ಮುಂದೆ ಇರುವ ಮತ್ತೊಂದು ಆಯ್ಕೆ ಎಂದರೆ ಅದು ಸೇಕೆಂಡ್ ಹ್ಯಾಂಡ್ ಕಾರು ಖರೀದಿ ಯೋಜನೆ. ಹೀಗಾಗಿಯೇ ಇತ್ತೀಚೆಗೆ ಎಲ್ಲಾ ವಾಹನ ಉತ್ಪಾದಕರು ಕೈಗೆಟುಕುವ ದರಗಳಲ್ಲಿ ಪ್ರಿ ಓನ್ಡ್ ಕಾರುಗಳನ್ನು ಅಧಿಕೃತವಾಗಿ ಮಾರಾಟ ಮಾಡುತ್ತಿದ್ದಾರೆ.

Recommended Video - Watch Now!
Datsun rediGO Gold 1.0-Litre Launched In India - DriveSpark
ಸೇಕೆಂಡ್ ಹ್ಯಾಂಡ್ ಕಾರುಗಳ ಮಾರಾಟಕ್ಕೆ ಪ್ರತ್ಯೇಕ ವಿಭಾಗವನ್ನೇ ತೆರೆದ ನಿಸ್ಸಾನ್

ನಿಸ್ಸಾನ್ ಇಂಡಿಯಾ ಸಂಸ್ಥೆಯು ಕೂಡಾ ಇದಕ್ಕಾಗಿ ಹೊಸ ಯೋಜನೆಯೊಂದನ್ನು ರೂಪಿಸಿದ್ದು, "ನಿಸ್ಸಾನ್ ಇಂಟೆಲಿಜೆಂಟ್ ಚಾಯ್ಸ್" ಎಂಬ ಕಾರ್ಯಕ್ರಮದ ಮೂಲಕ ಸೇಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮತ್ತು ಖರೀದಿಗೆ ಮುಂದಾಗಿದೆ.

ಸೇಕೆಂಡ್ ಹ್ಯಾಂಡ್ ಕಾರುಗಳ ಮಾರಾಟಕ್ಕೆ ಪ್ರತ್ಯೇಕ ವಿಭಾಗವನ್ನೇ ತೆರೆದ ನಿಸ್ಸಾನ್

ಹೀಗಾಗಿ ನಿಸ್ಸಾನ್ ನಿರ್ಮಾಣದ ಮೈಕ್ರಾ, ಡಟ್ಸನ್ ರೆಡಿ ಗೊ, ಸನ್ನಿ, ಟೆರಾನೋ ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳ ಸೇಕೆಂಡ್ ಹ್ಯಾಂಡ್ ಕಾರು ಆವೃತ್ತಿಗಳು ಖರೀದಿಗೆ ಲಭ್ಯವಿರಲಿದ್ದು, ಇದರೊಂದಿಗೆ ಗ್ರಾಹಕರಿಗೆ ಹಣಕಾಸಿನ ನೆರವು ಕೂಡಾ ಸಿಗಲಿದೆ.

ಸೇಕೆಂಡ್ ಹ್ಯಾಂಡ್ ಕಾರುಗಳ ಮಾರಾಟಕ್ಕೆ ಪ್ರತ್ಯೇಕ ವಿಭಾಗವನ್ನೇ ತೆರೆದ ನಿಸ್ಸಾನ್

ನಿಸ್ಸಾನ್ ಸೇಕೆಂಡ್ ಹ್ಯಾಂಡ್ ಕಾರು ಖರೀದಿಯಿಂದ ಗ್ರಾಹಕರಿಗೆ ಮತ್ತೊಂದು ಲಾಭವೆನೆಂದರೆ ಹೊಸ ಕಾರು ಖರೀದಿ ಮೇಲೆ ನೀಡಲಾಗುವ ಬ್ರ್ಯಾಂಡ್ ಖಾತ್ರಿಗಳು ಸೇಕೆಂಡ್ ಹ್ಯಾಂಡ್ ಖರೀದಿ ಮೇಲೂ ದೊರೆಯಲಿದ್ದು, ಉಚಿತ 24x7 ರಸ್ತೆ ಬದಿ ಸೇವೆಗಳು ಕೂಡಾ ನೀಡಲಾಗುತ್ತಿದೆ.

ಸೇಕೆಂಡ್ ಹ್ಯಾಂಡ್ ಕಾರುಗಳ ಮಾರಾಟಕ್ಕೆ ಪ್ರತ್ಯೇಕ ವಿಭಾಗವನ್ನೇ ತೆರೆದ ನಿಸ್ಸಾನ್

ಇನ್ನು ನಿಸ್ಸಾನ್ ಸಂಸ್ಥೆಯು ಆಂರಭಿಸಿರುವ "ನಿಸ್ಸಾನ್ ಇಂಟೆಲಿಜೆಂಟ್ ಚಾಯ್ಸ್" ಕಾರ್ಯಕ್ರಮವು ಮೊದಲ ಹಂತವಾಗಿ ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಕೋಲ್ಕತ್ತಾ, ಅಹಮದಾಬಾದ್, ಲಕ್ನೋ ಮತ್ತು ಜೈಪುರದಲ್ಲಿ ಪ್ರಾರಂಭವಾಗಿದ್ದು, ಮುಂಬರುವ ದಿನಗಳಲ್ಲಿ ಪ್ರಮುಖ ನಗರಗಳಲ್ಲೂ ಹೊಸ ಯೋಜನೆಯನ್ನು ತೆರೆಯಲಿದೆ.

ಸೇಕೆಂಡ್ ಹ್ಯಾಂಡ್ ಕಾರುಗಳ ಮಾರಾಟಕ್ಕೆ ಪ್ರತ್ಯೇಕ ವಿಭಾಗವನ್ನೇ ತೆರೆದ ನಿಸ್ಸಾನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಆಟೋ ಉದ್ಯಮದಲ್ಲಿ ಸೇಕೆಂಡ್ ಕಾರು ಮಾರಾಟ ಪ್ರಕ್ರಿಯೆ ಅತಿದೊಡ್ಡ ಮಾರುಕಟ್ಟೆಯಿದ್ದು, ಇದೇ ಉದ್ದೇಶದಿಂದ ತನ್ನದೇ ಕಾರು ಆವೃತ್ತಿಗಳೊಂದಿಗೆ ಗ್ರಾಹಕರನ್ನು ಸೆಳೆಯಲು ನಿಸ್ಸಾನ್ ಮಹತ್ಪದ ಯೋಜನೆ ಆರಂಭಿಸಿದೆ. ಇದರಿಂದ ಗ್ರಾಹಕರಿಗೂ ಸೇಕೆಂಡ್ ಹ್ಯಾಂಡ್ ಖರೀದಿ ಮೇಲೆ ಪೂರ್ಣ ವಿಶ್ವಾಸ ಬರುವುದಲ್ಲದೇ ಬ್ರ್ಯಾಂಡ್ ಮೌಲ್ಯಕ್ಕೆ ಉತ್ತಮ ಬೆಲೆ ಕೂಡಾ ಸಿಗಲಿದೆ.

English summary
Read in Kannada about Nissan Enters Pre Owned Car Business in india.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark