ಕ್ಯಾಬ್‌ನಲ್ಲೇ ಜನಿಸಿದ ಮಗುವಿಗೆ ಭರ್ಜರಿ ಉಡುಗೊರೆ ಕೊಟ್ಟ ಓಲಾ..!!

Written By:

ತಿಂಗಳ ಹಿಂದಷ್ಟೇ ವಿಮಾನಯಾನ ಕಂಪೆನಿಯೊಂದು ತಮ್ಮ ವಿಮಾನದಲ್ಲಿ ಜನಿಸಿದ ಮಗುವಿಗೆ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ನೀಡಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಅಂತದ್ದೆ ಘಟನೆ ನಡೆದಿದ್ದು, ಓಲಾ ಕ್ಯಾಬ್‌ನಲ್ಲಿ ಜನಸಿದ ಮಗುವಿಗೆ ಭರ್ಜರಿ ಗಿಫ್ಟ್ ನೀಡಲಾಗಿದೆ.

ಕ್ಯಾಬ್‌ನಲ್ಲೇ ಜನಿಸಿದ ಮಗುವಿಗೆ ಭರ್ಜರಿ ಉಡುಗೊರೆ ಕೊಟ್ಟ ಓಲಾ..!!

ಆಪ್ ಆಧರಿತ ಕ್ಯಾಬ್ಸ್ ಸೇವೆಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ಓಲಾದಲ್ಲಿ ತುಂಬು ಗರ್ಭಿಣಿಯೊಬ್ಬರು ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ತೀವ್ರ ನೋವು ಕಾಣಿಸಿಕೊಂಡಿದ್ದು, ಕಾರಿನಲ್ಲೇ ಆ ಮಹಿಳಗೆ ಹೆರಿಗೆಯಾಗಿದೆ. ಅದೃಷ್ಟವಶಾತ್ ಆರೋಗ್ಯಕರ ಹೆರಿಗೆಯಾಗಿದ್ದು, ತದನಂತರ ಸ್ಥಳೀಯ ಆಸ್ಪತ್ರೆಯೊಂದಕ್ಕೆ ತಾಯಿ ಮಗುವನ್ನು ದಾಖಲು ಮಾಡಿದ್ದಾರೆ.

ಕ್ಯಾಬ್‌ನಲ್ಲೇ ಜನಿಸಿದ ಮಗುವಿಗೆ ಭರ್ಜರಿ ಉಡುಗೊರೆ ಕೊಟ್ಟ ಓಲಾ..!!

ಪುಣೆಯ ಕೊಂಧ್ವಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆ ನಂತರ ಸುರಕ್ಷಿತ ಮನೆ ತಲುಪಿದ ತಾಯಿ ಮಗುವಿಗೆ ಓಲಾ ಸಂಸ್ಥೆಯು ಭರ್ಜರಿ ಉಡುಗೊರೆಯೊಂದನ್ನು ನೀಡಿದೆ.

ಈ ಹಿನ್ನೆಲೆ ಐದು ವರ್ಷಗಳ ಕಾಲ ತಾಯಿ ಮಗುವಿಗೆ ಉಚಿತ ಕ್ಯಾಬ್ ಪ್ರಯಾಣ ಸೌಲಭ್ಯವನ್ನು ಪ್ರಕಟಿಸಿ ಟ್ವಿಟರ್‌ನಲ್ಲಿ ಈ ಬಗ್ಗೆ ಸಂತಸ ವ್ಯಕ್ತಪಡಿಸಿದೆ.

ಕ್ಯಾಬ್‌ನಲ್ಲೇ ಜನಿಸಿದ ಮಗುವಿಗೆ ಭರ್ಜರಿ ಉಡುಗೊರೆ ಕೊಟ್ಟ ಓಲಾ..!!

ಇನ್ನು ಈ ಘಟನೆಯೂ ಅಕ್ಟೋಬರ್ 2ರಂದೇ ನಡೆದಿದ್ದು, ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ಕರೆದೊಯ್ಯಲು ರಮೇಶ್ ಸಿಂಗ್ ವಿಶ್ವಕರ್ಮ ಅವರು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಆದ್ರೆ ಆಸ್ಪತ್ರೆ ತಲುಪುವ ಮುನ್ನವೇ ಈಶ್ವರಿ ಸಿಂಗ್ ವಿಶ್ವಕರ್ಮ ಅವರು ಕ್ಯಾಬ್‌ನಲ್ಲೇ ಗಂಡುಮಗುವಿಗೆ ಜನ್ಮ ನೀಡಿದ್ದಾರೆ.

Recommended Video - Watch Now!
Audi A5 Sportback, A5 Cabriolet And S5 Sportback Previewed In India - DriveSpark
ಕ್ಯಾಬ್‌ನಲ್ಲೇ ಜನಿಸಿದ ಮಗುವಿಗೆ ಭರ್ಜರಿ ಉಡುಗೊರೆ ಕೊಟ್ಟ ಓಲಾ..!!

ಈ ಸಂಗತಿ ತಿಳಿದು ಓಲಾ ಕ್ಯಾಬ್ಸ್ ಸಂಸ್ಥೆಯು ತಾಯಿ ಮತ್ತು ಮಗುವಿಗೆ ಐದು ವರ್ಷಗಳ ಕಾಲ ಉಚಿತ ಪ್ರಯಾಣ ಸೌಲಭ್ಯವನ್ನು ಕಲ್ಪಿಸಿರುವುದಾಗಿ ತಿಳಿಸಿದೆ. ಇದಕ್ಕಾಗಿ ಒಂದು ವಿಶೇಷ ಕೂಪನ್ ಒಂದನ್ನು ನೀಡಲಾಗಿದ್ದು, ಈ ಮೂಲಕ ಉಚಿತ ಕ್ಯಾಬ್ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.

ಕ್ಯಾಬ್‌ನಲ್ಲೇ ಜನಿಸಿದ ಮಗುವಿಗೆ ಭರ್ಜರಿ ಉಡುಗೊರೆ ಕೊಟ್ಟ ಓಲಾ..!!

ಅಷ್ಟೇ ಅಲ್ಲದೆ ಈಶ್ವರಿ ಸಿಂಗ್ ವಿಶ್ವಕರ್ಮ ಅವರಿಗೆ ನೋವು ಕಾಣಿಸಿಕೊಂಡಾಗ ಸಮಯ ಪ್ರಜ್ಞೆ ಮೇರೆದ ಕ್ಯಾಬ್‌ ಚಾಲಕ ಯಶ್ವಂತ್ ಗಲಾಂಡೆ ಅವರಿಗೂ ವಿಶ್ವಕರ್ಮ ಕುಂಟುಂಬಸ್ಥರು ಮತ್ತು ಓಲಾ ಸಂಸ್ಥೆಯು ಅಭಿನಂದನೆ ಸಲ್ಲಿಸಿದ್ದು, ಅದೃಷ್ಟವಶಾತ್ ತಾಯಿ ಮಗುವಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ.

Read more on ಕ್ಯಾಬ್ cab
English summary
Read in Kannada about Woman gives birth to baby boy in Ola cab. This is what the company gifted her.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark