ಬೆಂಗಳೂರಿನಲ್ಲಿ ಹೊಸ ಪ್ರಯೋಗ- ಇನ್ಮುಂದೆ ಆನ್‌ಲೈನ್‌ನಲ್ಲೇ ಪೆಟ್ರೋಲ್ ಆರ್ಡರ್ ಮಾಡಿ..!

Written By:

ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಕಂಪನಿಯೊಂದು ಆ್ಯಪ್ ಆಧರಿತ ಸೇವೆ ಮೂಲಕ ಪೆಟ್ರೋಲ್, ಡಿಸೇಲ್‌ ಪೂರೈಕೆಗೆ ಮುಂದಾಗಿದ್ದು, ವಿನೂತನ ರೀತಿಯ ಪ್ರಯೋಗಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.

To Follow DriveSpark On Facebook, Click The Like Button
ಇನ್ಮುಂದೆ ಆನ್‌ಲೈನ್‌ನಲ್ಲೇ ಪೆಟ್ರೋಲ್, ಡೀಸೆಲ್ ಆರ್ಡರ್ ಮಾಡಿ..!

ಈ ಹಿಂದೆ ನೀವು ಇದೇ ಲೇಖನದಲ್ಲಿ ಕೇಂದ್ರ ಸರ್ಕಾರದ ಹೊಸ ಯೋಜನೆಯೊಂದರ ಪ್ರಕಾರ ಇನ್ಮುಂದೆ ಆನ್‌ಲೈನ್‌ನಲ್ಲಿ ದಿನನಿತ್ಯದ ವಸ್ತುಗಳನ್ನು ಖರೀದಿ ಮಾಡುವ ರೀತಿಯಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಕೂಡಾ ಖರೀದಿ ಮಾಡಬಹುದಾಗಿದೆ ಎಂದು ಓದಿದ್ದೀರಿ.

ಇನ್ಮುಂದೆ ಆನ್‌ಲೈನ್‌ನಲ್ಲೇ ಪೆಟ್ರೋಲ್, ಡೀಸೆಲ್ ಆರ್ಡರ್ ಮಾಡಿ..!

ಅದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಇದೀಗ ಸ್ಟಾರ್ಟ್ ಅಪ್ ಕಂಪನಿಯೊಂದು ಆ್ಯಪ್ ಮೂಲಕ ಅಗತ್ಯ ಗ್ರಾಹಕರಿಗೆ ಪೆಟ್ರೋಲ್ ಮತ್ತು ಡಿಸೇಲ್ ಅನ್ನು ಪೂರೈಕೆ ಮಾಡಲಿದೆ.

ಇನ್ಮುಂದೆ ಆನ್‌ಲೈನ್‌ನಲ್ಲೇ ಪೆಟ್ರೋಲ್, ಡೀಸೆಲ್ ಆರ್ಡರ್ ಮಾಡಿ..!

www.mypetrolpump.com ನಲ್ಲಿ ನೀವು ಕೂಡಾ ನಿಮ್ಮ ಮನೆ ಬಾಗಿಲಿಗೆ ಪೆಟ್ರೋಲ್, ಡಿಸೇಲ್ ತರಿಸಿಕೊಳ್ಳಬಹುದಾಗಿದ್ದು, ಮುಂಜಾನೆ 6 ರಿಂದ ರಾತ್ರಿ 8 ಗಂಟೆಯವರೆಗೆ ಸೇವೆ ಲಭ್ಯವಿರಲಿದೆ.

ಇನ್ಮುಂದೆ ಆನ್‌ಲೈನ್‌ನಲ್ಲೇ ಪೆಟ್ರೋಲ್, ಡೀಸೆಲ್ ಆರ್ಡರ್ ಮಾಡಿ..!

ಪೆಟ್ರೋಲ್ ಬಂಕ್‌ಗಳಲ್ಲಿ ಎಷ್ಟು ಬೆಲೆ ನಿಗದಿಯಾಗಿರುತ್ತದೆಯೋ ಅದೇ ಬೆಲೆಯಲ್ಲಿಯೇ ನಿಮಗೆ ಪೆಟ್ರೋಲ್ ದೊರೆಯಲಿದ್ದು, ಹೆಚ್ಚುವರಿಯಾಗಿ ರೂ.99 ವಿತರಣಾ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

ಇನ್ಮುಂದೆ ಆನ್‌ಲೈನ್‌ನಲ್ಲೇ ಪೆಟ್ರೋಲ್, ಡೀಸೆಲ್ ಆರ್ಡರ್ ಮಾಡಿ..!

ಅಂದರೇ ನೀವು 1 ಲೀಟರ್ ಪೆಟ್ರೋಲ್ ಅಥವಾ ಡಿಸೇಲ್ ಆರ್ಡರ್ ಮಾಡದ್ದಲ್ಲಿ ಪೆಟ್ರೋಲ್ ಬೆಲೆ ಪ್ಲಸ್ ಹೆಚ್ಚುವರಿಯಾಗಿ ರೂ.99 ವಿತರಣಾ ಶುಲ್ಕ ಅನ್ವಯವಾಗುತ್ತದೆ.

ಇನ್ಮುಂದೆ ಆನ್‌ಲೈನ್‌ನಲ್ಲೇ ಪೆಟ್ರೋಲ್, ಡೀಸೆಲ್ ಆರ್ಡರ್ ಮಾಡಿ..!

ಹೊಸ ಯೋಜನೆಯಿಂದ ಏನ್ ಉಪಯೋಗ?

ಹೊಸ ಯೋಜನೆಯಿಂದ ಸಾಕಷ್ಟು ಪ್ರಯೋಜಗಳಿವೆ. ಯಾಕೇಂದ್ರೆ ನೀವು 1 ಲೀಟರ್ ಪೆಟ್ರೋಲ್ ಆರ್ಡರ್ ಮಾಡಿದರು ರೂ.99 ವಿತರಣಾ ಶುಲ್ಕ ಅನ್ವಯವಾಗುತ್ತೆ. ಜೊತೆಗೆ 100 ಲೀಟರ್ ಪೆಟ್ರೋಲ್ ಆರ್ಡರ್ ಮಾಡಿದ್ರು ರೂ.99 ವಿತರಣಾ ಶುಲ್ಕ ಅನ್ವಯವಾಗುತ್ತೆ.

ಇನ್ಮುಂದೆ ಆನ್‌ಲೈನ್‌ನಲ್ಲೇ ಪೆಟ್ರೋಲ್, ಡೀಸೆಲ್ ಆರ್ಡರ್ ಮಾಡಿ..!

ಎಲ್ಲೆಲ್ಲಿ ಹೊಸ ಯೋಜನೆ ಲಭ್ಯ?

ಸದ್ಯ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್, ಕೋರಮಂಗಲ, ಬೆಳ್ಳಂದೂರು, ಬಿಟಿಎಂ ಲೇಔಟ್ ಮತ್ತು ಬೊಮ್ಮನಹಳ್ಳಿಯಲ್ಲಿ ಈ ಸೇವೆ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಬೆಂಗಳೂರಿನ ಎಲ್ಲ ಕಡೆಗೂ ಇದು ಲಭ್ಯವಾಗಲಿದೆ.

ಇನ್ಮುಂದೆ ಆನ್‌ಲೈನ್‌ನಲ್ಲೇ ಪೆಟ್ರೋಲ್, ಡೀಸೆಲ್ ಆರ್ಡರ್ ಮಾಡಿ..!

ಇನ್ನು ಹೊಸದಾಗಿ ಆರಂಭಗೊಂಡ ಹಿನ್ನೆಲೆ ಮುಂಜಾನೆ 6 ಗಂಟೆಯಿಂದ ರಾತ್ರಿ 8 ಗಂಟೆಯ ತನಕ ಮಾತ್ರ ಈ ಸೇವೆ ಲಭ್ಯವಿಲಿದ್ದು, ಇಷ್ಟರಲ್ಲೇ 24X7 ಮಾದರಿಯಲ್ಲಿ ಆ್ಯಪ್ ಸೇವೆಯ ಮೂಲಕ ಪೆಟ್ರೋಲ್ ಮತ್ತು ಡಿಸೇಲ್ ಲಭ್ಯವಾಗಲಿದೆ.

ಇನ್ಮುಂದೆ ಆನ್‌ಲೈನ್‌ನಲ್ಲೇ ಪೆಟ್ರೋಲ್, ಡೀಸೆಲ್ ಆರ್ಡರ್ ಮಾಡಿ..!

ಒಟ್ಟಿನಲ್ಲಿ ಅಗತ್ಯ ಸಂದರ್ಭಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಪರದಾಟು ಜನತೆಗೆ ಯೋಜನೆ ಉಪಯೋಗವಾಗಲಿದ್ದು, ಆದಷ್ಟು ಬೇಗ ಈ ಯೋಜನೆ ಬೆಂಗಳೂರಿನ ಎಲ್ಲ ಲಭ್ಯವಾದಲ್ಲಿ ಇನ್ನಷ್ಟು ಅನುಕೂಲವಾಗಲಿದೆ.

English summary
Read in Kannada about Now You Can Order Fuel Online In Bangaloru.
Story first published: Thursday, June 22, 2017, 12:17 [IST]
Please Wait while comments are loading...

Latest Photos