ಬಿಡುಗಡೆಗೆ ಸಜ್ಜುಗೊಂಡ ಹೊಸ ಮಾದರಿಯ ರೇಂಜ್ ರೋವರ್ ವೆಲಾರ್

Written By:

ಸುಧಾರಿತ ತಂತ್ರಜ್ಞಾನವನ್ನು ಹೊಂದಿರುವ ರೇಂಜ್ ರೋವರ್‌ ಐಷಾರಾಮಿ ವೆಲಾರ್‌ ಕಾರು ಸದ್ಯದಲ್ಲೇ ಬಿಡುಗಡೆಗೊಳ್ಳಲಿದ್ದು, ಈ ಹಿನ್ನೆಲೆ ಹೊಸ ಕಾರು ಖರೀದಿಗಾಗಿ ಆನ್‌ಲೈನ್‌ ಬುಕ್ಕಿಂಗ್‌ ಕೂಡಾ ಆರಂಭಗೊಂಡಿದೆ.

To Follow DriveSpark On Facebook, Click The Like Button
ಬಿಡುಗಡೆಗೆ ಸಜ್ಜುಗೊಂಡ ಹೊಸ ಮಾದರಿಯ ರೋಂಜ್ ರೋವರ್ ವೆಲಾರ್

ಬ್ರಿಟನ್‌ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಶೇ.85ರಷ್ಟು ಪಾಲು ಹೊಂದಿರುವ ಜಾಗ್ವಾರ್‌ ಲ್ಯಾಂಡ್‌ರೋವರ್‌ನ ಹೊಸ ಮಾದರಿಯ ವೆಲಾರ್‌ ಲಂಡನ್‌ನ ವೆಸ್ಟ್‌ಮಿಡ್‌ಲ್ಯಾಂಡ್‌ ಸೊಲಿಹುಲ್‌ ಘಟಕದಲ್ಲಿ ನಿರ್ಮಾಣವಾಗಿದ್ದು, ಸದ್ಯದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಬಿಡುಗಡೆಗೆ ಸಜ್ಜುಗೊಂಡ ಹೊಸ ಮಾದರಿಯ ರೋಂಜ್ ರೋವರ್ ವೆಲಾರ್

ರೇಂಜ್ ರೋವರ್‌ ವೇಲಾರ್ ಮುಂಭಾಗವು ಹಗುರವಾದ ಅಲ್ಯೂಮಿನಿಯಂ ಆರ್ಕಿಟೆಕ್ಚರ್‌ನಿಂದ ನಿರ್ಮಾಣಗೊಂಡಿದ್ದು ಅತ್ಯಾಧುನಿಕ ಅಲ್ಟ್ರಾಕ್ಲೀನ್‌ ಯುಕೆ ನಿರ್ಮಿತ ಇಗ್ನಿಯಂ ಪೆಟ್ರೋಲ್‌ ಮತ್ತು ಡಿಸೇಲ್‌ ಎಂಜಿನ್‌ ಹೊಂದಿರಲಿವೆ.

ಬಿಡುಗಡೆಗೆ ಸಜ್ಜುಗೊಂಡ ಹೊಸ ಮಾದರಿಯ ರೋಂಜ್ ರೋವರ್ ವೆಲಾರ್

ಹೀಗಾಗಿ 177-ಬಿಎಚ್‌ಪಿ ಮತ್ತು 430-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದ್ದು, ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಹಾಗೂ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆದುಕೊಳ್ಳಲಿವೆ.

Recommended Video
Ferrari GTC4Lusso And GTC4Lusso T Launched In India - DriveSpark
ಬಿಡುಗಡೆಗೆ ಸಜ್ಜುಗೊಂಡ ಹೊಸ ಮಾದರಿಯ ರೋಂಜ್ ರೋವರ್ ವೆಲಾರ್

ಇನ್ನು 4,803 ಎಂಎಂ ಉದ್ದ, 1903 ಎಂಎಂ ಅಗಲ, 2,874 ಎಂಎಂ ವೀಲ್ಹ್ ಬೇಸ್ ಹೊಂದಿದ್ದು, ಸುರಕ್ಷೆತೆಗಾಗಿ ಎಬಿಎಸ್, 10-ಇಂಚಿನ ಹೆಚ್‌ಡಿ ಟಚ್ ಸ್ಕೀನ್ ಇನ್ಪೋಮೆಟಿಕ್ ಡಿಸ್‌ಪೈ ಕೂಡಾ ಒದಗಿಸಲಾಗಿದೆ.

ಬಿಡುಗಡೆಗೆ ಸಜ್ಜುಗೊಂಡ ಹೊಸ ಮಾದರಿಯ ರೋಂಜ್ ರೋವರ್ ವೆಲಾರ್

ಜೊತೆಗೆ ಹೊಸ ಮಾದರಿಯ ವೆಲಾರ್‌ ರೇಂಜ್‌ ರೋವರ್‌ ಇವೊಕ್‌ ಮತ್ತು ರೇಂಜ್‌ ರೋವರ್‌ ಸ್ಪೋರ್ಟ್ಸ್ ಮಾದರಿಗಳಿಂತಲೂ ವಿಭಿನ್ನತೆಯನ್ನು ಹೊಂದಿದ್ದು, ಈ ಅಪೂರ್ವ ವಾಹನ ವಿಶ್ವಾದ್ಯಂತ ಲ್ಯಾಂಡ್‌ರೋವರ್‌ ಜಾಲ ಇರುವ 100ಕ್ಕೂ ಹೆಚ್ಚು ಮಾರುಕಟ್ಟೆಗಳಿಗೆ ಸದ್ಯದಲ್ಲೇ ಲಗ್ಗೆ ಇಡಲಿವೆ.

ಬಿಡುಗಡೆಗೆ ಸಜ್ಜುಗೊಂಡ ಹೊಸ ಮಾದರಿಯ ರೋಂಜ್ ರೋವರ್ ವೆಲಾರ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಮಾರುಕಟ್ಟೆಯಲ್ಲಿ ಐಷಾರಾಮಿ ಕಾರು ವಿಭಾಗದಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಆಡಿ ಕ್ಯೂ3, ಬಿಎಂಡಬ್ಲ್ಯು ಎಕ್ಸ್1 ಮತ್ತು ಮುಂಬರುವ ಎಕ್ಸ್‌ಸಿ 60ಮಾದರಿಗಳನ್ನು ಹಿಂದಿಕ್ಕಲು ಅಭಿವೃದ್ಧಿಗೊಳಿಸಲಾಗಿದ್ದು, ಮುಂದಿನ ತಿಂಗಳು ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ.

English summary
Read in Kannada about Range Rover Velar Spotted In India Ahead Of Official Launch.
Story first published: Tuesday, August 29, 2017, 18:36 [IST]
Please Wait while comments are loading...

Latest Photos