ಆಡಿ ಕಂಪನಿಯ ಸಿಇಒ ಸ್ಥಾನಕ್ಕೆ ಸ್ಟೀಫನ್ ವಿಂಕೆಲ್ಮನ್ ರಾಜೀನಾಮೆ

Written By:

ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಆಡಿ ಸ್ಪೋರ್ಟ್ ಕಂಪನಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಸ್ಟೀಫನ್ ವಿಂಕೆಲ್ಮನ್ ಅವರು ಧಿಡೀರನೆ ಕಂಪನಿಯಿಂದ ಹೊರಬಂದಿದ್ದಾರೆ.

ಆಡಿ ಕಂಪನಿಯ ಸಿಇಒ ಸ್ಥಾನಕ್ಕೆ ಸ್ಟೀಫನ್ ವಿಂಕೆಲ್ಮನ್ ರಾಜೀನಾಮೆ

ಬುಗಾಟಿ ಕಂಪನಿಗೆ ಸೇರುವ ಸಲುವಾಗಿ ಸ್ಟೀಫನ್ ವಿಂಕೆಲ್ಮನ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದ್ದು, ಮುಂಬರುವ ದಿನಗಳಲ್ಲಿ ಬುಗಾಟಿ ಕಂಪನಿಯ ಫ್ರಾನ್ಸ್ ವಿಭಾಗದ ನೇತೃತ್ವ ವಹಿಸಲಿದ್ದಾರೆ ಎಂಬ ಮಾಹಿತಿಯನ್ನು ಭಾರತದ ಹೆಸರಾಂತ ಆನ್ಲೈನ್ ವೆಬ್‌ಸೈಟ್ ಒಂದು ಹೊರಹಾಕಿದೆ.

ಆಡಿ ಕಂಪನಿಯ ಸಿಇಒ ಸ್ಥಾನಕ್ಕೆ ಸ್ಟೀಫನ್ ವಿಂಕೆಲ್ಮನ್ ರಾಜೀನಾಮೆ

ವೂಲ್ಫ್‌ಗ್ಯಾಂಗ್ ಡುರ್‌ಹೈಮಾರ್ ಅವರಿಂದ ತೆರವಾದ ಸ್ಥಾನಕ್ಕೆ ಸ್ಟೀಫನ್ ವಿಂಕೆಲ್ಮನ್ ಅವರು ಆಯ್ಕೆಯಾಗಿದ್ದು, ಮುಂಬರುವ ದಿನಗಳಲ್ಲಿ ಬ್ರಿಟಿಷ್ ಬ್ರ್ಯಾಂಡ್ ಅವರಿಸಿಕೊಳ್ಳುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ ಎನ್ನಬಹುದು.

ಆಡಿ ಕಂಪನಿಯ ಸಿಇಒ ಸ್ಥಾನಕ್ಕೆ ಸ್ಟೀಫನ್ ವಿಂಕೆಲ್ಮನ್ ರಾಜೀನಾಮೆ

ಆಡಿ ಸ್ಪೋರ್ಟ್ ಕಂಪನಿಯ ಮಾಜಿ ಸಿಇಒ ಸ್ಟೀಫನ್ ವಿಂಕೆಲ್ಮನ್ ಅವರು ಸೂಪರ್ ಕಾರುಗಳ ಬಗ್ಗೆ ಹೆಚ್ಚು ಒಲವು ಹೊಂದಿದ್ದು, ಚಿರೊನ್ ವೇದಿಕೆಯಡಿಯಲ್ಲಿ ಮತ್ತಷ್ಟು ಕಾರುಗಳು ಹೊರಬರುವ ನಿರೀಕ್ಷೆ ಇದೆ.

ಆಡಿ ಕಂಪನಿಯ ಸಿಇಒ ಸ್ಥಾನಕ್ಕೆ ಸ್ಟೀಫನ್ ವಿಂಕೆಲ್ಮನ್ ರಾಜೀನಾಮೆ

ಆಡಿ ಸ್ಪೋರ್ಟ್ ಸಂಸ್ಥೆಯ ಬಗ್ಗೆ ಹೇಳುವುದಾದರೆ, ಆಡಿ ಸಂಸ್ಥೆಯ ಜರ್ಮನಿ ದೇಶದ ಮಾರಾಟ ಮುಖ್ಯಸ್ಥರಾಗಿ ಮತ್ತು ಚೀನಾ ದೇಶದ ಮಾರಾಟ ವಿಭಾಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಮೈಕೆಲ್-ಜೂಲಿಯಸ್ ರೆನ್ಜ್ ಅವರು ವಿಂಕೆಲ್ಮನ್ ಸ್ಥಾನವನ್ನು ತುಂಬಲಿದ್ದಾರೆ.

ಆಡಿ ಕಂಪನಿಯ ಸಿಇಒ ಸ್ಥಾನಕ್ಕೆ ಸ್ಟೀಫನ್ ವಿಂಕೆಲ್ಮನ್ ರಾಜೀನಾಮೆ

ಈ ಹಿಂದೆ, ಅಮೇರಿಕ ಮತ್ತು ಚೀನಾ ಮಾರುಕಟ್ಟೆಗಳಿಗೆ ಆಡಿ ಸ್ಪೋರ್ಟ್ ಎಸ್‌ಯುವಿ ಕಾರುಗಳನ್ನು ತಯಾರಿಸಲು ಸ್ಟೀಫನ್ ವಿಂಕೆಲ್ಮನ್ ಪ್ರಮುಖ ಪಾತ್ರವಹಿಸಿದ್ದನ್ನು ನಾವು ಸ್ಮರಿಸಬಹುದಾಗಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಆಡಿ ಕಂಪನಿಯನ್ನು ಆದ್ಯತೆಗಳಿಗನುಗುಣವಾಗಿ ಮರುಸಂಘಟನೆ ನೆಡೆಸಿದ ಶ್ರೇಯಸ್ಸನ್ನು ಸ್ಟೀಫನ್ ಹೊಂದಿದ್ದಾರೆ.

ಆಡಿ ಕಂಪನಿಯ ಸಿಇಒ ಸ್ಥಾನಕ್ಕೆ ಸ್ಟೀಫನ್ ವಿಂಕೆಲ್ಮನ್ ರಾಜೀನಾಮೆ

ಮುಂಬರುವ ಫ್ರಾಂಕ್‌ಫ಼ರ್ಟ್ ಮೋಟಾರ್ ಪ್ರದರ್ಶನದಲ್ಲಿ ಫೋಕ್ಸ್‌ವ್ಯಾಗೆನ್ ಕಂಪನಿಯು ಈ ನಿರ್ವಹಣಾ ವಿಭಾಗದಲ್ಲಿ ಆಗಿರುವಂತಹ ಬದಲಾವಣೆಯ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಮಾಡಲು ನಿರೀಕ್ಷೆ ಇದೆ.

English summary
Stephan Winkelmann, the CEO of Audi Sport is bidding goodbye to the company to join Bugatti. According to reports by Autocar, the former Audi Sport CEO is heading to France to lead Bugatti.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark