ನೀವೇನಾದ್ರು ಈ ವಿಚಾರ ತಿಳ್ಕೊಳಿಲ್ಲ ಅಂದ್ರೆ..ಖಂಡಿತ ನಿಮ್ ಹೊಸ ಬೈಕ್ ಗುಜುರಿಗೆ ಹಾಕಬೇಕಾಗುತ್ತೆ..!!

ಪರಿಸರಕ್ಕೆ ಧಕ್ಕೆ ಉಂಟು ಮಾಡುವ ಬಿಎಸ್-3 ಎಂಜಿನ್‌ ಸಾಮರ್ಥ್ಯದ ವಾಹನಗಳನ್ನು ಬಂದ್ ಮಾಡುವಂತೆ ಸೂಚಿಸಿರುವ ಸುಪ್ರೀಂಕೋರ್ಟ್, ಉತ್ಪಾದಕರಿಗೆ ಖಡಕ್ ಸೂಚನೆಗಳನ್ನು ನೀಡಿದೆ.

By Praveen

ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಹೊಸ ಕಾಯ್ದೆ ರೂಪಿಸಿರುವ ಸುಪ್ರೀಂಕೋರ್ಟ್, ಇನ್ಮುಂದೆ ಬಿಎಸ್-IV ಮೇಲ್ಪಟ್ಟ ಇಂಜಿನ್ ಸಾಮರ್ಥ್ಯದ ವಾಹನಗಳನ್ನು ಮಾತ್ರ ಉತ್ಪಾದನೆ ಮತ್ತು ಮಾರಾಟ ಮಾಡುವಂತೆ ಆದೇಶ ಹೊರಡಿಸಿದ್ದು, ಬಿಎಸ್-3 ಸಾಮರ್ಥ್ಯದ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಿದೆ.

ವಾಯು ಮಾಲಿನ್ಯವನ್ನು ತಗ್ಗಿಸುತ್ತಾ ಸುಪ್ರೀಂಕೋರ್ಟ್‌ನ ಈ ಖಡಕ್ ರೂಲ್ಸ್..?

ಹೀಗಾಗಿ ಸದ್ಯ ಚಾಲ್ತಿಯಲ್ಲಿರುವ ಬಿಎಸ್-3 ಎಂಜಿನ್ ವಾಹನಗಳನ್ನು ಹೊರತುಪಡಿಸಿ ಹೊಸ ವಾಹನಗಳ ಉತ್ಪಾದನೆ ಮತ್ತು ಮಾರಾಟ ಸಂಪೂರ್ಣ ಬಂದ್ ಆಗಲಿದೆ. ಇದರಿಂದ ನಿಗದಿತ ಪ್ರಮಾಣದಲ್ಲಿ ವಾಯುಮಾಲಿನ್ಯ ತಗ್ಗಲಿದೆ ಎನ್ನಲಾಗುತ್ತಿದೆ.

ವಾಯು ಮಾಲಿನ್ಯವನ್ನು ತಗ್ಗಿಸುತ್ತಾ ಸುಪ್ರೀಂಕೋರ್ಟ್‌ನ ಈ ಖಡಕ್ ರೂಲ್ಸ್..?

ಈ ಮಧ್ಯೆ ವಾಹನ ಉತ್ಪಾದಕರಿಗೆ ಖಡಕ್ ವಾರ್ನ್ ಮಾಡಿರುವ ಸುಪ್ರೀಂಕೋರ್ಟ್, ಬಿಎಸ್-3 ಇಂಜಿನ್ ಸಾಮರ್ಥ್ಯದ ವಾಹನಗಳನ್ನು ಇಂದಿನಿಂದಲೇ ಮಾರಾಟ ಮಾಡದಂತೆ ಆದೇಶ ಹೊರಡಿಸಿದೆ.

ವಾಯು ಮಾಲಿನ್ಯವನ್ನು ತಗ್ಗಿಸುತ್ತಾ ಸುಪ್ರೀಂಕೋರ್ಟ್‌ನ ಈ ಖಡಕ್ ರೂಲ್ಸ್..?

ಈಗಾಗಲೇ ಕೆಲವು ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳು ಹೊಸ ರೂಲ್ಸ್ ಅಳವಡಿಸಿಕೊಳ್ಳುವ ಮೂಲಕ ಬಿಎಸ್-IV ಎಂಜಿನ್ ಸಾಮರ್ಥ್ಯದ ವಾಹನಗಳನ್ನು ಮಾತ್ರ ಉತ್ಪಾದನೆ ಮಾಡುತ್ತಿವೆ. ಆದರೂ ಈ ಹಿಂದೆ ಸ್ಟಾಕ್ ಮಾಡಿಕೊಂಡಿರುವ ಕೆಲವು ಉತ್ಪಾದಕರು ಗ್ರಾಹಕರಿಗೆ ಆಫರ್ ನೀಡುವ ಮೂಲಕ ಬಿಎಸ್-3 ಎಂಜಿನ್ ವಾಹನಗಳನ್ನೇ ಮಾರಾಟ ಮಾಡುತ್ತಿದ್ದಾರೆ.

ವಾಯು ಮಾಲಿನ್ಯವನ್ನು ತಗ್ಗಿಸುತ್ತಾ ಸುಪ್ರೀಂಕೋರ್ಟ್‌ನ ಈ ಖಡಕ್ ರೂಲ್ಸ್..?

ಏಪ್ರಿಲ್ ನಂತರ ಬಿಎಸ್-3 ಎಂಜಿನ್ ಹೊಸ ವಾಹನಗಳು ಮೂಲೆಗುಂಪಾಗಲಿದ್ದು, ಇವುಗಳನ್ನು ಈಗಲೇ ಮಾರಾಟಗೊಳಿಸಲು ಕೆಲವು ವಾಹನ ಉತ್ಪಾದಕರು ಮತ್ತು ಡೀಲರ್ ಹತ್ತಾರು ತಂತ್ರಗಳನ್ನು ರೂಪಿಸುತ್ತಿದ್ದಾರೆ. ಹೀಗಾಗಿ ವಾಹನ ಖರೀದಿದಾರರಿಗೂ ಇದೀಗ ಸುಗ್ಗಿ ಕಾಲ ಎಂದೇ ಹೇಳಬಹುದು.

ವಾಯು ಮಾಲಿನ್ಯವನ್ನು ತಗ್ಗಿಸುತ್ತಾ ಸುಪ್ರೀಂಕೋರ್ಟ್‌ನ ಈ ಖಡಕ್ ರೂಲ್ಸ್..?

ಸುಪ್ರೀಂಕೋರ್ಟ್‌ನ ಹೊಸ ಕಾಯ್ದೆಯಿಂದಾಗಿ ಸುಮಾರು 20 ಸಾವಿರ ಕಾರುಗಳು, 7 ಲಕ್ಷ 50 ಸಾವಿರ ಬೈಕ್‌ಗಳು ಮತ್ತು 47 ಸಾವಿರ ಮೂರು ಚಕ್ರದ ವಾಹನಗಳು ಸದ್ಯದಲ್ಲೇ ಮೂಲೆಗುಂಪಾಗಲಿವೆ. ಇವುಗಳನ್ನು ಯಾವುದೇ ಕಾರಣಕ್ಕೂ ಆಫರ್‌ಗಳ ಮೂಲಕ ಮಾರಾಟ ಮಾಡದಂತೆ ಸುಪ್ರೀಂ ಖಡಕ್ ಸೂಚನೆ ನೀಡಿದೆ.

ವಾಯು ಮಾಲಿನ್ಯವನ್ನು ತಗ್ಗಿಸುತ್ತಾ ಸುಪ್ರೀಂಕೋರ್ಟ್‌ನ ಈ ಖಡಕ್ ರೂಲ್ಸ್..?

ಕೇವಲ ಬಿಎಸ್-IV ಎಂಜಿನ್ ಕಡ್ಡಾಯ ಮಾತ್ರವಲ್ಲದೇ AHO(ಅಟೋಮೆಟಿಕ್ ಹೆಡ್‌ಲೈಟ್ ಆನ್) ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿರಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ವಾಯು ಮಾಲಿನ್ಯವನ್ನು ತಗ್ಗಿಸುತ್ತಾ ಸುಪ್ರೀಂಕೋರ್ಟ್‌ನ ಈ ಖಡಕ್ ರೂಲ್ಸ್..?

ಸುಪ್ರೀಂಕೋರ್ಟ್ ಆದೇಶದಂತೆ ಇನ್ಮುಂದೆ ಬಿಎಸ್-IV ಎಂಜಿನ್ ಮತ್ತು AHO(ಆಟೋಮೆಟಿಕ್ ಹೆಡ್‌ಲ್ಯಾಂಪ್ ಆನ್) ವ್ಯವಸ್ಥೆ ಇಲ್ಲದ ಯಾವುದೇ ವಾಹನಗಳು ಮಾರಾಟ ಮತ್ತು ಉತ್ಪಾದನೆ ಎಲ್ಲವೂ ಬಂದ್ ಆಗಲಿದೆ.

ವಾಯು ಮಾಲಿನ್ಯವನ್ನು ತಗ್ಗಿಸುತ್ತಾ ಸುಪ್ರೀಂಕೋರ್ಟ್‌ನ ಈ ಖಡಕ್ ರೂಲ್ಸ್..?

ಒಂದು ವೇಳೆ ನೀವು ಈ ಮೇಲಿನ ಎರಡು ವ್ಯವಸ್ಥೆಗಳು ಇಲ್ಲದ ವಾಹನಗಳನ್ನು ಖರೀದಿ ಮಾಡಿದರೂ ಆರ್‌ಟಿಓಗಳಲ್ಲಿ ಇವುಗಳನ್ನು ನೋಂದಣಿ ಮಾಡಿಕೊಳ್ಳಲಾಗುವುದಿಲ್ಲ. ಅಲ್ಲದೇ ಅವುಗಳಿಗೆ ಮಾನ್ಯತೆ ಕೂಡಾ ಇರುವುದಿಲ್ಲ. ಹೀಗಾಗಿ ಖದೀರಿಗೂ ಮುನ್ನ ಈ ವಿಚಾರಗಳನ್ನು ತಿಳಿದುಕೊಂಡೇ ವಾಹನಗಳನ್ನು ಆಯ್ಕೆ ಮಾಡಿ.

ವಾಯು ಮಾಲಿನ್ಯವನ್ನು ತಗ್ಗಿಸುತ್ತಾ ಸುಪ್ರೀಂಕೋರ್ಟ್‌ನ ಈ ಖಡಕ್ ರೂಲ್ಸ್..?

ಈಗಾಗಲೇ ವಿವಿಧ ದೇಶಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದ್ದು, ಹಗಲು ವೇಳೆಯೂ ಬೈಕ್ ಚಾಲನೆ ವೇಳೆ ಆಟೋಮೆಟಿಕ್ ಹೆಡ್‌ಲ್ಯಾಂಪ್ ಆನ್ ಮಾಡಿಕೊಂಡೇ ಇರಬೇಕಿರುವುದು ಕಡ್ಡಾಯವಾಗಿದೆ. ಜೊತೆಗೆ ಬಿಎಸ್-IV ಎಂಜಿನ್ ಹೊಂದಿರುವುದನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗಿದೆ.

ವಾಯು ಮಾಲಿನ್ಯವನ್ನು ತಗ್ಗಿಸುತ್ತಾ ಸುಪ್ರೀಂಕೋರ್ಟ್‌ನ ಈ ಖಡಕ್ ರೂಲ್ಸ್..?

ಈ ನಿಟ್ಟಿನಲ್ಲಿ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಕೆಲವು ಬೈಕ್ ಮಾದರಿಗಳು ಜಾರಿಯಾಗಲಿರುವ ಹೊಸ ರೂಲ್ಸ್ ಅಳವಡಿಕೆ ಮಾಡಿಕೊಂಡಿವೆ. ಆದರೂ ಎಲ್ಲ ಮಾದರಿಗಳಲ್ಲೂ ಈ ವ್ಯವಸ್ಥೆ ಜಾರಿಯಾಗಬೇಕಿದ್ದು, ಈ ಕುರಿತಂತೆ ಕೇಂದ್ರಕ್ಕೆ ಸುಪ್ರೀಂ ಕೆಲವು ಸಲಹೆಗಳನ್ನು ಕೂಡಾ ಸೂಚಿಸಿದೆ.

ವಾಯು ಮಾಲಿನ್ಯವನ್ನು ತಗ್ಗಿಸುತ್ತಾ ಸುಪ್ರೀಂಕೋರ್ಟ್‌ನ ಈ ಖಡಕ್ ರೂಲ್ಸ್..?

ವಾಯು ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಸುಪ್ರೀಂಕೋರ್ಟ್ ಈ ಹೊಸ ರೂಲ್ಸ್ ಜಾರಿಗೆ ತರುತ್ತಿದ್ದು, ಅದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೋ ಗೊತ್ತಿಲ್ಲ. ಆದ್ರೆ ಹೊಸ ಕಾಯ್ದೆಯಿಂದ ಈಗಾಗಲೇ ಉತ್ಪಾದನೆಗೊಂಡಿರುವ ಲಕ್ಷಾಂತರ ಬಿಎಸ್-3 ಎಂಜಿನ್‌ ವಾಹನಗಳು ಮೂಲೆಗುಂಪಾಗುವುದು ಮಾತ್ರ ಗ್ಯಾರೆಂಟಿ.

ವಾಯು ಮಾಲಿನ್ಯವನ್ನು ತಗ್ಗಿಸುತ್ತಾ ಸುಪ್ರೀಂಕೋರ್ಟ್‌ನ ಈ ಖಡಕ್ ರೂಲ್ಸ್..?

ಬಿಡುಗಡೆಗೆ ಸಜ್ಜುಗೊಂಡಿರುವ ಟಾಟಾ ಟಿಗೋರ್ ಕಾರಿನ ಚಿತ್ರಗಳನ್ನು ವೀಕ್ಷಿಸಿಸಲು ಕೆಳಗಿನ ಫೋಟೋ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Most Read Articles

Kannada
English summary
The Supreme Court has ordered vehicle manufacturers to disclose the number of unsold BS3 compliant vehicles still in stock as BS4 norms come into place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X