ಇಂಡೋನೇಷ್ಯಾ ಆಟೋ ಎಕ್ಸ್‌ಪೋ- ಗಮನಸೆಳೆದ ಸುಜುಕಿ ಇಗ್ನಿಸ್ ಎಸ್ ಅರ್ಬನ್

Written By:

ಇಂಡೋನೇಷ್ಯಾದಲ್ಲಿ ನಿನ್ನೆಯಿಂದ ಅಂತರ್‌ರಾಷ್ಟ್ರೀಯ ಮಟ್ಟದ ಆಟೋ ಪ್ರದರ್ಶನ ಆರಂಭಗೊಂಡಿದ್ದು, ಸುಜುಕಿ ನಿರ್ಮಾಣದ ಇಗ್ನಿಸ್ ಎಸ್ ಅರ್ಬನ್ ಕ್ರಾಸ್ ಓವರ್ ಹ್ಯಾಚ್‌ಬ್ಯಾಕ್ ಮಾದರಿಯೊಂದು ಪ್ರದರ್ಶನಗೊಂಡಿದೆ.

To Follow DriveSpark On Facebook, Click The Like Button
ಇಂಡೋನೇಷ್ಯಾ ಆಟೋ ಎಕ್ಸ್‌ಪೋ- ಗಮನಸೆಳೆದ ಸುಜುಕಿ ಇಗ್ನಿಸ್ ಎಸ್ ಅರ್ಬನ್

ಆಪ್ ರೋಡಿಂಗ್ ಪ್ರಿಯರಿಗಾಗಿ ಸುಜುಕಿ ಸಂಸ್ಥೆಯು ಇಗ್ನಿಸ್ ಎಸ್ ಅರ್ಬನ್ ಕಾರು ಮಾದರಿಯನ್ನು ಸಿದ್ಧಗೊಳಿಸಿದ್ದು, ಅತ್ಯುತ್ತಮ ಹೊರ ಮತ್ತು ಒಳ ವಿನ್ಯಾಸಗಳ ಮೂಲಕ ಆಟೋ ಉದ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇಂಡೋನೇಷ್ಯಾ ಆಟೋ ಎಕ್ಸ್‌ಪೋ- ಗಮನಸೆಳೆದ ಸುಜುಕಿ ಇಗ್ನಿಸ್ ಎಸ್ ಅರ್ಬನ್

ಕ್ರಾಸ್ ಓವರ್ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳೊಂದಿಗೆ ಸುಜುಕಿ ಇಗ್ನಿಸ್ ಎಸ್ ಅರ್ಬನ್ ಅಭಿವೃದ್ಧಿ ಪಡಿಸಲಾಗಿದ್ದು, ಎಕ್ಸ್ ಎ ಆಲ್ಫಾ ಪರಿಕಲ್ಪನೆಯ ಸ್ಪೂರ್ತಿಯೊಂದಿಗೆ ಆಪ್ ರೋಡ್ ಬಂಪರ್ ಒದಗಿಸಲಾಗಿದೆ.

ಇಂಡೋನೇಷ್ಯಾ ಆಟೋ ಎಕ್ಸ್‌ಪೋ- ಗಮನಸೆಳೆದ ಸುಜುಕಿ ಇಗ್ನಿಸ್ ಎಸ್ ಅರ್ಬನ್

ಇದಲ್ಲದೇ ಬ್ಯಾನೆಟ್ ರಚನೆ ಮತ್ತು ಆಪ್ ರೋಡ್ ಟೈರ್‌ಗಳನ್ನು ಪಡೆದುಕೊಂಡಿರುವ ಇಗ್ನಿಸ್ ಎಸ್ ಅರ್ಬನ್, ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಕೂಡಾ ಹೊಂದಿದೆ.

Recommended Video - Watch Now!
TVS Jupiter Classic Launched In India | In Kannada - DriveSpark ಕನ್ನಡ
ಇಂಡೋನೇಷ್ಯಾ ಆಟೋ ಎಕ್ಸ್‌ಪೋ- ಗಮನಸೆಳೆದ ಸುಜುಕಿ ಇಗ್ನಿಸ್ ಎಸ್ ಅರ್ಬನ್

ಎಂಜಿನ್

ಇಗ್ನಿಸ್ ಎಸ್ ಅರ್ಬನ್ ಆವೃತ್ತಿಯು 1.2-ಲೀಟರ್ ಕೆ ಸೀರಿಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 82-ಬಿಎಚ್‌ಪಿ ಮತ್ತು 113-ಬಿಎಚ್‌ಪಿ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದೆ.

ಇಂಡೋನೇಷ್ಯಾ ಆಟೋ ಎಕ್ಸ್‌ಪೋ- ಗಮನಸೆಳೆದ ಸುಜುಕಿ ಇಗ್ನಿಸ್ ಎಸ್ ಅರ್ಬನ್

ಹೀಗಾಗಿಯೇ ಸುಧಾರಿತ ಬೀಡಿಭಾಗಗಳನ್ನು ಹೊಂದಿರುವ ಇಗ್ನಿಸ್ ಎಸ್ ಅರ್ಬನ್, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಎಎಂಟಿ ಗೇರ್‌ಬಾಕ್ಸ್‌ನೊಂದಿಗೆ ಆಪ್ ರೋಡಿಂಗ್ ಕೌಶಲ್ಯ ಪ್ರದರ್ಶನಕ್ಕೆ ಸಹಕಾರಿಯಾಗುವ ವಿನ್ಯಾಸ ಹೊಂದಿದೆ.

ಇಂಡೋನೇಷ್ಯಾ ಆಟೋ ಎಕ್ಸ್‌ಪೋ- ಗಮನಸೆಳೆದ ಸುಜುಕಿ ಇಗ್ನಿಸ್ ಎಸ್ ಅರ್ಬನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಇತ್ತೀಚೆಗೆ ಆಪ್ ರೋಡಿಂಗ್ ಕೌಶಲ್ಯತೆಗಳು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಯೋಜನೆ ಕೈಗೊಂಡಿರುವ ಸುಜುಕಿ ಸಂಸ್ಥೆಯು ಮಧ್ಯಮ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಅಗ್ಗದ ಬೆಲೆಯಲ್ಲಿ ಉತ್ತಮ ಮಾದರಿಯ ಆಪ್ ರೋಡಿಂಗ್ ಕಾರು ಮಾದರಿಯನ್ನು ಬಿಡುಗಡೆಗೊಳಿಸುವ ತವಕದಲ್ಲಿದೆ.

Read more on ಸುಜುಕಿ suzuki
English summary
Read in Kannada about Suzuki Ignis S Urban Concept Showcased In Indonesia.
Story first published: Friday, August 11, 2017, 13:01 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark