ಜಪಾನ್‌ನಲ್ಲಿ ಬಿಡುಗಡೆಗೊಂಡಿರುವ ಈ ಹೈಬ್ರಿಡ್ ಕಾರು 32 ಕಿ.ಮೀ ಮೈಲೇಜ್ ನೀಡುತ್ತೆ !!
ಜಪಾನಿನ ಮಾರುಕಟ್ಟೆಗೆ ಸ್ವಿಫ್ಟ್ ಹೈಬ್ರಿಡ್ ಕಾರನ್ನು ಸುಜುಕಿ ಮೋಟರ್ಸ್ ಅನಾವರಣಗೊಳಿಸಿದೆ. ಈ ಕಾರು ಸ್ವಿಫ್ಟ್ ಹೈಬ್ರಿಡ್ ಎಸ್‌ಜಿ ಮತ್ತು ಸ್ವಿಫ್ಟ್ ಹೈಬ್ರಿಡ್ ಎಸ್ಎಲ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಂಡಿದೆ.
ಜಪಾನಿನ ಮಾರುಕಟ್ಟೆಗೆ ಸ್ವಿಫ್ಟ್ ಹೈಬ್ರಿಡ್ ಕಾರನ್ನು ಸುಜುಕಿ ಮೋಟರ್ಸ್ ಅನಾವರಣಗೊಳಿಸಿದೆ. ಈ ಕಾರು ಸ್ವಿಫ್ಟ್ ಹೈಬ್ರಿಡ್ ಎಸ್‌ಜಿ ಮತ್ತು ಸ್ವಿಫ್ಟ್ ಹೈಬ್ರಿಡ್ ಎಸ್ಎಲ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಂಡಿದೆ.

ಸ್ವಿಫ್ಟ್ ಹೈಬ್ರಿಡ್ ಕಾರು 91 ಪಿಎಸ್ 1.2 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 10 ಕೆ.ವಿ ಮೋಟಾರ್ ಜನರೇಟರ್ ಯುನಿಟ್ ಮೋಟರ್ ಮತ್ತು 5-ಸ್ಪೀಡ್ AGS(ಆಟೋಮೇಟೆಡ್ ಮಾನ್ಯುಯಲ್ ಟ್ರಾನ್ಸ್‌ಮಿಷನ್) ಗೇರ್‌ಬಾಕ್ಸ್ ಹೊಂದಿರಲಿದೆ.

ಕಡಿಮೆ ಹೊರೆ ಹೊಂದಿರುವ ಸಂದರ್ಭದಲ್ಲಿ, ಸಿಸ್ಟಮ್ ಎಂಜಿನ್ ಬಂದ್ ಮಾಡಿ, ಸಂಪೂರ್ಣ ವಿದ್ಯುತ್ ಮೋಡ್‌ನಲ್ಲಿ ಬಹಳ ಕಡಿಮೆ ದೂರದವರೆಗೂ ಚಲಿಸಬಹುದಾಗಿದೆ.

ಸ್ವಿಫ್ಟ್ ಹೈಬ್ರಿಡ್ ಕಾರು ಅತ್ಯದ್ಭುತವೆನ್ನಿಸುವ ಲೀಟರ್‌ಗೆ 32 ಕಿ.ಮೀ (JC08 cycle) ಮೈಲೇಜ್ ನೀಡಲಿದೆ ಮತ್ತು 2WD ಆಯ್ಕೆಯಲ್ಲಿ ಲಭ್ಯವಿದೆ ಎಂದು ಸುಜುಕಿ ಹೇಳಿಕೊಂಡಿದೆ.

ಕಾರಿನ ಹೊರಭಾಗದಲ್ಲಿ ಜಪಾನ್ ಸಂಸ್ಥೆಯ ಹೊಚ್ಚ ಹೊಸ ಹೈಬ್ರಿಡ್ ಸ್ವಿಫ್ಟ್ ಕಾರು ಯಾವುದೇ ರೀತಿಯ ವಿಶಿಷ್ಟ ಲಕ್ಷಣಗಳನ್ನು ಪಡೆದುಕೊಂಡಿಲ್ಲ ಎನ್ನಬಹದು ಹಾಗು ಈ ಕಾರು 3,840 ಮಿ.ಮೀ ಉದ್ದ, 1,695 ಮಿ.ಮೀ ಅಗಲ ಮತ್ತು 1,500 ಮಿ.ಮೀ ಎತ್ತರ ಮತ್ತು 2,450 ಮಿ.ಮೀ ವೀಲ್ ಬೇಸ್ ಹೊಂದಿರಲಿದೆ.

ಒಳಗೆ, ನೀಲಿ ಬಣ್ಣದ AGS ಸೆಲೆಕ್ಟರ್‌ನಲ್ಲಿ ಅಕ್ಸೆಂಟ್ ಹೊಂದಿದೆ ಮತ್ತು ಪ್ಯಾಡಲ್ ಶಿಫ್ಟರ್‌ಗಳನ್ನು ಹೊಂದಿದೆ. ಸ್ವಿಫ್ಟ್ ಹೈಬ್ರಿಡ್ ಸುಜುಕಿ ಡ್ಯುಯಲ್ ಕ್ಯಾಮೆರಾ ಬ್ರೇಕ್ ಸಪೋರ್ಟ್ ಹೊಂದಿರಲಿದೆ.

ದುರದೃಷ್ಟಕರ ಸಂಗತಿಯೆಂದರೆ ಈ ಹೈಬ್ರಿಡ್ ಸ್ವಿಫ್ಟ್ ಕಾರು ಭಾರತದಲ್ಲಿ ಕೆಲವು ಕಾರಣಗಳಿಂದಾಗಿ ಬಿಡುಗಡೆಯ ಭಾಗ್ಯ ಸದ್ಯ ಪಡೆದುಕೊಂಡಿಲ್ಲ ಎನ್ನಲಾಗಿದೆ. ಹೈಬ್ರಿಡ್ ಬದಲು ನಿಯಮಿತ 2018 ಮಾರುತಿ ಸ್ವಿಫ್ಟ್ 1.2 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಡಿಡಿಐಎಸ್ ಡೀಸೆಲ್ ರೂಪಾಂತರಗಳನ್ನು ಹೊಂದಿದೆ.

ಜಪಾನಿನ ಮಾರುಕಟ್ಟೆಗೆ ಬಿಡುಗಡೆಗೊಂಡಿರುವ ಸ್ವಿಫ್ಟ್ ಹೈಬ್ರಿಡ್ ಕಾರಿನ ಬೆಲೆ ರೂ. 9,48,156 ರಿಂದ ರೂ. 11,10,371 ಲಕ್ಷ ಹೊಂದಿದೆ.


Click it and Unblock the Notifications








