ಹೊಚ್ಚ ಹೊಸ ಸ್ವಿಫ್ಟ್ ಕಾರಿನ ಮತ್ತಷ್ಟು ಚಿತ್ರಗಳು ಬಿಡುಗಡೆ

Written By:

ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಸುಜುಕಿ ತನ್ನ ಹೊಸ ತಂತ್ರಜ್ಞಾನ ಮತ್ತು ವಿನ್ಯಾಸ ಪಡೆದುಕೊಂಡಿರುವ ಸ್ವಿಫ್ಟ್ ಕಾರನ್ನು ಬಿಡುಗಡೆಗೊಳಿಸಲು ಮುಂದಾಗಿದ್ದು, ಈ ಕಾರಿನ ಮತ್ತಷ್ಟು ಚಿತ್ರಗಳು ಬಿಡುಗಡೆಗೊಂಡಿವೆ.

ಹೊಚ್ಚ ಹೊಸ ಸ್ವಿಫ್ಟ್ ಕಾರಿನ ಮತ್ತಷ್ಟು ಚಿತ್ರಗಳು ಬಿಡುಗಡೆ

ಪ್ರಖ್ಯಾತ ಕಾರು ತಯಾರಕ ಸಂಸ್ಥೆಯಾದ ಸುಜುಕಿ ಹೊಚ್ಚ ಹೊಸ ಸ್ವಿಫ್ಟ್ ಕಾರನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರತಿಷ್ಠಿತ ಫ್ರ್ಯಾಂಕ್‌ಫ಼ರ್ಟ್ ಮೋಟಾರ್ ಷೋನಲ್ಲಿ ಅನಾವರಣಗೊಳಿಸಲು ತಾಯಾರಿ ನೆಡೆಸಿದ್ದು, ಸ್ವಿಫ್ಟ್ ವಾಹನದ ವಿಶೇಷ ಫೋಟೋಗಳು ಹೊರಬಂದಿವೆ.

ಹೊಚ್ಚ ಹೊಸ ಸ್ವಿಫ್ಟ್ ಕಾರಿನ ಮತ್ತಷ್ಟು ಚಿತ್ರಗಳು ಬಿಡುಗಡೆ

ಇತ್ತೀಚಿಗೆ ಕೈಪಿಡಿಯಿಂದ ಸೋರಿಕೆಯಾಗಿದ್ದ ಚಿತ್ರಗಳಿಗಿಂತ ಹೊಸ ಹ್ಯಾಚ್‌ಬ್ಯಾಕ್ ಚಿತ್ರಗಳು ಹೆಚ್ಚು ಸುಂದರವಾದ ಲಕ್ಷಣಗಳನ್ನು ಪಡೆದುಕೊಂಡಿದ್ದು, ಹೆಚ್ಚು ವ್ಯತ್ಯಾಸ ನಾವು ಗಮನಿಸಬಹುದಾಗಿದೆ.

ಹೊಚ್ಚ ಹೊಸ ಸ್ವಿಫ್ಟ್ ಕಾರಿನ ಮತ್ತಷ್ಟು ಚಿತ್ರಗಳು ಬಿಡುಗಡೆ

ಚೂಪಾದ ರೇಖೆಗಳ ವಿನ್ಯಾಸ, ದೊಡ್ಡ ಗ್ರಿಲ್, ಫಾಗ್ ಲ್ಯಾಂಪ್ ಹೌಸಿಂಗ್, ಮರುವಿನ್ಯಾಸಗೊಳಿಸಲಾದ ಬಂಪರ್ ಜೊತೆಗೆ ಹೆಚ್ಚು ಅಪ್ಡೇಟ್ ಆಗಿರುವಂತಹ ಮುಂಭಾಗದ ತಂತುಕೋಶಗಳನ್ನು ನಾವು ಕಾಣಬಹುದಾಗಿದೆ.

ಹೊಚ್ಚ ಹೊಸ ಸ್ವಿಫ್ಟ್ ಕಾರಿನ ಮತ್ತಷ್ಟು ಚಿತ್ರಗಳು ಬಿಡುಗಡೆ

ಕಾರಿನ ಒಳಭಾಗದಲ್ಲಿಯೂ ಸಹ ಬಹಳಷ್ಟು ಬದಲಾವಣೆಗಳನ್ನು ಈ ಕಾರು ಪಡೆದುಕೊಂಡಿದೆ. ಈ ಕಾರಿನ ಡ್ಯಾಶ್‌ಬೋರ್ಡ್ ಕೆಂಪು ಬಣ್ಣದ ಟ್ರಿಪ್ ರೂಪ ಒಳಗೊಂಡಿದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗು ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್ ಸಹ ಕೆಂಪು ಬಣ್ಣ ಪಡೆದುಕೊಂಡಿದೆ.

ಹೊಚ್ಚ ಹೊಸ ಸ್ವಿಫ್ಟ್ ಸ್ಪೋರ್ಟ್ಸ್ ಕಾರಿನ ಮತ್ತಷ್ಟು ಚಿತ್ರಗಳು ಬಿಡುಗಡೆ

ಸ್ಟ್ಯಾಂಡರ್ಡ್ ಸ್ವಿಫ್ಟ್ ಕಾರಿನಲ್ಲಿ ಇರುವಂತಹ ಚಪ್ಪಟೆ ತಳದ ಸ್ಟೀರಿಂಗ್ ಹೊಸ ಆವೃತಿಯಲ್ಲಿಯೂ ಸಹ ಕಾಣಬಹುದಾಗಿದೆ. ಕಾರಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನವೀನ ರೀತಿಯ ಬೂಸ್ಟ್ ಗೌಜ್ ಪಡೆದ್ದುಕೊಳ್ಳಲಿದ್ದು, ಇದನೆಲ್ಲಾ ಗಮನಿಸಿದರೆ ಈ ಕಾರು ಟರ್ಬೊ ಚಾರ್ಜ್ಡ್ ಪಡೆಯುವ ಸಾಧ್ಯತೆ ಇದೆ.

ಹೊಚ್ಚ ಹೊಸ ಸ್ವಿಫ್ಟ್ ಸ್ಪೋರ್ಟ್ಸ್ ಕಾರಿನ ಮತ್ತಷ್ಟು ಚಿತ್ರಗಳು ಬಿಡುಗಡೆ

ಸ್ವಿಫ್ಟ್ ಸ್ಪೋರ್ಟ್ ಕಾರು 1.4-ಲೀಟರ್ ನಾಲ್ಕು ಸಿಲಿಂಡರ್ ಬೂಸ್ಟರ್ ಜೆಟ್ ಎಂಜಿನ್ ಪಡೆದುಕೊಳ್ಳಬಹುದು ಎನ್ನಲಾಗಿದೆ. ಈ ಎಂಜಿನ್ 245 ಏನ್‌ಎಂ ತಿರುಗುಬಲದಲ್ಲಿ 148ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡುವ ಸಾಧ್ಯತೆ ಇದೆ. ಸ್ವಿಫ್ಟ್ ಸ್ಪೋರ್ಟ್ಸ್ ಕಾರು ಎಂಜಿನ್ 6 ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದೆ.

ಹೊಚ್ಚ ಹೊಸ ಸ್ವಿಫ್ಟ್ ಸ್ಪೋರ್ಟ್ಸ್ ಕಾರಿನ ಮತ್ತಷ್ಟು ಚಿತ್ರಗಳು ಬಿಡುಗಡೆ

ಜಪಾನ್ ದೇಶದಲ್ಲಿ ಈ ಹ್ಯಾಚ್ ಬ್ಯಾಕ್ ಕಾರು ವರ್ಷದ ಕೊನೆಯಲ್ಲಿ ಬಿಡುಗಡೆಗೊಳ್ಳಲಿದ್ದು, ಮುಂದಿನ ವರ್ಷದ ದೆಹಲಿ ಆಟೊ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ತನ್ನ ಸ್ವಿಫ್ಟ್ 2018 ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಸಾಧ್ಯತೆ ಇದೆ.

English summary
Suzuki is all set to debut the new Swift Sport at the Frankfurt Motor Show in September 2017. Ahead of that the Japanese automaker has revealed more images of the hot hatch.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark