ಟಾಟಾ ಟಿಯಾಗೊ ಕಾರು ಖರೀದಿಗೆ ಭಾರೀ ಬೇಡಿಕೆ- ಒಂದು ವರ್ಷದಲ್ಲಿ1 ಲಕ್ಷ ಬುಕ್ಕಿಂಗ್..!

ದೇಶಿಯವಾಗಿ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಸಂಸ್ಥೆಯು, ಟಿಯಾಗೊ ಕಾರು ಮಾರಾಟದಲ್ಲಿ ಹೊಸ ದಾಖಲೆ ಮಾಡಿದೆ.

By Praveen

ದೇಶಿಯವಾಗಿ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಸಂಸ್ಥೆಯು, ಟಿಯಾಗೊ ಕಾರು ಮಾರಾಟದಲ್ಲಿ ಹೊಸ ದಾಖಲೆ ಮಾಡಿದೆ. ಅಲ್ಲದೇ ಕಾರು ಖರೀದಿಗೆ ವಿಶೇಷ ಬೇಡಿಕೆ ಬಂದಿದ್ದು, 1 ವರ್ಷ ಅವಧಿಯಲ್ಲಿ 1 ಲಕ್ಷ ಬುಕ್ಕಿಂಗ್ ಪಡೆದುಕೊಳ್ಳಲಾಗಿದೆ.

ಟಿಯಾಗೊ ಕಾರಿಗೆ ಹೆಚ್ಚಿದ ಬೇಡಿಕೆ- ಒಂದು ವರ್ಷದಲ್ಲಿ1 ಲಕ್ಷ ಬುಕ್ಕಿಂಗ್

2016ರಲ್ಲಿ ಬಿಡುಗಡೆಯಾಗಿ ಭರ್ಜರಿ ಮಾರಾಟ ಪ್ರಕ್ರಿಯೆ ಕಂಡಿರುವ ಟಾಟಾ ವಿನೂತನ ಟಿಯಾಗೊ, ಒಂದು ವರ್ಷದ ಅವಧಿಯಲ್ಲಿ 1 ಲಕ್ಷ ಬುಕ್ಕಿಂಗ್ ಪಡೆದುಕೊಳ್ಳುವ ಮೂಲಕ ಹೊಸ ಸಾಧನೆ ಮಾಡಿದೆ.

ಟಿಯಾಗೊ ಕಾರಿಗೆ ಹೆಚ್ಚಿದ ಬೇಡಿಕೆ- ಒಂದು ವರ್ಷದಲ್ಲಿ1 ಲಕ್ಷ ಬುಕ್ಕಿಂಗ್

ಸದ್ಯ ನೋಂದಾಣಿಯಾಗಿರುವ 1 ಲಕ್ಷ ಬುಕ್ಕಿಂಗ್‌ನಲ್ಲಿ 65 ಸಾವಿರ ಕಾರುಗಳನ್ನು ಗ್ರಾಹಕರಿಗೆ ಪೂರೈಕೆ ಮಾಡಲಾಗಿದ್ದು, ಸದ್ಯದಲ್ಲೇ ನೋಂದಾಣಿಗೊಂಡಿರುವ ಇನ್ನುಳಿದ ಬೇಡಿಕೆ ಪ್ರಮಾಣವನ್ನು ಪೂರೈಸಲು ಟಾಟಾ ಎದುರು ನೋಡುತ್ತಿದೆ.

ಟಿಯಾಗೊ ಕಾರಿಗೆ ಹೆಚ್ಚಿದ ಬೇಡಿಕೆ- ಒಂದು ವರ್ಷದಲ್ಲಿ1 ಲಕ್ಷ ಬುಕ್ಕಿಂಗ್

ಸದ್ಯ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ ಟಿಯಾಗೊ ಮಾದರಿ ಮಾತ್ರ ಖರೀದಿಗೆ ಲಭ್ಯವಿದ್ದು, ಅತಿ ಹೆಚ್ಚು ಬೇಡಿಕೆ ಹಿನ್ನೆಲೆ ಟಿಯಾಗೊ ಎಎಂಟಿ(ಆಟೋಮ್ಯಾಟಿಕ್ ಗೇರ್‌ಬಾಕ್ಸ್) ಕಾರು ಮಾದರಿಯನ್ನು ಬಿಡುಗಡೆ ಮಾಡಲು ಟಾಟಾ ಬೃಹತ್ ಯೋಜನೆ ರೂಪಿಸಿದೆ.

ಟಿಯಾಗೊ ಕಾರಿಗೆ ಹೆಚ್ಚಿದ ಬೇಡಿಕೆ- ಒಂದು ವರ್ಷದಲ್ಲಿ1 ಲಕ್ಷ ಬುಕ್ಕಿಂಗ್

ಈ ಬಗ್ಗೆ ಮಾತನಾಡಿರುವ ಟಾಟಾ ಸಮೂಹದ ಹಿರಿಯ ಅಧಿಕಾರಿ ಮಾಯಾಂಕ್ ಪರೀಕ್, ಟಾಟಾ ಕೈಗೊಂಡು ವಿಶೇಷ ಯೋಜನೆಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಮುಂಬರುವ ದಿನಗಳಲ್ಲಿ ಟಾಟಾದಿಂದ ಮತ್ತಷ್ಟು ಹೊಸ ಹೊಸ ಯೋಜನೆಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿವೆ ಎಂದಿದ್ದಾರೆ.

ಟಿಯಾಗೊ ಕಾರಿಗೆ ಹೆಚ್ಚಿದ ಬೇಡಿಕೆ- ಒಂದು ವರ್ಷದಲ್ಲಿ1 ಲಕ್ಷ ಬುಕ್ಕಿಂಗ್

ಇನ್ನು ಹ್ಯಾಚ್‌ಬ್ಯಾಕ್ ಶೈಲಿಯನ್ನು ಹೊಂದಿರುವ ಟಾಟಾ ಟಿಯಾಗೊ ಕಾರು ಮಾದರಿಯೂ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 1.05-ಲೀಟರ್ ಡೀಸೆಲ್ ಎಂಜಿನ್ ವ್ಯವಸ್ಥೆಯನ್ನು ಪಡೆದುಕೊಂಡಿದೆ.

Most Read Articles

Kannada
English summary
Read in Kannada about Tata Tiago Is In High Demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X