ಎಎಂಟಿ ಆಯ್ಕೆ ಹೊಂದಿರುವ ಅತಿ ಕಡಿಮೆ ಬೆಲೆಯ ಟಿಯಾಗೊ ಕಾರು ಬಿಡುಗಡೆಯಾಗುತ್ತೆ

Written By:

ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆಯ ಕಾರಿನ ಬೇಡಿಕೆ ಹೆಚ್ಚಿಗೆಯಾಗುತ್ತಿರುವ ಕಾರಣ ಟಾಟಾ ಮೋಟರ್ಸ್ ಸಂಸ್ಥೆಯು ತನ್ನ ಹೊಸ ಕಾರುಗಳಲ್ಲಿ ಈ ಹೊಸ ತಂತ್ರಜ್ಞಾನವನ್ನು ಅಳವಡಿಕೆ ಮಾಡಲು ಮುಂದಾಗಿದೆ.

To Follow DriveSpark On Facebook, Click The Like Button
ಎಎಂಟಿ ಆಯ್ಕೆ ಪಡೆದ ಅತಿ ಕಡಿಮೆ ಬೆಲೆಯ ಟಿಯಾಗೊ ಕಾರು ಬಿಡುಗಡೆಯಾಗುತ್ತೆ

ಹೌದು, ಇತ್ತೀಚಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಯಶಸ್ಸು ಸಾಧಿಸಿರುವ, ಟಿಯಾಗೊ ಕಾರಿನ ಪ್ರವೇಶ ಮಟ್ಟದ ಕಾರಿನಲ್ಲಿಯೂ ಸಹ ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲು ಸಂಸ್ಥೆ ತೀರ್ಮಾನಿಸಿದ್ದು, ತನ್ನ ಟಿಯಾಗೊ ಕಾರಿನ ಆಗ್ರಾ ರೂಪಾಂತರದಲ್ಲಿ AMT ತೆಗೆದು ಹಾಕಲು ನಿರ್ಧರಿಸಿದೆ.

ಎಎಂಟಿ ಆಯ್ಕೆ ಪಡೆದ ಅತಿ ಕಡಿಮೆ ಬೆಲೆಯ ಟಿಯಾಗೊ ಕಾರು ಬಿಡುಗಡೆಯಾಗುತ್ತೆ

ಕಳೆದ ಮಾರ್ಚ್ 2017ರಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯು ಎಕ್ಸ್‌ಝೆಡ್ ಅಗ್ರ ರೂಪಾಂತರದಲ್ಲಿ ಸ್ವಯಂಚಾಲಿತ ಮ್ಯಾನ್ಯುವಲ್ ಟ್ರಾನ್ಸ್ಮಿಷನ್(AMT) ಗೇರ್‌ಬಾಕ್ಸ್ ಪಡೆದ ಟಿಯಾಗೊ ಕಾರನ್ನು ಬಿಡುಗಡೆ ಮಾಡಿದ್ದನ್ನು ನಾವು ಸ್ಮರಿಸಬಹುದಾಗಿದೆ.

ಎಎಂಟಿ ಆಯ್ಕೆ ಪಡೆದ ಅತಿ ಕಡಿಮೆ ಬೆಲೆಯ ಟಿಯಾಗೊ ಕಾರು ಬಿಡುಗಡೆಯಾಗುತ್ತೆ

ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಸ್ವಯಂಚಾಲಿತ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಹೊಂದಿರುವ ಟಿಯಾಗೊ ಎಕ್ಸ್‌ಟಿ(XTA) ರೂಪಾಂತರದ ಕಾರನ್ನು ಅದ್ದೂರಿಯಾಗಿ ಆರಂಭಿಸುವ ನಿರೀಕ್ಷೆ ವಾಹನೋದ್ಯಮದಲ್ಲಿ ಹರಿದಾಡುತ್ತಿದೆ.

ಎಎಂಟಿ ಆಯ್ಕೆ ಪಡೆದ ಅತಿ ಕಡಿಮೆ ಬೆಲೆಯ ಟಿಯಾಗೊ ಕಾರು ಬಿಡುಗಡೆಯಾಗುತ್ತೆ

ಆಗಸ್ಟ್ ತಿಂಗಳಿನಲ್ಲಿ ಟಾಟಾ ಎಕ್ಸ್‌ಟಿಎ ಟಿಯಾಗೊ ಕಾರಿನ ಉತ್ಪಾದನೆಯನ್ನು ಆರಂಭಿಸಿರುವ ಟಾಟಾ, ಕೇವಲ 300 ಕಾರುಗಳನ್ನು ಮೊದಲ ತಿಂಗಳು ತಯಾರಿಕೆ ಮಾಡುವ ಗುರಿ ಹೊಂದಿದ್ದು, ಮುಂಬರುವ ದಿನಗಳಲ್ಲಿ 500 ಕಾರುಗಳಿಗೆ ಹೆಚ್ಚಿಸುವ ಯೋಜನೆಯನ್ನು ಹಾಕಿಕೊಂಡಿದೆ.

ಎಎಂಟಿ ಆಯ್ಕೆ ಪಡೆದ ಅತಿ ಕಡಿಮೆ ಬೆಲೆಯ ಟಿಯಾಗೊ ಕಾರು ಬಿಡುಗಡೆಯಾಗುತ್ತೆ

ಟಾಟಾ ಟಿಯಾಗೊ XZA ಕಾರು, ಸ್ಟೀರಿಂಗ್ ಮೌಂಟೆಡ್ ಆಡಿಯೋ ಹಾಗು ಫೋನ್ ನಿಯಂತ್ರಣಗಳು, ಎಬಿಎಸ್ & ಇಬಿಡಿ, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ಮುಂಭಾಗದಲ್ಲಿ ಮಂಜು ದೀಪಗಳು, ರಿಯರ್ ವೈಪರ್ ಮತ್ತು ಡಿಫಾಗರ್, ಎಲ್‌ಇಡಿ ತಿರುವು ಹೊಂದಿರುವ ORVMಗಳು ಮತ್ತು ಅಲಾಯ್ ಚಕ್ರಗಳನ್ನು ಪಡೆದುಕೊಂಡಿತ್ತು.

ಎಎಂಟಿ ಆಯ್ಕೆ ಪಡೆದ ಅತಿ ಕಡಿಮೆ ಬೆಲೆಯ ಟಿಯಾಗೊ ಕಾರು ಬಿಡುಗಡೆಯಾಗುತ್ತೆ

ಪ್ರಸ್ತುತ ಬಿಡುಗಡೆಗೊಳ್ಳಲಿರುವ ಎಕ್ಸ್‌ಟಿ ರೂಪಾಂತರವು ಎಎಂಟಿ ಆಯ್ಕೆಯೊಂದಿಗೆ ಮಾತ್ರ ಲಭ್ಯವಿದ್ದು, ಈ ಮೇಲಿನ ವೈಶಿಷ್ಟ್ಯಗಳನ್ನು ಪಡೆದುಕೊಳ್ಳುವುದಿಲ್ಲ ಎಂಬ ಮಾಹಿತಿ ಇದೆ. ಕೆಲವು ಲಕ್ಷಣಗಳ ಹೊರತಾಗಿಯೂ ಖರೀದಿದಾರರಿಗೆ ಕೈಗೆಟುಕುವ ಬೆಲೆಯಲ್ಲಿ ಎಎಂಟಿ ಆಯ್ಕೆ ಹೊಂದಿರುವ ಕಾರು ದೊರೆಯುತ್ತಿರುವುದು ಖುಷಿಯ ವಿಚಾರ ಎನ್ನಬಹುದು.

English summary
Tata Motors launched the Tiago with the Automatic Manual Transmission (AMT) gearbox on the top variant XZ in March 2017 and was available only in the petrol and not in the diesel model.
Story first published: Monday, August 14, 2017, 15:56 [IST]
Please Wait while comments are loading...

Latest Photos