ಬಿಡುಗಡೆಗೆ ಸಜ್ಜುಗೊಂಡಿದೆ ಟಾಟಾ ನಿರ್ಮಾಣದ ಮತ್ತೊಂದು ಹೊಸ ಕಾರು

ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಮತ್ತೊಂದು ಹೊಸ ಕಾರನ್ನು ನಿರ್ಮಾಣ ಮಾಡಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಇದೀಗ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದೆ.

By Praveen

ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಮತ್ತೊಂದು ಹೊಸ ಕಾರನ್ನು ನಿರ್ಮಾಣ ಮಾಡಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಇದೀಗ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ್ದು, ಎಕ್ಸ್451 ಪ್ರಿಮಿಯಂ ಕೋಡ್ ಹೆಸರಿನಲ್ಲಿ ಅಭಿವೃದ್ಧಿ ಮಾಡುತ್ತಿದೆ.

ಬಿಡುಗಡೆಗೆ ಸಜ್ಜುಗೊಂಡಿದೆ ಟಾಟಾ ನಿರ್ಮಾಣದ ಮತ್ತೊಂದು ಹೊಸ ಕಾರು

ಆದ್ರೆ ಅಧಿಕೃತವಾಗಿ ಹೊಸ ಕಾರಿನ ಹೆಸರನ್ನು ಬಹಿರಂಗೊಳಿಸ ಟಾಟಾ ಮೋಟಾರ್ಸ್ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಬಲೆನೊ, ಹ್ಯುಂಡೈ ಎಲೈಟ್ ಐ20 ಮತ್ತು ಹೋಂಡಾ ಝಾ ಆವೃತ್ತಿಗಳನ್ನು ಹೋಲುವ ಮಾದರಿಯಲ್ಲಿ ಹೊರ ವಿನ್ಯಾಸಗಗಳನ್ನು ಕೈಗೊಂಡಿದೆ.

ಬಿಡುಗಡೆಗೆ ಸಜ್ಜುಗೊಂಡಿದೆ ಟಾಟಾ ನಿರ್ಮಾಣದ ಮತ್ತೊಂದು ಹೊಸ ಕಾರು

ಎಕ್ಸ್451 ಆವೃತ್ತಿಯು ಪ್ರಿಮಿಯಂ ಆವೃತ್ತಿಯಾಗಿದ್ದರಿಂದ ಸುಧಾರಿತ ತಂತ್ರಜ್ಞಾನಗಳನ್ನು ಕೂಡಾ ಜೋಡಣೆ ಮಾಡಲಾಗಿದ್ದು, ನೆಕ್ಸ್ಟ್ ಜನರೇಷನ್ ವಿನ್ಯಾಸಗಳ ಜೊತೆ ಅಭಿವೃದ್ಧಿ ಮಾಡಿ ಮಾರುಕಟ್ಟೆಗೆ ಪರಿಚಯಿಸುವ ಇರಾದೆಯಲ್ಲಿದೆ.

Recommended Video

Tata Nexon Price And Features Variant-wise - DriveSpark
ಬಿಡುಗಡೆಗೆ ಸಜ್ಜುಗೊಂಡಿದೆ ಟಾಟಾ ನಿರ್ಮಾಣದ ಮತ್ತೊಂದು ಹೊಸ ಕಾರು

ವರದಿಗಳ ಪ್ರಕಾರ ಟಾಟಾ ಮೋಟಾರ್ಸ್ ಹೊಸ ಕಾರು 1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್‌ಇಡಿ ಡೇ ಟೈಮ್ ಲೈಟಿಂಗ್ ಕೂಡಾ ಪಡೆದುಕೊಂಡಿದೆ.

ಬಿಡುಗಡೆಗೆ ಸಜ್ಜುಗೊಂಡಿದೆ ಟಾಟಾ ನಿರ್ಮಾಣದ ಮತ್ತೊಂದು ಹೊಸ ಕಾರು

ಇದಲ್ಲದೇ ಇದೇ ಆವೃತ್ತಿಯನ್ನು ಸೆಡಾನ್ ಮಾದರಿಯಲ್ಲೂ ಬಿಡುಗಡೆಗೊಳಿಸುತ್ತಿರುವ ಬಗ್ಗೆ ಸುಳಿವು ನೀಡಿರುವ ಟಾಟಾ ಸಂಸ್ಥೆಯು, ಮುಂದಿನ ವರ್ಷ ಮೊದಲ ತ್ರೈಮಾಸಿಕ ವೇಳೆಗೆ ಖರೀದಿ ಲಭ್ಯವಾಗುವಂತೆ ಹೊಸ ಕಾರುಗಳನ್ನು ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಿದೆ.

ಬಿಡುಗಡೆಗೆ ಸಜ್ಜುಗೊಂಡಿದೆ ಟಾಟಾ ನಿರ್ಮಾಣದ ಮತ್ತೊಂದು ಹೊಸ ಕಾರು

ಹೀಗಾಗಿ ಎಕ್ಸ್451 ಕೋಡ್ ನಂಬರ್ ಆವೃತ್ತಿಯು ಸೆಡಾನ್ ಆವೃತ್ತಿಯಲ್ಲಿ ಬಂದಿದ್ದೆ ಆದಲ್ಲಿ ಮಾರುತಿ ಸಿಯಾಜ್, ಹೋಂಡಾ ಸಿಟಿ, ಹ್ಯುಂಡೈ ವೆರ್ನಾ ಮಾದರಿಗಳಿಗೆ ತೀವ್ರ ಪ್ರತಿ ಸ್ಪರ್ಧೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಿಡುಗಡೆಗೆ ಸಜ್ಜುಗೊಂಡಿದೆ ಟಾಟಾ ನಿರ್ಮಾಣದ ಮತ್ತೊಂದು ಹೊಸ ಕಾರು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಇತ್ತೀಚೆಗೆ ನೆಕ್ಸನ್ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸಿ ಹೊಸ ದಾಖಲೆಯ ನೀರಿಕ್ಷೆಯಲ್ಲಿರುವ ಟಾಟಾ ಸಂಸ್ಥೆಯು ಇದೀಗ ಮತ್ತೊಂದು ಹೊಸ ಕಾರನ್ನು ಪರಿಚಯಿಸಲು ಮುಂದಾಗಿದ್ದು, ಮುಂದಿನ ವರ್ಷವಷ್ಟೇ ಖರೀದಿಗೆ ಲಭ್ಯವಾಗಲಿದೆ.

Most Read Articles

Kannada
English summary
Read in Kannada about Tata X451 Premium Hatchback Spotted Testing In India.
Story first published: Friday, October 13, 2017, 13:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X