ತನ್ನ ಕಾರುಗಳ ಬೆಲೆ ಹೆಚ್ಚಳಗೊಳಿಸಿ ಗ್ರಾಹಕರಿಗೆ ಶಾಕ್ ನೀಡಿದ ಟೊಯೊಟಾ

Written By:

ಕಳೆದ ವಾರವಷ್ಟೇ ಕಾರುಗಳ ಜಿಎಸ್‌ಟಿ ಸ್ಲಾಬ್ ಮಾರ್ಪಾಡುಗೊಂಡಿದ್ದು, ಟೊಯೊಟಾ ಕಿರ್ಲೋಸ್ಕರ್ ಮೋಟಾರ್(ಟಿಕೆಎಂ) ಕಂಪನಿಯ ಜನಪ್ರಿಯ ಕಾರುಗಳ ಬೆಲೆಗಳು ದಾಖಲೆ ಲೆಕ್ಕದಲ್ಲಿ ಏರಿಕೆ ಕಂಡಿವೆ.

ತನ್ನ ಕಾರುಗಳ ಬೆಲೆ ಹೆಚ್ಚಳಗೊಳಿಸಿ ಗ್ರಾಹಕರಿಗೆ ಶಾಕ್ ನೀಡಿದ ಟೊಯೊಟಾ

ಹೌದು, ಟೊಯೊಟಾ ಸಂಸ್ಥೆಯ ಇನ್ನೋವಾ, ಫಾರ್ಚುನರ್, ಕರೋಲಾ ಮತ್ತು ಇಟಿಯೋಸ್ ಕಾರುಗಳ ಬೆಲೆಗಳನ್ನು ಏರಿಕೆ ಮಾಡಿ ಕಂಪನಿಯು ತನ್ನ ಪತ್ರಿಕಾ ಪ್ರಕಟಣೆಯನ್ನು ನೀಡಿದ್ದು, ಎಲ್ಲಾ ಕಾರುಗಳ ಬೆಲೆಗಳು ಪರಿಣಾಮಕಾರಿಯಾಗಿ ಕಳೆದ ಸೆಪ್ಟೆಂಬರ್ 12ರಿಂದಲೇ ಜಾರಿಗೆ ಬರಲಿವೆ ಎಂದು ತಿಳಿಸಿದೆ.

ತನ್ನ ಕಾರುಗಳ ಬೆಲೆ ಹೆಚ್ಚಳಗೊಳಿಸಿ ಗ್ರಾಹಕರಿಗೆ ಶಾಕ್ ನೀಡಿದ ಟೊಯೊಟಾ

ಕೆಲವು ವಾಹನಗಳ ಜಿಎಸ್‌ಟಿ ಸೆಸ್ ಹೆಚ್ಚಳವಾದ ಹಿನ್ನೆಲೆಯಲ್ಲಿ ಭಾರತದ ಪ್ರತಿಷ್ಠ ವಾಹನ ಉತ್ಪಾದನಾ ಸಂಸ್ಥೆಯಾದ ಟೊಯೋಟಾ ಕಾರುಗಳ ಬೆಲೆಯನ್ನು ಹೆಚ್ಚಿಸುವ ನಿರ್ಧಾರವನ್ನು ಕಂಪನಿ ಕೈಗೊಂಡಿದೆ.

ತನ್ನ ಕಾರುಗಳ ಬೆಲೆ ಹೆಚ್ಚಳಗೊಳಿಸಿ ಗ್ರಾಹಕರಿಗೆ ಶಾಕ್ ನೀಡಿದ ಟೊಯೊಟಾ

ಎರಡು ದಿನಗಳ ಹಿಂದೆ ಭಾರತದಾದ್ಯಂತ ಜಿಎಸ್‌ಟಿ ಜಾರಿಗೆ ಬಂದಿದ್ದು, ವಿಲಾಸಿ, ಮಧ್ಯಮ ಗಾತ್ರ ಮತ್ತು ಸ್ಪೋಟ್ಸರ್ ಯುಟಿಲಿಟಿ ವಾಹನಗಳ (ಎಸ್‌ಯುವಿ) ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಸೆಸ್ ಶೇಕಡಾ 2 ರಿಂದ 7ರಷ್ಟು ಹೆಚ್ಚಳವಾಗಿತ್ತು.

ತನ್ನ ಕಾರುಗಳ ಬೆಲೆ ಹೆಚ್ಚಳಗೊಳಿಸಿ ಗ್ರಾಹಕರಿಗೆ ಶಾಕ್ ನೀಡಿದ ಟೊಯೊಟಾ

ಟೊಯೊಟಾ ಕಂಪನಿಯಲ್ಲಿ ಅತ್ಯುತ್ತಮವಾಗಿ ಮಾರಾಟವಾಗುವ ಇನ್ನೋವಾ ಕ್ರಿಸ್ಟ ಕಾರಿನ ಬೆಲೆ ರೂ. 78,000, ಫಾರ್ಚುನರ್ ಕಾರಿನ ಬೆಲೆ ರೂ.1,60,000, ಕರೋಲಾ ಆಲ್ಟಿಸ್ ಬೆಲೆ 72,000 ಮತ್ತು ಪ್ಲ್ಯಾಟಿನಮ್ ಎಟಿಯೋಸ್ ಕಾರುಗಳ ಬೆಲೆ ರೂ.13,000 ಹೆಚ್ಚಳವಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ತನ್ನ ಕಾರುಗಳ ಬೆಲೆ ಹೆಚ್ಚಳಗೊಳಿಸಿ ಗ್ರಾಹಕರಿಗೆ ಶಾಕ್ ನೀಡಿದ ಟೊಯೊಟಾ

ಟೊಯೊಟಾ ಕಂಪನಿಯು, ಕರ್ನಾಟಕದ ಬಿಡದಿಯಲ್ಲಿ ಇರುವಂತಹ ತನ್ನ ಅತಿ ದೊಡ್ಡ ಉತ್ಪಾದಕ ಘಟಕದಲ್ಲಿ ಇನ್ನೋವಾ, ಫಾರ್ಚುನರ್, ಕರೋಲಾ ಆಲ್ಟಿಸ್, ಇಟಿಯೋಸ್, ಎಟಿಯೋಸ್ ಲಿವಾ, ಎಟಿಯೊಸ್ ಕ್ರಾಸ್, ಕ್ಯಾಮ್ರಿ ಮತ್ತು ಕ್ಯಾಮ್ರಿ ಹೈಬ್ರಿಡ್ ಕಾರುಗಳನ್ನು ಉತ್ಪಾದನೆ ಮಾಡುತ್ತಿದೆ.

ತನ್ನ ಕಾರುಗಳ ಬೆಲೆ ಹೆಚ್ಚಳಗೊಳಿಸಿ ಗ್ರಾಹಕರಿಗೆ ಶಾಕ್ ನೀಡಿದ ಟೊಯೊಟಾ

ಟೊಯೊಟಾ ಕಂಪನಿಯ ಸಣ್ಣ ಕಾರುಗಳಾದ ಇಟಿಯೋಸ್ ಲಿವಾ, ಇಟಿಯೋಸ್ ಕ್ರಾಸ್ ಮತ್ತು ಹೈಬ್ರಿಡ್ ಕಾರುಗಳ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ಸ್ಪಷ್ಟಪಡಿಸಿದೆ.

ತನ್ನ ಕಾರುಗಳ ಬೆಲೆ ಹೆಚ್ಚಳಗೊಳಿಸಿ ಗ್ರಾಹಕರಿಗೆ ಶಾಕ್ ನೀಡಿದ ಟೊಯೊಟಾ

ಸಂಸ್ಥೆಯ ಈ ಬೆಲೆ ಹೆಚ್ಚಳದ ನಿರ್ಧಾರದಿಂದಾಗಿ ಭಾರತದಲ್ಲಿ ಟೊಯೋಟಾ ವಾಹನಗಳ ಒಟ್ಟಾರೆ ಮಾರಾಟದ ಮೇಲೆ ಪರಿಣಾಮ ಬೀರಲಿದ್ದು, ಹೆಚ್ಚಿನ ಗುಣಮಟ್ಟವನ್ನು ಕಾಯ್ದುಕೊಂಡಿರುವ ಪರಿಣಾಮ ಇನ್ನೋವಾ ಕ್ರಿಸ್ಟ ಮತ್ತು ಫಾರ್ಚುನರ್ ಮುಂತಾದ ಮಾದರಿಗಳ ಬೇಡಿಕೆಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎನ್ನಬಹುದು.

English summary
Toyota Kirloskar Motor (TKM) announced that the prices of Innova, Fortuner, Corolla, and Etios have been increased effective September 12, 2017.
Story first published: Wednesday, September 13, 2017, 14:26 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark