ಯೂಸ್ಡ್ ಕಾರುಗಳ ಮೇಲಿನ ಜಿಎಸ್‌ಟಿ ತೆರಿಗೆ ಗೊಂದಲಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರ

Written By:

ಜುಲೈ 1ರಿಂದ ದೇಶಾದ್ಯಂತ ಜಿಎಸ್‌ಟಿ ಜಾರಿಗೊಂಡಿದ್ದು, ಹೊಸ ತೆರಿಗೆ ಪದ್ಧತಿಯಿಂದಾಗಿ ಆಟೋ ಮೊಬೈಲ್ ಉದ್ಯಮದ ಮೇಲೂ ಸಾಕಷ್ಟು ಪರಿಣಾಮ ಕೂಡಾ ಬೀರಿದೆ. ಆದ್ರೆ ಬಳಸಿದ ವಾಹನಗಳ ಮಾರಾಟ ಪ್ರಕ್ರಿಯೆ ಮೇಲಿನ ಜಿಎಸ್‌ಟಿ ತೆರಿಗೆ ಜಾರಿ ಕುರಿತಂತೆ ಇದ್ದ ಗೊಂದಲಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

To Follow DriveSpark On Facebook, Click The Like Button
ಯೂಸ್ಡ್ ಕಾರುಗಳ ಮೇಲಿನ ಜಿಎಸ್‌ಟಿ ಗೊಂದಲಕ್ಕೆ ತೆರೆ ಎಳೆದ ಕೇಂದ್ರ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಆದ ನಂತರ ಆಟೋಮೊಬೈಲ್ ಉದ್ಯಮದ ಆಯ್ದ ಕಾರು ಆವೃತ್ತಿಗಳ ಮೇಲೆ ಶೇಕಡ 28ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿತ್ತು. ಆದ್ರೆ ಉಪಯೋಗಿಸಿದ ವಾಹನಗಳ ಮಾರಾಟದ ಮೇಲಿನ ಜಿಎಸ್‌ಟಿ ಅನ್ವಯಸುವ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ.

ಯೂಸ್ಡ್ ಕಾರುಗಳ ಮೇಲಿನ ಜಿಎಸ್‌ಟಿ ಗೊಂದಲಕ್ಕೆ ತೆರೆ ಎಳೆದ ಕೇಂದ್ರ

ಇದರಿಂದಾಗಿ ಉಪಯೋಗಿಸಿದ ವಾಹನಗಳ ಮಾರಾಟ ಪ್ರಕ್ರಿಯೆ ಜಿಎಸ್‌ಟಿ ಜಾರಿ ನಂತರ ಕುಸಿತ ಕಂಡಿದ್ದು, ಈ ಬಗ್ಗೆ ಆದಾಯ ಇಲಾಖೆಯು ಕೇಂದ್ರಕ್ಕೆ ಮಾಹಿತಿ ನೀಡಿತ್ತು.

ಯೂಸ್ಡ್ ಕಾರುಗಳ ಮೇಲಿನ ಜಿಎಸ್‌ಟಿ ಗೊಂದಲಕ್ಕೆ ತೆರೆ ಎಳೆದ ಕೇಂದ್ರ

ಈ ಹಿನ್ನೆಲೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರವು ಉಪಯೋಗಿಸಿದ ವಾಹನಗಳ ಮಾರಾಟ ಪ್ರಕ್ರಿಯೆ ಮೇಲೆ ಹೊಸ ಜಿಎಸ್‌ಟಿ ತೆರಿಗೆ ಅನ್ವಯವಾಗುದಿಲ್ಲ ಎಂದಿದ್ದು, ಬಳಸಿದ ವಾಹನಗಳ ಮಾರಾಟ ಮತ್ತು ಖರೀದಿ ಪ್ರಕ್ರಿಯೆ ಮೇಲೆ ಜಿಎಸ್‌ಟಿ ಹೊರೆ ಇಲ್ಲ ಎಂದಿದೆ.

ಯೂಸ್ಡ್ ಕಾರುಗಳ ಮೇಲಿನ ಜಿಎಸ್‌ಟಿ ಗೊಂದಲಕ್ಕೆ ತೆರೆ ಎಳೆದ ಕೇಂದ್ರ

ಇನ್ನು ಬಳಸಿದ ವಾಹನಗಳ ಖರೀದಿ ಪ್ರಕ್ರಿಯೆಗೂ ಮುನ್ನ ನೋಂದಾವಣೆ ಕಡ್ಡಾಯವಾಗಿದ್ದು, ಇದರಿಂದ ಬಳಸಿದ ವಾಹನಗಳ ಮಾರಾಟಗಾರರು ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಜಿಎಸ್‌ಟಿ ಯಾವುದೇ ತೆರಿಗೆ ಅನ್ವಯವಾಗುದಿಲ್ಲ.

ಯೂಸ್ಡ್ ಕಾರುಗಳ ಮೇಲಿನ ಜಿಎಸ್‌ಟಿ ಗೊಂದಲಕ್ಕೆ ತೆರೆ ಎಳೆದ ಕೇಂದ್ರ

ಆದ್ರೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿರುವ ಮತ್ತೊಂದು ಹೇಳಿಕೆಯ ಪ್ರಕಾರ ಹೊಸ ಕಾನೂನುಗಳು ವಾಣಿಜ್ಯ ಉದ್ದೇಶಗಳಿಗೆ ಅನ್ವಯವಾಗುದಿಲ್ಲ ಎಂದಿದ್ದು, ಇದು ಕೇವಲ ಇಬ್ಬರು ವ್ಯಕ್ತಿಗಳ ಮಧ್ಯೆ ನಡೆಯುವ ವ್ಯವಹಾರಗಳಿಗೆ ಸಂಬಂಧಿಸಿದ್ದು ಎಂದಿದೆ. ಇದರಿಂದ ಮಾರಾಟ ಮತ್ತು ಖರೀದಿಗೂ ನೋಂದಾವಣಿ ಪ್ರಕ್ರಿಯೆ ಕಡ್ಡಾಯವಾಗಿದೆ.

ಯೂಸ್ಡ್ ಕಾರುಗಳ ಮೇಲಿನ ಜಿಎಸ್‌ಟಿ ಗೊಂದಲಕ್ಕೆ ತೆರೆ ಎಳೆದ ಕೇಂದ್ರ

ಒಂದು ವೇಳೆ ನೀವು ನೋಂದಾವಣೆ ಮಾಡದೆ ಕಾರು ಸರಬರಾಜುದಾರರ ಬಳಿ ಮಾರಾಟ ಅಥವಾ ಖರೀದಿ ಮಾಡಿದಲ್ಲಿ ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

English summary
Read in Kannada about Government Clarifies GST On Sale Of Used Cars.
Story first published: Friday, July 14, 2017, 14:26 [IST]
Please Wait while comments are loading...

Latest Photos