2019ಕ್ಕೆ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲಿದೆ ವೊಲ್ವೋ..!!

Written By:

ಭಾರತದಲ್ಲಿ ಎಲೆಕ್ಟ್ರಿಕ್ ಕಾರಿಗಳಿಗೆ ಭಾರೀ ಬೇಡಿಕೆ ಹಿನ್ನೆಲೆ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆ ವೊಲ್ಪೋ, 2019ರ ವೇಳೆಗೆ ವಿನೂತನ ತಂತ್ರಜ್ಞಾನ ಹೊಂದಿರುವ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಮುಂದಾಗಿದೆ.

ಸ್ಪೀಡಿಷ್ ಮೂಲದ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆ ವೊಲ್ಪೋ ಸದ್ಯದಲ್ಲೇ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವ ಬಗ್ಗೆ ಸುಳಿವು ನೀಡಿದ್ದು, ಹ್ರೈಬಿಡ್ ತಂತ್ರಜ್ಞಾನದೊಂದಿಗೆ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಗೊಳಿಸಲಿದೆ.

ಈ ನಡುವೆ ಜುಲೈ 1ರಿಂದ ಜಿಎಸ್‌ಟಿ ಜಾರಿಯಾಗುತ್ತಿದ್ದು, ಹ್ರೈಬಿಡ್ ಕಾರುಗಳ ಉತ್ಪಾದನೆ ಮತ್ತು ಮಾರಾಟ ದುಬಾರಿಯಾಗಲಿದೆ. ಆದ್ರೆ ಇದಕ್ಕೆ ಜಗ್ಗದ ವೊಲ್ವೋ ಸಂಸ್ಥೆ ಮಾತ್ರ ತನ್ನ ನಿರ್ದಿಷ್ಟ ಗ್ರಾಹಕರಿಗೆ ಹೊಸ ರೀತಿಯ ಕಾರು ಮಾದರಿಯನ್ನು ಪರಿಚಯಿಸಲು ನಿರ್ಧರಿಸಿದೆ.

ಇನ್ನು 2030ರ ವೇಳೆಗೆ ಡಿಸೇಲ್ ಮತ್ತು ಪೆಟ್ರೋಲ್ ಕಾರುಗಳಿಗೆ ಬೇಡಿಕೆ ತಗ್ಗಲಿದ್ದು, ಈ ನಿಟ್ಟಿನಲ್ಲಿ ಯೋಜನೆ ರೂಪಿಸಿರುವ ವೊಲ್ಪೋ ಸಂಸ್ಥೆಯು ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದನೆ ಮಾಡಲಿದೆ.

ಇದಕ್ಕಾಗಿ ಎಕ್ಸ್‌ಸಿ60 ಮತ್ತು ಎಸ್60 ಕಾರು ಉತ್ಪಾದನಾ ಘಟಕಗಳನ್ನು ಬಳಕೆ ಮಾಡಿಕೊಳ್ಳಲಿರುವ ವೊಲ್ವೋ, ದುಬಾರಿ ಬೆಲೆಯ ಮರ್ಸಿಡಿಸ್, ಬೆಂಝ್, ಬಿಎಂಡಬ್ಲ್ಯು ಎಲೆಕ್ಟ್ರಿಕ್ ಕಾರುಗಳಿಗೆ ತೀವ್ರ ಸ್ಪರ್ಧೆ ನೀಡಲಿದೆ.

English summary
Read in Kannada about Volvo To Launch Electric Car In India In 2019.
Story first published: Wednesday, June 28, 2017, 11:59 [IST]
Please Wait while comments are loading...

Latest Photos