ಆಟೋ ಎಕ್ಸ್ ಪೋ 2018: BMW 6 ಸಿರೀಸ್ ಜಿಟಿ ಕಾರು ಬಿಡುಗಡೆ ಮಾಡಿದ ಕ್ರಿಕೆಟ್ ದೇವರು

Written By: Rahul

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು ತನ್ನ 6 ಸಿರೀಸ್ ಜಿಟಿ ಕಾರನ್ನು 2018ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್ ಶೋರಂ ಪ್ರಕಾರ ರೂ. 58.90 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಆಟೋ ಎಕ್ಸ್ ಪೋ 2018: BMW 6 ಸಿರೀಸ್ ಜಿಟಿ ಕಾರು ಬಿಡುಗಡೆ ಮಾಡಿದ ಕ್ರಿಕೆಟ್ ದೇವರು

ಆಟೋ ಎಕ್ಸ್ ಪೋದಲ್ಲಿ 6 ಸೀರಿಸ್ ಜಿಟಿ ಬಿಡುಗಡೆಗೆ ಆಗಮಿಸಿದ್ದ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಕಾರ್ಯಕ್ರಮಕ್ಕೆ ಮೆರುಗು ತುಂಬಿದ್ದಲ್ಲದೇ ಐಷಾರಾಮಿ ಕಾರುಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಬಿಎಂಡಬ್ಲ್ಯು ಕಾರುಗಳ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆಟೋ ಎಕ್ಸ್ ಪೋ 2018: BMW 6 ಸಿರೀಸ್ ಜಿಟಿ ಕಾರು ಬಿಡುಗಡೆ ಮಾಡಿದ ಕ್ರಿಕೆಟ್ ದೇವರು

ಇನ್ನು ಹೊಚ್ಚ ಹೊಸ 6 ಸಿರೀಸ್ ಜಿಟಿ ಗ್ರಾನ್ ಟೂರಿಸ್ಮೊ ಬಿಎಂಡಬ್ಲ್ಯಪ 5 ಸಿರೀಸ್ ನ ಸ್ಥಾನವನ್ನು ಬದಲಾಯಿಸುತ್ತದೆ. ಭಾರತದಲ್ಲಿ 630 ಐ ಕಾರು ಮಾತ್ರವ್ ಸ್ಪೋರ್ಟ್ ಆವೃತಿಯಲ್ಲಿ ದೊರೆಯಲಿದ್ದು, ಈ 6 ಸಿರೀಸ್ ಜಿಟಿ ಕಾರು ಉದ್ದವಾದ ವೀಲ್ ಬೇಸ್ ಹೊಂದಿರುವ ಮರ್ಸಿಡಿಸ್ ಇ-ಕ್ಲಾಸ್ ಕಾರಿಗೆ ಪೈಪೋಟಿ ನೀಡಲಿದೆ.

ಆಟೋ ಎಕ್ಸ್ ಪೋ 2018: BMW 6 ಸಿರೀಸ್ ಜಿಟಿ ಕಾರು ಬಿಡುಗಡೆ ಮಾಡಿದ ಕ್ರಿಕೆಟ್ ದೇವರು

ಎಂಜಿನ್ ಸಾಮರ್ಥ್ಯ

ಹೊಸ 6 ಸಿರೀಸ್ ಜಿಟಿ ಕಾರು ಟರ್ಬೊಚಾರ್ಜ್ಡ್ 2.0 ಲೀಟರ್, 4 ಸಿಲೆಂಡರ್ ಪೆಟ್ರೋಲ್ ಎಂಜಿನನ್ನು ಹೊಂದಿದ್ದು, 254 ಬಿಹೆಚ್ ಪಿ ಮತ್ತು 400 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಆಟೋ ಎಕ್ಸ್ ಪೋ 2018: BMW 6 ಸಿರೀಸ್ ಜಿಟಿ ಕಾರು ಬಿಡುಗಡೆ ಮಾಡಿದ ಕ್ರಿಕೆಟ್ ದೇವರು

ಹಾಗೆಯೇ ಈ ಎಂಜಿನನ್ನು 8- ಸ್ಪೀಡ್ ಗೇರ್ ಬಾಕ್ಸಿಗೆ ಜೋಡಿಸಲಾಗಿದ್ದು, ಜೊತೆಗೆ ಈ ಕಾರು ಕೇವಲ 6.3 ಸೆಕೆಂಡ್‌ಗಳಲ್ಲಿ 0-100 ಕಿಮಿ ವೇಗ ಪಡೆಯುವುದಲ್ಲದೇ 250ಕಿಮಿ(ಪ್ರತಿ ಗಂಟೆ) ಟಾಪ್ ಸ್ಪೀಡನ್ನು ಹೊಂದಿದೆ.

ಆಟೋ ಎಕ್ಸ್ ಪೋ 2018: BMW 6 ಸಿರೀಸ್ ಜಿಟಿ ಕಾರು ಬಿಡುಗಡೆ ಮಾಡಿದ ಕ್ರಿಕೆಟ್ ದೇವರು

ಇದಲ್ಲದೇ ಹೊಸ ಕಾರುಗಳು 5,091ಎಂಎಂ ಉದ್ದ, 1,902 ಎಂಎಂ ಅಗಲ, 1,158 ಎಂಎಂ ಎತ್ತರ ಮತ್ತು 3,070 ಎಂಎಂ ಉದ್ದವಾದ ವೇಲ್ ಬೇಸನ್ನು ಪಡೆದುಕೊಂಡಿವೆ.

ಆಟೋ ಎಕ್ಸ್ ಪೋ 2018: BMW 6 ಸಿರೀಸ್ ಜಿಟಿ ಕಾರು ಬಿಡುಗಡೆ ಮಾಡಿದ ಕ್ರಿಕೆಟ್ ದೇವರು

ಕಾರಿನ ವಿನ್ಯಾಸ ಮತ್ತು ವೈಶಿಷ್ಟ್ಯಗಳು

ಬಿಎಂಡಬ್ಲ್ಯೂ 6 ಸಿರೀಸ್ ಜಿಟಿ ವಿನ್ಯಾಸವನ್ನು 5 ಸಿರೀಸ್ ಸೆಡಾನ್ ಕಾರಿನ್ನು ಆಧರಿಸಿದ್ದು, 5 ಸಿರೀಸ್ ಕಾರಿಗಿಂತ ಭಿನ್ನವಾಗಿ ಕೌಪ್-ಇಷ್ ವಿನ್ಯಾಸವನ್ನು ಬೂಟ್ ಲಿಡ್ ನಲ್ಲಿ, ರೂಫ್ ಫ್ಲೋ ವಿಂಗ್ ಅನ್ನು ಹೊಂದಿದೆ. ಇದಲ್ಲದೆ 5 ಸಿರೀಸ್ ಕಾರಿನಲ್ಲಿದ್ದ ಎಲ್ಇಡಿ ಹೆಡ್ ಲೈಟ್ಅನ್ನು ಜೋಡಣೆಯಿದೆ.

ಆಟೋ ಎಕ್ಸ್ ಪೋ 2018: BMW 6 ಸಿರೀಸ್ ಜಿಟಿ ಕಾರು ಬಿಡುಗಡೆ ಮಾಡಿದ ಕ್ರಿಕೆಟ್ ದೇವರು

ಬಿಎಂಡಬ್ಲ್ಯೂ 6 ಸಿರೀಸ್ ಜಿಟಿ ಕಾರುಗಳ ತಾಂತ್ರಿಕ ಅಂಶಗಳನ್ನು ಸಂಜ್ಞೆಗಳ ಮೂಲಕ ಕಂಟ್ರೋಲ್ ಮಾಡಬಹುದಾದ 10.25ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೆಯನ್ನು ಹೊಂದಿದ್ದು, ಹೆಡ್-ಅಪ್ ಡಿಸ್ಪ್ಲೆ, 4 ಜೋನ್ ಆಟೊಮ್ಯಾಟಿಕ್ ವಾತಾವರಣ ನಿಯಂತ್ರಣ, ಎಲ್ಇಡಿ ಮೂಡ್ ಲೈಟಿಂಗ್ ಮತ್ತು ಸುತ್ತುವರೆದ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ.

English summary
Sachin Launches BMW 6 Series GT In India - Priced At Rs 58.9 Lakhs.
Story first published: Sunday, February 11, 2018, 11:22 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark