ಬಿಡುಗಡೆಗೊಂಡ ಬಿಎಮ್‍ಡಬ್ಲ್ಯೂ ಎಕ್ಸ್1 ಎಸ್‍ಡ್ರೈವ್20ಡಿ ಎಮ್-ಸ್ಪೋರ್ಟ್..

ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಬಿಎಮ್‍ಡಬ್ಲ್ಯೂ ತಮ್ಮ ಎಮ್-ಸ್ಪೋರ್ಟ್ ಕಾರಿನ ಎಕ್ಸ್1 ಎಸ್‍‍ಡ್ರೈವ್ ವೇರಿಯಂಟ್ ಅನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ಬೆಲೆಯನ್ನು ರೂ. 41.50 ಲಕ್ಷಕ್ಕೆ ನಿಗದಿ ಪಡಿಸಲಾಗಿದೆ.

By Rahul Ts

ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಬಿಎಮ್‍ಡಬ್ಲ್ಯೂ ತಮ್ಮ ಎಮ್-ಸ್ಪೋರ್ಟ್ ಕಾರಿನ ಎಕ್ಸ್1 ಎಸ್‍‍ಡ್ರೈವ್ ವೇರಿಯಂಟ್ ಅನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ಬೆಲೆಯನ್ನು ರೂ. 41.50 ಲಕ್ಷಕ್ಕೆ ನಿಗದಿ ಪಡಿಸಲಾಗಿದೆ.

ಬಿಡುಗಡೆಗೊಂಡ ಬಿಎಮ್‍ಡಬ್ಲ್ಯೂ ಎಕ್ಸ್1 ಎಸ್‍ಡ್ರೈವ್ 20ಡಿ ಎಮ್-ಸ್ಪೋರ್ಟ್..

ಎಮ್‍-ಸ್ಪೋರ್ಟ್ ಕಾರಿನ ಎಕ್ಸ್1 ವೇರಿಯಂಟ್ 'ಎಮ್ ಹೈಡ್ರಾಲಿಕ್ ಪ್ಯಾಕೇಜ್ ಅನ್ನು ಪಡೆದುಕೊಂಡಿದ್ದು, ಈ 'ಎಮ್' ಪ್ಯಾಕೇಜ್‍‍ನಲ್ಲಿ ಕಾರಿನ ಮುಂಭಾಗದ ಬಂಪರ್‍‍ನ ಮೇಲೆ ದೊಡ್ಡ ಗಾತ್ರದ ಏರ್ ವೆಂಟ್ಸ್ ಅನ್ನು ಪಡೆದುಕೊಂಡಿರಲಿದ್ದು, ಜೊತೆಗೆ ಹಿಂಭಾಗದಲ್ಲಿನ ಬಂಪರ್‍‍ಗೆ ಇಂಟಿಗ್ರೇಟೆಡ್ ಡಿಫ್ಯೂಸರ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಬಿಎಮ್‍ಡಬ್ಲ್ಯೂ ಎಕ್ಸ್1 ಎಸ್‍ಡ್ರೈವ್ 20ಡಿ ಎಮ್-ಸ್ಪೋರ್ಟ್..

ಇದಲ್ಲದೆ ಎಕ್ಸ್1 ಕಾರಿನ ಹೊಸ ಟ್ರಿಮ್‍‍ಗಳು ಹಲವಾರು ವಿಶೇಷವಾದ ಆಕ್ಸೆಸರಿಗಳನ್ನು ಪಡೆದಿದ್ದು, ಅವುಗಳಲ್ಲಿ ಸೈಡ್ ಸ್ಕರ್ಟ್ಸ್, ವ್ಹೀಲ್ ಆರ್ಚ್‍‍ಗಳ ಮೇಲೆ ಬಾಡಿ ಕಲರ್ಡ್ ಕ್ಲಾಡಿಂಗ್ ಮತ್ತು ಡೋರ್‍ ಸಿಲ್ಸ್ ಗಳ ಮೇಲೆ ಎಮ್-ಡಿವಿಷನ್ ರನ್ನರ್‍‍ಗಳನ್ನು ಪಡೆದುಕೊಂಡಿರಲಿದೆ.

ಬಿಡುಗಡೆಗೊಂಡ ಬಿಎಮ್‍ಡಬ್ಲ್ಯೂ ಎಕ್ಸ್1 ಎಸ್‍ಡ್ರೈವ್ 20ಡಿ ಎಮ್-ಸ್ಪೋರ್ಟ್..

ಬಿಎಮ್‍ಡಬ್ಲ್ಯೂ ಎಕ್ಸ್1 ಎಮ್-ಸ್ಪೋರ್ಟ್ ಸಿಗ್ನೇಚರ್ ಕಿಡ್ನಿ ಗ್ರಿಲ್‍‍ಗಳ ಮೇಲೆ ಗ್ಲಾಸ್ ಬ್ಲಾಕ್ ಸ್ಲೇಟ್ಸ್ ಹೊಂದಿರಲಿದ್ದು, ಜೊತೆಗೆ ಈ ಕಾರಿನಲ್ಲಿ ಎಲ್ಇಡಿ ಹೆಡ್‍‍ಲ್ಯಾಂಪ್ಸ್ ಮತ್ತು ಡೇಟೈಮ್ ರನ್ನಿಂಗ್ ಲೈಟ್ಸ್ ಹಾಗು 18 ಇಂಚಿನ ಅಲಾಯ್ ಚಕ್ರಗಳನ್ನು ಪಡೆದುಕೊಂಡಿವೆ.

ಬಿಡುಗಡೆಗೊಂಡ ಬಿಎಮ್‍ಡಬ್ಲ್ಯೂ ಎಕ್ಸ್1 ಎಸ್‍ಡ್ರೈವ್ 20ಡಿ ಎಮ್-ಸ್ಪೋರ್ಟ್..

ಇನ್ನು ಬಿಎಮ್‍ಡಬ್ಲ್ಯೂ ಎಕ್ಸ್1 ಎಸ್‍‍ಡ್ರೈವ್20ಡಿ ಎಮ್-ಸ್ಪೋರ್ಟ್ ಕಾರಿನ ಒಳಭಾಗದಲ್ಲಿ 2 ಜೋನ್ ಕ್ಲೈಮೇಟ್ ಕಂಟ್ರೋಲ್, ಎಂಬಿಯಂಟ್ ಲೈಟ್ನಿಂಗ್, ಮಲ್ಟಿ ಫಂಕ್ಷನ್ ಸ್ಪೋರ್ಟ್ಸ್ ಲೆಧರ್ ಸ್ಟೀರಿಂಗ್ ವ್ಹೀಲ್, ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು ಪ್ಯಾನಾರಾಮಿಕ್ ಸನ್‍‍ರೂಫ್ ಅನ್ನು ಪಡೆದುಕೊಂದಿದೆ.

ಬಿಡುಗಡೆಗೊಂಡ ಬಿಎಮ್‍ಡಬ್ಲ್ಯೂ ಎಕ್ಸ್1 ಎಸ್‍ಡ್ರೈವ್ 20ಡಿ ಎಮ್-ಸ್ಪೋರ್ಟ್..

ಅಲ್ಲದೇ ಎಕ್ಸ್1 ಕಾರಿನ ಎಲ್ಲಾ ವೇರಿಯಂಟ್‍‍ಗಳ ಕಾರಿನಲ್ಲಿ ಐಡ್ರೈವ್, ನ್ಯಾವಿಗೇಷನ್, ಆಪಲ್ ಕಾರ್‍‍ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಬಿಎಮ್‍ಡಬ್ಲ್ಯೂ ಆಪ್‍‍ಗಳನ್ನು ಒಳಗೊಂಡ 6.5 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಬಿಡುಗಡೆಗೊಂಡ ಬಿಎಮ್‍ಡಬ್ಲ್ಯೂ ಎಕ್ಸ್1 ಎಸ್‍ಡ್ರೈವ್ 20ಡಿ ಎಮ್-ಸ್ಪೋರ್ಟ್..

ಎಂಜಿನ್ ಸಾಮರ್ಥ್ಯ

ಬಿಡುಗಡೆಗೊಂಡ ಹೊಸ ಬಿಎಮ್‍ಡಬ್ಲ್ಯೂ ಎಕ್ಸ್1 ಎಸ್‍‍ಡ್ರೈವ್20ಡಿ ಎಮ್-ಸ್ಪೋರ್ಟ್ ಕಾರು 2.0 ಲೀಟರ್, 4 ಸಿಲೆಂಡರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 187ಬಿಹೆಚ್‍‍ಪಿ ಮತ್ತು 400ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಎಂಜಿನ್ ಅನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಬಿಎಮ್‍ಡಬ್ಲ್ಯೂ ಎಕ್ಸ್1 ಎಸ್‍ಡ್ರೈವ್ 20ಡಿ ಎಮ್-ಸ್ಪೋರ್ಟ್..

ಈ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ 6 ಏರ್‍‍ಬ್ಯಾಗ್‍‍ಗಳು, ಎಬಿಎಸ್‍‍ನೊಂದಿಗೆ ಬ್ರೆಕ್ ಅಸ್ಸಿಸ್ಟ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್, ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಆಂಕರ್ಸ್ ಮತ್ತು ರನ್-ಫ್ಲಾಟ್ ಟೈರ್‍‍ಗಳನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಬಿಎಮ್‍ಡಬ್ಲ್ಯೂ ಎಕ್ಸ್1 ಎಸ್‍ಡ್ರೈವ್ 20ಡಿ ಎಮ್-ಸ್ಪೋರ್ಟ್..

ಡ್ರೈವ್‍‍ಸ್ಪಾರ್ಕ್ ಕನ್ನಡ ಅಭಿಪ್ರಾಯ

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಮ್‍ಡಬ್ಲ್ಯೂ ತಮ್ಮ ಎಮ್‍-ಸ್ಪೋರ್ಟ್ ಕಾರಿಗೆ ಮತ್ತೊಂದು ವೇರಿಯಂಟ್ ಅನ್ನು ಸೇರಿಸಿದ್ದು, ಬಿಎಮ್‍ಡಬ್ಲ್ಯೂಎಕ್ಸ್1 ಕಾರುಗಳು ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಜಿಎಲ್ಎ, ಆಡಿ ಕ್ಯೂ3 ಮತ್ತು ವೋಲ್ವೊ ಎಕ್ಸ್ ಸಿ40 ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
BMW X1 sDrive20d M-Sport Launched In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X