ಆಟೋ ಎಕ್ಸ್‌ಪೋ 2018: ಬಿಡುಗಡೆಗೊಂಡ ಹೊಸ ಬಿಎಂಡಬ್ಲ್ಯು ಎಕ್ಸ್6 ಎಕ್ಸ್ ಡ್ರೈವ್35ಐ

Written By: Rahul

ಜರ್ಮನ್ ಮೂಲದ ವಾಹನ ತಯಾರಿಕಾ ಸಂಸ್ಥೆ ಬಿಎಂಡಬ್ಲ್ಯು ತನ್ನ ಹೊಸ ಎಕ್ಸ್6 ಎಕ್ಸ್ ಡ್ರೈವ್35ಐ ಕಾರನ್ನು ಬಿಡುಗಡೆಗೊಳಿಸಿದ್ದು, ಕಾರಿನ ಬೆಲೆಯನ್ನು ದೆಹಲಿ ಎಕ್ಸ್ ಶೋರಂ ಪ್ರಕಾರ ರೂ. 94.15 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಆಟೋ ಎಕ್ಸ್‌ಪೋ 2018: ಬಿಡುಗಡೆಗೊಂಡ ಹೊಸ ಬಿಎಂಡಬ್ಲ್ಯು ಎಕ್ಸ್6 ಎಕ್ಸ್ ಡ್ರೈವ್35ಐ

ಬಿಎಂಡಬ್ಲ್ಯು ಎಕ್ಸ್6 ಎಕ್ಸ್ ಡ್ರೈವ್35ಐ ಕಾರು ಸ್ಪೋರ್ಟ್ಸ್ ಆವೃತ್ತಿಯಾಗಿದ್ದು, 6.4 ಸೆಕೆಂಡಿಗೆ 0-100kph ಮತ್ತು 240kph ಟಾಪ್ ಸ್ಪೀಡ್ ಹೊಂದಿದ್ದು, ಲಾಂಚ್ ಕಂಟ್ರೋಲ್ ಸಿಸ್ಟಮ್ ಅಳವಡಿಸಲಾಗಿದೆ. ಇದರಲ್ಲಿ ಒದಗಿಸಿದ ಪ್ಯಾಡಲ್ ಶಿಫ್ಟರ್ ಗಳನ್ನು ಬಳಸಿಕೊಂಡು ಹೊಸ ಎಕ್ಸ್ 6 ರೂಪಾಂತರದಲ್ಲಿ ಗೇರ್ ವರ್ಗಾವಣೆಗಳನ್ನೂ ಸಹ ಚಾಲಕರು ನಿಯಂತ್ರಿಸಬಹುದಾಗಿದೆ.

ಆಟೋ ಎಕ್ಸ್‌ಪೋ 2018: ಬಿಡುಗಡೆಗೊಂಡ ಹೊಸ ಬಿಎಂಡಬ್ಲ್ಯು ಎಕ್ಸ್6 ಎಕ್ಸ್ ಡ್ರೈವ್35ಐ

ಈ ಕಾರು ರೆಗ್ಯುಲರ್ ಎಕ್ಸ್6 ಕಾರಿನ ಡಿಸೈನ್‌ಗಳನ್ನೇ ಹೋಲಲಿದ್ದು, ಕೊಂಚ ಮಾರ್ಪಾಡಿನೊಂದಿಗೆ ಕಾಣಿಸಿಕೊಂಡಿದೆ. ಜೊತೆಗೆ ಅಡಾಪ್ಟಿವ್ ಹೆಡ್ ಲೈಟ್, 20 ಇಂಚಿನ ಅಲಾಯ್ ಚಕ್ರಗಳನ್ನು ರಿವೈಸ್ಡ್ ಫ್ರಂಟ್ ಏಪ್ರಾನ್ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2018: ಬಿಡುಗಡೆಗೊಂಡ ಹೊಸ ಬಿಎಂಡಬ್ಲ್ಯು ಎಕ್ಸ್6 ಎಕ್ಸ್ ಡ್ರೈವ್35ಐ

ಇನ್ನು ಕಾರಿನ ಸೀಟ್ ಗಳು ಲೆದರ್ ನಿಂದ ಸುತ್ತುವರೆದಿದ್ದು, ಎಲೆಕ್ಟ್ರಿಕ್ ಸಹಾಯದಿಂದ ಅಡ್ಜಸ್ಟ್ ಮಾಡಬಹುದಾದ ಆಯ್ಕೆಯನ್ನು ಪಡೆದುಕೊಂಡಿದೆ. ಇದಲ್ಲದೇ ಅಂತ್ರಸೈಟ್ ಹೆಡ್ ಲೈನರ್, ಲೆದರ್‌ನಿಂದ ಸುತ್ತುವರೆದ ಸ್ಟೀರಿಂಗ್, ಅಲ್ಯುಮಿನಿಯಂ ಹೆಕ್ಸಾಗಾನ್ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2018: ಬಿಡುಗಡೆಗೊಂಡ ಹೊಸ ಬಿಎಂಡಬ್ಲ್ಯು ಎಕ್ಸ್6 ಎಕ್ಸ್ ಡ್ರೈವ್35ಐ

ಪ್ರಯಾಣಿಕರ ರಕ್ಷಣೆಗಾಗಿ ಆರು ಏರ್ ಬ್ಯಾಗ್, ಡೈನಾಮಿಕ್ ಸ್ಟಾಬಿಲಿಟಿ ಕಂಟ್ರೋಲರ್(DSC),ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್ (DTC), ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (CBC),ಎಲೆಕ್ಟ್ರಿಕ್ ಪಾರ್ಕಿಂಗ್ ನೊಂದಿಗೆ ಆಟೋ ಹೋಲ್ಡ್ ಹೊಂದಿದೆ.

ಆಟೋ ಎಕ್ಸ್‌ಪೋ 2018: ಬಿಡುಗಡೆಗೊಂಡ ಹೊಸ ಬಿಎಂಡಬ್ಲ್ಯು ಎಕ್ಸ್6 ಎಕ್ಸ್ ಡ್ರೈವ್35ಐ

ಇದಲ್ಲದೇ ಹಿಲ್ ಡೆಸೆಂಟ್ ಕಂಟ್ರೋಲ್(HD),ಸೈಡ್-ಇಂಪಾಕ್ಟ್ ರಕ್ಷಣೆ, ಎಲೆಕ್ಟ್ರಿಕ್ ವೆಹಿಕಲ್ ಇಮ್ಮೊಬಿಲೈಸರ್ ಮತ್ತು ಕ್ರಾಶ್ ಸೆನ್ಸಾರ್ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್ ಗಳನ್ನು ಪಡೆದುಕೊಂಡಿದೆ.

ಆಟೋ ಎಕ್ಸ್‌ಪೋ 2018: ಬಿಡುಗಡೆಗೊಂಡ ಹೊಸ ಬಿಎಂಡಬ್ಲ್ಯು ಎಕ್ಸ್6 ಎಕ್ಸ್ ಡ್ರೈವ್35ಐ

ಬಿಎಂಡಬ್ಲ್ಯು ಎಕ್ಸ್6 ಎಕ್ಸ್ ಡ್ರೈವ್ 35ಐ ಎಂ ಸ್ಪೋರ್ಟ್ ಬಿಎಂಡಬ್ಲ್ಯು ಎಕ್ಸ್ 6 SUV ಕೂಪೆ ಕ್ರಾಸ್ಒವರ್ ಪೆಟ್ರೋಲ್ ರೂಪಾಂತರವಾಗಿದ್ದು, ಇದು ಡೀಸೆಲ್ ಎಕ್ಸ್ ಡ್ರೈವ್ 40ಡಿ ರೂಪಾಂತರದಷ್ಟು ತ್ವರಿತವಾಗಿರದಿದ್ದರೂ, ಬೃಹತ್ ಡ್ರಾಪ್ (ಡೀಸೆಲ್‌ಗೆ ಹೋಲಿಸಿದರೆ 30 ಲಕ್ಷಗಳಷ್ಟು ಕಡಿಮೆ) ಬೆಲೆಯಲ್ಲಿ ದೊರೆಯಬಹುದು ಎನ್ನಲಾಗಿದೆ.

Read more on auto expo 2018 bmw
English summary
BMW X6 xDrive35i M Sport Launched At Rs 94.15 Lakh.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark