ಬಹುನೀರಿಕ್ಷಿತ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆ

By Praveen Sannamani

2018ರ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್ ಕಾರು ಆವೃತ್ತಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಇದಕ್ಕೂ ಮುನ್ನ ಹೊಸ ಕಾರನ್ನು ಇಂಡೋನೇಷ್ಯಾ ಮಾರುಕಟ್ಟೆಯು ಬಿಡುಗಡೆ ಮಾಡಿರುವುದು ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ

ಬಹುನೀರಿಕ್ಷಿತ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆ

ಹೊಚ್ಚ ಹೊಸ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್ ಆವೃತ್ತಿ ಭಾರತದಲ್ಲಿ ಅಷ್ಟೇ ಅಲ್ಲದೇ ಇಂಡೋನೇಷ್ಯಾದಲ್ಲೂ ಭಾರೀ ನೀರಿಕ್ಷೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಹೊಸ ಕಾರಿನಲ್ಲಿ ಹೊಸದಾಗಿ ಸಿವಿಟಿ (ಆಟೋ ಮ್ಯಾಟಿಕ್ ಗೇರ್‌ಬಾಕ್ಸ್) ಸೌಲಭ್ಯ ಹೊಂದಿರುವುದು ಖಚಿತವಾಗಿದೆ. ಈ ಮೂಲಕ ಸಿಟಿವಿ ಹ್ಯಾಚ್‌ಬ್ಯಾಕ್ ಇಷ್ಟಪಡುವ ಗ್ರಾಹಕರಿಗೆ ಇದು ಉತ್ತಮ ಆಯ್ಕೆಯಾಗಿ ಹೊರಹೊಮ್ಮುವ ಸಾಧ್ಯತೆಗಳಿವೆ.

ಬಹುನೀರಿಕ್ಷಿತ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆ

ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗ ಕಾರಿನ ತಾಂತ್ರಿಕ ಅಂಶಗಳ ಬಗೆಗೆ ಹೇಳುವುದಾದರೇ, ನ್ಯೂ ಗ್ರೀಲ್, ಅಪ್‌ಡೇಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಸ್, ವಿಶೇಷ ವಿನ್ಯಾಸದ ರಿಯರ್ ಬಂಪರ್, ಲಾರ್ಜ್ ರಿಯರ್ ಸ್ಪಾಯ್ಲರ್ ಮತ್ತು ಟರ್ನ್ ಇಂಡಿಕೇಟರ್ ಸೌಲಭ್ಯ ಪಡೆದಿದೆ.

ಬಹುನೀರಿಕ್ಷಿತ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆ

ಜೊತೆಗೆ ಕಾರಿನ ಹಿಂಭಾಗದ ವಿನ್ಯಾಸದಲ್ಲೂ ಗುರತರ ಬದಲಾವಣೆ ತಂದಿರುವ ದಟ್ಸನ್ ಸಂಸ್ಥೆಯು ಸ್ಪೋರ್ಟಿ ಲುಕ್ ನೀಡಿದ್ದು, ಒಆರ್‌ವಿಎಂ, ಬಾಡಿ ಕಿಟ್, ಫ್ರಂಟ್ ಸ್ಲಿಟ್ಟರ್, ಸೈಡ್ ಸ್ಟೈಕರ್ ಬಳಕೆ ಮಾಡಿರುವುದು ಹ್ಯಾಚ್‌ಬ್ಯಾಕ್ ಪ್ರಿಯರನ್ನು ಆಕರ್ಷಣೆ ಮಾಡುವುದಲ್ಲಿ ಯಾವುದೇ ಅನುಮಾನವಿಲ್ಲ.

ಬಹುನೀರಿಕ್ಷಿತ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆ

ಇನ್ನು ಕಾರಿನ ಒಳ ವಿನ್ಯಾಸದ ಬಗೆಗೆ ಹೇಳುವುದಾರರೇ, ಹಳೆಯ ಮಾದರಿಗಿಂತ ಕೊಂಚ ಬದಲಾವಣೆ ಹೊರತು ಪಡಿಸಿ ಈ ಹಿಂದಿನಂತೆಯೇ ಸ್ಟಿರಿಂಗ್ ವೀಲ್ಹ್ ವಿನ್ಯಾಸ, ಇನ್‌ಸ್ಟುಮೆಂಟ್ ಕ್ಸಸ್ಟರ್, ನ್ಯೂ ಎಸಿ ವೆಂಟ್ಸ್, ಫ್ರಂಟ್ ಏರ್‌ಬ್ಯಾಗ್ ಸೌಲಭ್ಯಗಳು ಅರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗಲಿವೆ. ಆದರೂ ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಯಲ್ಲಿ ಕೆಲವು ಬದಲಾವಣೆ ತರುವ ಸಾಧ್ಯತೆಗಳಿವೆ.

ಬಹುನೀರಿಕ್ಷಿತ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಫೇಸ್‌ಲಿಫ್ಟ್ ದಟ್ಸನ್ ರೆಡಿ ಗೊ ಕಾರುಗಳು 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 68-ಬಿಎಚ್‌ಪಿ ಮತ್ತು 104-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಜೊತೆಗೆ 5-ಸ್ಟೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಆಯ್ಕೆ ರೂಪದಲ್ಲಿ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಕಾರು ಮಾದರಿಯು ಖರೀದಿಗೆ ಲಭ್ಯವಿರವಿದೆ.

ಬಹುನೀರಿಕ್ಷಿತ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆ

ಭಾರತದಲ್ಲಿ ಬಿಡುಗಡೆ ಯಾವಾಗ?

ಸದ್ಯ ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಿರುವ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್ ಕಾರುಗಳಿಗೆ ಭಾರೀ ಬೇಡಿಕೆ ಬಂದಿದ್ದು, ಭಾರತದಲ್ಲೂ ಇದೇ ತಿಂಗಳಾಂತ್ಯಕ್ಕೆ ಬಿಡುಗಡೆಯಾಗುವುದು ನಿಶ್ಚಿತವಾಗಿದೆ.

ಬಹುನೀರಿಕ್ಷಿತ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆ

ಕಾರಿನ ಬೆಲೆಗಳು

ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್ ಕಾರುಗಳು ಅಪ್‌ಡೇಡ್ ವರ್ಷನ್ ಹಿನ್ನೆಲೆ ಬೆಲೆ ಕೊಂಚ ದುಬಾರಿಯಾಗಿದ್ದು, ಇಂಡೋನೇಷ್ಯಾ ಮಾರುಕಟ್ಟೆಯ ಪ್ರಕಾರ ಭಾರತೀಯ ಬೆಲೆಯಲ್ಲಿ ಆರಂಭಿಕ ಆವೃತ್ತಿಯು 4.90 ಲಕ್ಷ ಮತ್ತು ಉನ್ನತ ಆವೃತ್ತಿಯು ರೂ. 5.35 ಲಕ್ಷ ಬೆಲೆ ಹೊಂದಿದೆ.

ಬಹುನೀರಿಕ್ಷಿತ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆ

ಹೀಗಾಗಿ ಭಾರತದಲ್ಲಿ ಬಿಡುಗಡೆಯಾಗುವ ದಟ್ಸನ್ ರೆಡಿ ಗೊ ಕಾರುಗಳ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ 4 ಲಕ್ಷದಿಂದ 5 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಬಹುನೀರಿಕ್ಷಿತ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆ

ಒಟ್ಟಿನಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ ಗ್ರಾಹಕರನ್ನು ಸೆಳೆಯಲು ಸಜ್ಜಾಗಿರುವ ಹೊಸ ಕಾರುಗಳು, ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿ ಮಾರುತಿ ಆಲ್ಟೊ 800, ಟಾಟಾ ನ್ಯಾನೊ ಮತ್ತು ರೆನಾಲ್ಟ್ ಕ್ವಿಡ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

Most Read Articles

Kannada
Read more on datsun hatchback
English summary
Datsun go go face lift launched indonesia india launch later this year Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X