ಹ್ಯಾಚ್‌‌ಬ್ಯಾಕ್ ಪ್ರಿಯರನ್ನು ಸೆಳೆಯಲು ಬಂದೆ ಬಿಡ್ತು ದಟ್ಸನ್ ರೆಡಿ-ಗೊ ಲಿಮಿಟೆಡ್ ಎಡಿಷನ್

By Praveen Sannamani

ಸಣ್ಣ ಕಾರುಗಳ ಮೂಲಕ ಉತ್ತಮ ಕಾರ್ಯಕ್ಷಮತೆಯೊಂದಿಗೆ ಜನಪ್ರಿಯತೆ ಸಾಧಿಸುತ್ತಿರುವ ದಟ್ಸನ್ ಇಂಡಿಯಾ ಸಂಸ್ಥೆಯು ಇದೀಗ ರೆಡಿ-ಗೊ ಮಾದರಿಯಲ್ಲಿ ಹೊಸ ಲಿಮಿಟೆಡ್ ಆವೃತ್ತಿಯೊಂದನ್ನು ಬಿಡುಗಡೆ ಮಾಡಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಹ್ಯಾಚ್‌‌ಬ್ಯಾಕ್ ಪ್ರಿಯರನ್ನು ಸೆಳೆಯಲು ಬಂದೆ ಬಿಡ್ತು ದಟ್ಸನ್ ರೆಡಿ-ಗೊ ಲಿಮಿಟೆಡ್ ಎಡಿಷನ್

ರೆಡಿ-ಗೊ ಲಿಮಿಟೆಡ್ ಆವೃತ್ತಿಯಲ್ಲಿ 1.0-ಲೀಟರ್ ಮತ್ತು 0.8-ಲೀಟರ್ ಪೆಟ್ರೋಲ್ ಎಂಜಿನ್‌ಗಳನ್ನು ಪರಿಚಯಿಸಲಾಗಿದ್ದು, ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಸಣ್ಣ ಗಾತ್ರದ ಈ ಕಾರು ಅತಿ ಹೆಚ್ಚು ಸುಧಾರಿತ ಮಾದರಿಯಾಗಿದೆ. ಸಾಮಾನ್ಯ ಮಾದರಿಯ ರೆಡಿ-ಗೊ ಕಾರುಗಳಿಂತ ಲಿಮಿಟೆಡ್ ಎಡಿಷನ್‌ಗಳಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದ್ದು, ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಹೊಸ ಬೆಲೆ ಪಟ್ಟಿಯನ್ನು ಸಿದ್ದಗೊಳಿಸಲಾಗಿದೆ.

ಹ್ಯಾಚ್‌‌ಬ್ಯಾಕ್ ಪ್ರಿಯರನ್ನು ಸೆಳೆಯಲು ಬಂದೆ ಬಿಡ್ತು ದಟ್ಸನ್ ರೆಡಿ-ಗೊ ಲಿಮಿಟೆಡ್ ಎಡಿಷನ್

ಕಾರಿನ ಬೆಲೆಗಳು (ದೆಹಲಿ ಎಕ್ಸ್‌ಶೋರಂ)

1.0-ಲೀಟರ್ ರೆಡಿ-ಗೊ - 3.58 ಲಕ್ಷ

0.8-ಲೀಟರ್ ರೆಡಿ-ಗೊ - 3.85 ಲಕ್ಷ

ಹ್ಯಾಚ್‌‌ಬ್ಯಾಕ್ ಪ್ರಿಯರನ್ನು ಸೆಳೆಯಲು ಬಂದೆ ಬಿಡ್ತು ದಟ್ಸನ್ ರೆಡಿ-ಗೊ ಲಿಮಿಟೆಡ್ ಎಡಿಷನ್

ಖರೀದಿಗೆ ಲಭ್ಯವಿರುವ ಬಣ್ಣಗಳು

ಸೀಮಿತ ಅವಧಿಗೆ ಮಾತ್ರವೇ ಖರೀದಿ ಲಭ್ಯವಿರುವ ದಟ್ಸನ್ ರೆಡಿ-ಗೊ ಲಿಮಿಟೆಡ್ ಎಡಿಷನ್ ಮಾದರಿಗಳನ್ನು ವೈಟ್, ಸಿಲ್ವರ್ ಮತ್ತು ರೆಡ್ ಬಣ್ಣಗಳಲ್ಲಿ ಆಯ್ಕೆ ಮಾಡಬಹುದಾಗಿದ್ದು, ಕಾರಿನ ಮೇಲಿನ ಗ್ರಾಫಿಕ್ಸ್ ಡಿಸೈನ್ ಹಾಗೂ ರೂಫ್ ವ್ಯಾರ್ಪ್ ಕಾರಿನ ಲುಕ್ ಹೆಚ್ಚಿಸಿದೆ ಎನ್ನಬಹುದು.

ಹ್ಯಾಚ್‌‌ಬ್ಯಾಕ್ ಪ್ರಿಯರನ್ನು ಸೆಳೆಯಲು ಬಂದೆ ಬಿಡ್ತು ದಟ್ಸನ್ ರೆಡಿ-ಗೊ ಲಿಮಿಟೆಡ್ ಎಡಿಷನ್

ಬಣ್ಣ ಮತ್ತು ಗ್ರಾಫಿಕ್ಸ್ ಡಿಸೈನ್ ಹೊರತಾಗಿ ಈ ಹಿಂದೆ ನೀಡಲಾಗುತ್ತಿರುವ ತಾಂತ್ರಿಕ ಅಂಶಗಳೇ ಹೊಸ ಕಾರಿನಲ್ಲೂ ಮುಂದುವರಿಸಲಾಗಿದ್ದು, ಗ್ರಾಹಕರು ತಮ್ಮ ಬೇಡಿಕೆ ಅನುಗುಣವಾಗಿ 1.0-ಲೀಟರ್ ಮತ್ತು 0.8-ಲೀಟರ್ ಪೆಟ್ರೋಲ್ ಎಂಜಿನ್‌ಗಳನ್ನು ಖರೀದಿಸಬಹುದು.

MOST READ: ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಮರಾಜೊ ಹೊಸ ಎಂಪಿವಿ

ಹ್ಯಾಚ್‌‌ಬ್ಯಾಕ್ ಪ್ರಿಯರನ್ನು ಸೆಳೆಯಲು ಬಂದೆ ಬಿಡ್ತು ದಟ್ಸನ್ ರೆಡಿ-ಗೊ ಲಿಮಿಟೆಡ್ ಎಡಿಷನ್

1.0-ಲೀಟರ್ ರೆಡಿ-ಗೊ ಕಾರುಗಳು 999 ಸಿಸಿ ಪೆಟ್ರೋಲ್ ಎಂಜಿನ್‌ನೊಂದಿಗೆ 67-ಬಿಎಚ್‌ಪಿ, 91-ಎನ್ಎಂ ಉತ್ಪಾದನಾ ಗುಣಹೊಂದಿದ್ದು, 0.8-ಲೀಟರ್ ಪೆಟ್ರೋಲ್ ಎಂಜಿನ್‌ಗಳು 53-ಬಿಎಚ್‌ಪಿ, 72-ಎನ್ಎಂ ಉತ್ಪಾದನೆ ಮೂಲಕ ಉತ್ತಮ ಇಂಧನ ದಕ್ಷತೆಯನ್ನು ಹೊಂದಿವೆ.

ಹ್ಯಾಚ್‌‌ಬ್ಯಾಕ್ ಪ್ರಿಯರನ್ನು ಸೆಳೆಯಲು ಬಂದೆ ಬಿಡ್ತು ದಟ್ಸನ್ ರೆಡಿ-ಗೊ ಲಿಮಿಟೆಡ್ ಎಡಿಷನ್

ಹೊಸ ಕಾರುಗಳು ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸೌಲಭ್ಯವನ್ನು ಪಡೆದುಕೊಂಡಿದ್ದು, ದೇಶಾದ್ಯಂತ ನೆಲೆಗೊಂಡಿರುವ ನಿಸ್ಸಾನ್ ಡೀಲರ್ಸ್‌ಗಳಲ್ಲಿ ಹೊಸ ಲಿಮಿಟೆಡ್ ಎಡಿಷನ್ ಕಾರುಗಳು ಈಗಾಗಲೇ ಮಾರಾಟ ಲಭ್ಯವಿವೆ ಎಂದು ದಟ್ಸನ್ ಮಾತೃ ಸಂಸ್ಥೆ ನಿಸ್ಸಾನ್ ಸಂಸ್ಥೆಯು ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಹ್ಯಾಚ್‌‌ಬ್ಯಾಕ್ ಪ್ರಿಯರನ್ನು ಸೆಳೆಯಲು ಬಂದೆ ಬಿಡ್ತು ದಟ್ಸನ್ ರೆಡಿ-ಗೊ ಲಿಮಿಟೆಡ್ ಎಡಿಷನ್

ಈ ಬಗ್ಗೆ ಮಾತನಾಡಿರುವ ನಿಸ್ಸಾನ್ ಇಂಡಿಯಾ ಮಾರುಕಟ್ಟೆ ವಿಭಾಗದ ಅಧ್ಯಕ್ಷ ಪೀಟರ್ ಕ್ಲಿಸ್ಸಾಲ್ಡ್ ಅವರು ಮುಂಬರುವ ಉತ್ಸವ ದಿನಗಳಲ್ಲಿ ಕಾರು ಖರೀದಿದಾರರಿಗೆ ಹೊಸ ಲಿಮಿಟೆಡ್ ಎಡಿಷನ್ ಮಾದರಿಯು ಖರೀದಿಗೆ ಸಹಕಾರಿಯಾಗಿದ್ದು, ಹೊಸ ಕಾರುಗಳಲ್ಲಿ ಒದಗಿಸಲಾಗಿರುವ ಬಣ್ಣದ ಆಯ್ಕೆ ಮತ್ತು ಗ್ರಾಫಿಕ್ಸ್ ಬದಲಾವಣೆಗಳು ಯುವ ಗ್ರಾಹಕರನ್ನು ಹೆಚ್ಚು ಸೆಳೆಯಲಿದೆ ಎಂದಿದ್ದಾರೆ.

ಹ್ಯಾಚ್‌‌ಬ್ಯಾಕ್ ಪ್ರಿಯರನ್ನು ಸೆಳೆಯಲು ಬಂದೆ ಬಿಡ್ತು ದಟ್ಸನ್ ರೆಡಿ-ಗೊ ಲಿಮಿಟೆಡ್ ಎಡಿಷನ್

ಒಟ್ಟಿನಲ್ಲಿ ಸಣ್ಣ ಕಾರುಗಳ ವಿಭಾಗದಲ್ಲಿ ದಟ್ಸನ್ ಸಂಸ್ಥೆಯು ಹೊಸ ಹೊಸ ಪ್ರಯೋಗಗಳ ಮೂಲಕ ಎಂಟ್ರಿ ಕಾರುಗಳ ಖರೀದಿಯಲ್ಲಿ ಮುನ್ನಡೆ ಸಾಧಿಸಲು ಯತ್ನಿಸುತ್ತಿದ್ದು, ಲಿಮಿಟೆಡ್ ಎಡಿಷನ್ ಕಾರುಗಳು ಮಾರುತಿ ಸುಜುಕಿ ಆಲ್ಟೊ ಮತ್ತು ರೆನಾಲ್ಟ್ ಕ್ವಿಡ್ ಕಾರುಗಳಿಗೆ ಪೈಪೋಟಿ ನೀಡಲಿದೆ ಎನ್ನಬಹುದು.

Most Viewed Photos:

ಬಹುನೀರಿಕ್ಷಿತ ಮಹೀಂದ್ರಾ ಮರಾಜೊ ಹೊಸ ಎಂಪಿವಿ ಕಾರು ಬಿಡುಗಡೆ

Most Read Articles

Kannada
English summary
Datsun Redi-GO Limited Edition Launched In India; Priced At Rs 3.58 Lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X