ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋರ್ಡ್ ಫ್ರೀ ಸ್ಟೈಲ್

ಕಳೆದ ಜನವರಿಯಲ್ಲಿ ಹೊಸ ಮಾದರಿಯ ಫ್ರೀ ಸ್ಟೈಲ್ ಕಂಪ್ಯಾಕ್ಟ್ ಯುಟಿಲಿಟಿ ಕಾರು ಮಾದರಿಯನ್ನು ಅನಾವರಣಗೊಳಿಸಿದ್ದ ಫೋರ್ಡ್ ಸಂಸ್ಥೆಯು ಇದೀಗ ಬಿಡುಗಡೆ ಮಾಡುತ್ತಿದ್ದು, ದೆಹಲಿ ಮತ್ತು ಗುರುಗ್ರಾಮ್ ‌ಸುತ್ತಮುತ್ತ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕು

By Praveen Sannamani

ಕಳೆದ ಜನವರಿಯಲ್ಲಿ ಹೊಸ ಮಾದರಿಯ ಫ್ರೀ ಸ್ಟೈಲ್ ಕಂಪ್ಯಾಕ್ಟ್ ಯುಟಿಲಿಟಿ ಕಾರು ಮಾದರಿಯನ್ನು ಅನಾವರಣಗೊಳಿಸಿದ್ದ ಫೋರ್ಡ್ ಸಂಸ್ಥೆಯು ಇದೀಗ ಬಿಡುಗಡೆ ಮಾಡುತ್ತಿದ್ದು, ದೆಹಲಿ ಮತ್ತು ಗುರುಗ್ರಾಮ್ ‌ಸುತ್ತಮುತ್ತ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತು ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋರ್ಡ್ ಫ್ರೀ ಸ್ಟೈಲ್

ಭಾರತೀಯ ಮಾರುಕಟ್ಟೆಗಾಗಿ ಹೊಸ ನಮೂನೆಯ ಕಂಪ್ಯಾಕ್ಟ್ ಯುಟಿಲಿಟಿ ಕಾರು ಮಾದರಿಯೊಂದನ್ನು ಅಭಿವೃದ್ಧಿಗೊಳಿಸಿರುವ ಫೋರ್ಡ್ ಇಂಡಿಯಾ ಸಂಸ್ಥೆಯು, ಫಿಗೊ ಹ್ಯಾಚ್‌ಬ್ಯಾಕ್ ಫ್ಯಾಟ್ ಫಾರ್ಮ್ ಅಡಿಯಲ್ಲಿ ಹೊಸ ಕಾರನ್ನು ಅಭಿವೃದ್ಧಿಗೊಳಿಸುವ ಮೂಲಕ ಹೊಸ ಸಂಚಲಯ ಸೃಷ್ಠಿಸಲು ಸಜ್ಜುಗೊಳ್ಳುತ್ತಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋರ್ಡ್ ಫ್ರೀ ಸ್ಟೈಲ್

ವರ್ಷದ ಆರಂಭದಲ್ಲಿ ಮೂರು ಹೊಸ ಕಾರುಗಳ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದ್ದ ಫೋರ್ಡ್ ಸಂಸ್ಥೆಯು ಇದೀಗ ಕಂಪ್ಯಾಕ್ಟ್ ಯುಟಿಲಿಟಿ ಫ್ರೀ ಸ್ಟೈಲ್ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಇದೇ ವರ್ಷ ಏಪ್ರಿಲ್ ಅಥವಾ ಮೇ ಆರಂಭದಲ್ಲಿ ಹೊಸ ಕಾರು ಬಿಡುಗಡೆ ಮಾಡುವುದು ಖಚಿತವಾಗಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋರ್ಡ್ ಫ್ರೀ ಸ್ಟೈಲ್

ಹೊಸ ಕಾರು ಬಿಡುಗಡೆಗೂ ಮುನ್ನವೇ ಫ್ರೀ ಸ್ಟೈಲ್ ಕಾರು ಮಾದರಿಯ ಬಗ್ಗೆ ಮಹತ್ವದ ಮಾಹಿತಿಗಳನ್ನು ಬಹಿರಂಗಗೊಳಿಸಿರುವ ಫೋರ್ಡ್ ಸಂಸ್ಥೆಯು ಹೊಸ ಕಾರಿನಲ್ಲಿ ಪವರ್ ಫುಲ್ ಎಂಜಿನ್ ಒದಗಿಸಿರುವುದು ಮತ್ತೊಂದು ವಿಶೇಷ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋರ್ಡ್ ಫ್ರೀ ಸ್ಟೈಲ್

ಎಂಜಿನ್ ಸಾಮರ್ಥ್ಯ

1.2-ಲೀಟರ್ 3 ಸಿಲಿಂಡರಿನ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು, 1.2-ಲೀಟರ್ ಮಾದರಿಯಲ್ಲಿ 94.6 ಬಿಎಚ್‌ಪಿ, 120 ಎನ್ಎಂ ಟಾರ್ಕ್ ಹಾಗೂ 1.5-ಲೀಟರ್ ಮಾದರಿಯಲ್ಲಿ 99 ಬಿಎಚ್‌ಪಿ ಮತ್ತು 120 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋರ್ಡ್ ಫ್ರೀ ಸ್ಟೈಲ್

ಬರಲಿರುವ ಎರಡು ಮಾದರಿಗಳಲ್ಲೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದ್ದು, ಫಿಗೊ ಹ್ಯಾಚ್‌ಬ್ಯಾಕ್‌ಗಿಂತಲೂ 15ಎಂಎಂ ನಷ್ಟು ಹೆಚ್ಚುವರಿ ಗ್ರೌಂಡ್ ಕ್ಲಿಯರೆನ್ಸ್(189 ಎಂಎಂ) ಪಡೆದುಕೊಂಡಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋರ್ಡ್ ಫ್ರೀ ಸ್ಟೈಲ್

ಈ ಮೂಲಕ ಸ್ಪೋಟಿ ಲುಕ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು ಹೆಕ್ಸಾಗೊನಲ್ ಹನಿಕೊಂಬೊ ಮಾದರಿಯ ಗ್ರಿಲ್ ಜೋಡಣೆಯು ಹೊಸ ಕಾರಿನ ಹೊರ ನೋಟವನ್ನು ಹೆಚ್ಚಿಸಿದ್ದು, ಹೊಸ ನಮೂನೆಯ ಬ್ಯಾನೆಟ್, ಬಂಪರ್, ಬ್ಲ್ಯಾಕ್ ಕ್ಲ್ಯಾಂಡಿಂಗ್, ಫಾಗ್ ಲ್ಯಾಂಪ್ಸ್ ನೀಡಲಾಗಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋರ್ಡ್ ಫ್ರೀ ಸ್ಟೈಲ್

ಇನ್ನು ಫ್ರೀ ಸ್ಟೈಲ್ ಕಾರುಗಳ ಹೊಸ ವಿನ್ಯಾಸಗಳ ಬಗ್ಗೆ ಮಾತನಾಡುವುದಾದರೇ 6.5 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿರುವ ಹೊಸ ಕಾರುಗಳು ವಿನೂತನ ಡ್ಯಾಶ್ ಬೋರ್ಡ್, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಫೋರ್ಡ್ ಸಿಂಕ್ 3 ಇನ್ಪೋಟೈನ್‌ಮೆಂಟ್ ಸೆಟ್ ಅಪ್ ಹೊಂದಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋರ್ಡ್ ಫ್ರೀ ಸ್ಟೈಲ್

ಬಿಡುಗಡೆಯ ದಿನಾಂಕ ಮತ್ತು ಬೆಲೆ

ಫ್ರೀಸ್ಟೈಲ್ ಕಾರನ್ನು ಇದೇ ವರ್ಷ ಏಪ್ರಿಲ್ ಅಥವಾ ಮೇ ಪ್ರಾರಂಭದಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿದ್ದು, ಹೊಸ ಕಾರಿನ ಬೆಲೆಗಳು ರೂ. 6 ಲಕ್ಷದಿಂದ 8..50 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

01. ಭಾರತದಲ್ಲಿ 7 ಸೀಟರ್ ವ್ಯಾಗನ್ ಆರ್ ಬಿಡುಗಡೆಯಾಗುವುದು ಪಕ್ಕಾ ಅಂತೆ..!!

02. 30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

03. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

04. ಬಿಡುಗಡೆಯಾದ ಹೋಂಡಾ ಆಕ್ಟಿವಾ 5ಜಿ ಬಗ್ಗೆ ನಿಮಗೆಷ್ಟು ಗೊತ್ತು.?

05. ಏಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೊಸ ರೂಲ್ಸ್..!!

Most Read Articles

Kannada
Read more on ford ಫೋರ್ಡ್
English summary
Ford Freestyle Spotted Ahead Of Launch — Expected Price, Specs, Features And More Details.
Story first published: Wednesday, March 28, 2018, 14:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X