ಹೀರೋ 'ಗೇಮ್‌ ಚೇಂಜರ್‌' ಎಕ್ಸ್ಎಫ್3ಆರ್ ಬೈಕಿನ ವಿಶೇಷತೆ ಏನು?

ಹೀರೋ ನಿರ್ಮಾಣದ ಪ್ರಮುಖ ಮೂರು ಬೈಕ್‌ಗಳು ಪ್ರದರ್ಶನಕ್ಕೆ ಸಜ್ಜುಗೊಳ್ಳುತ್ತಿದ್ದು, ಈ ಮಧ್ಯೆ 300ಸಿಸಿ ಸಾಮಾರ್ಥ್ಯದ ಮತ್ತೊಂದು ವಿನೂತನ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸುವ ಬಗ್ಗೆ ಆಟೋ ಕಾರ್ ಸುದ್ಧಿಸಂಸ್ಥೆ ವರದಿ ಮಾಡಿದೆ.

By Praveen

Recommended Video

Andhra Pradesh State Transport Bus Crashes Into Bike Showroom - DriveSpark

ಮುಂಬರುವ ಫೆಬ್ರುವರಿ 7ರಿಂದ ದೆಹಲಿಯಲ್ಲಿ ಆರಂಭಗೊಳ್ಳಲಿರುವ 2018ರ ಆಟೋ ಎಕ್ಸ್‌ಪೋದಲ್ಲಿ ಹೀರೋ ನಿರ್ಮಾಣದ ಪ್ರಮುಖ ಮೂರು ಬೈಕ್‌ಗಳು ಪ್ರದರ್ಶನಕ್ಕೆ ಸಜ್ಜುಗೊಳ್ಳುತ್ತಿದ್ದು, ಈ ಮಧ್ಯೆ 300ಸಿಸಿ ಸಾಮಾರ್ಥ್ಯದ ಮತ್ತೊಂದು ವಿನೂತನ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸುವ ಬಗ್ಗೆ ಆಟೋ ಕಾರ್ ಸುದ್ಧಿಸಂಸ್ಥೆ ವರದಿ ಮಾಡಿದೆ.

ಹೀರೋ 'ಗೇಮ್‌ ಚೇಂಜರ್‌' ಎಕ್ಸ್ಎಫ್3ಆರ್ ಬೈಕಿನ ವಿಶೇಷತೆ ಏನು?

ಈ ಹಿಂದೆ 200ಸಿಸಿ ಸಾಮರ್ಥ್ಯದ ಎಕ್ಸ್‌ಟ್ರಿಮ್ 200ಎಸ್ ಹೊಸ ಬೈಕ್ ಮಾದರಿ ಬಗ್ಗೆ ಮಾಹಿತಿ ನೀಡಿದ್ದ ಹಿರೋ ಮೋಟೋಕಾರ್ಪ್‌ ಸಂಸ್ಥೆಯು ಇದೇ ತಿಂಗಳು 30ರಂದು ಎಕ್ಸ್‌ಟ್ರಿಮ್ 200ಎಸ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಈ ನಡುವೆ 300ಸಿಸಿ ಸಾಮಾರ್ಥ್ಯದ ಎಕ್ಸ್ಎಫ್3ಆರ್ ಬೈಕ್ ಮಾದರಿಯೊಂದನ್ನು ಅಭಿವೃದ್ಧಿ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಹೀರೋ 'ಗೇಮ್‌ ಚೇಂಜರ್‌' ಎಕ್ಸ್ಎಫ್3ಆರ್ ಬೈಕಿನ ವಿಶೇಷತೆ ಏನು?

ಹೀರೋ ಸಂಸ್ಥೆಯು 300ಸಿಸಿ ಸಾಮರ್ಥ್ಯದ ಬೈಕ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲವಾದರೂ ಎಕ್ಸ್ಎಫ್3ಆರ್ ಸಂಕೇತ ನಾಮದೊಂದಿದೆ ಹೊಸ ಬೈಕ್ ಮಾದರಿಯನ್ನು ಅಭಿವೃದ್ಧಿಗೊಳಿಸಿ ಬಿಡುಗಡೆ ಮಾಡುತ್ತಿರುವ ಬಗ್ಗೆ ಆಟೋ ಕಾರ್ ಸುದ್ದಿಸಂಸ್ಥೆಯು ಮಾಹಿತಿ ಬಹಿರಂಗಪಡಿಸಿದೆ.

ಹೀರೋ 'ಗೇಮ್‌ ಚೇಂಜರ್‌' ಎಕ್ಸ್ಎಫ್3ಆರ್ ಬೈಕಿನ ವಿಶೇಷತೆ ಏನು?

ಹೀಗಾಗಿ 2018ರ ಸಾಲಿನಲ್ಲಿ ಹೀರೋ ಮೋಟೋಕಾರ್ಪ್ ಸಂಸ್ಥೆಯು ಬಿಡುಗಡೆ ಮಾಡಲಿರುವ ಬೈಕ್‌ಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಲಿದ್ದು, ಎಕ್ಸ್‌ಟ್ರಿಮ್ 200 ಎಸ್, ಎಕ್ಸ್‌ಪಲ್ಸ್ ಅಡ್ವೆಂಚರ್, 125ಸಿಸಿ ಸ್ಕೂಟರ್ ಜೊತೆಗೆ ಎಕ್ಸ್‌ಎಫ್3ಆರ್ ಕೂಡಾ ಮಾರುಕಟ್ಟೆ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಿದೆ.

ಹೀರೋ 'ಗೇಮ್‌ ಚೇಂಜರ್‌' ಎಕ್ಸ್ಎಫ್3ಆರ್ ಬೈಕಿನ ವಿಶೇಷತೆ ಏನು?

ಎಂಜಿನ್ ವೈಶಿಷ್ಟ್ಯತೆ

ಸುಧಾರಿತ ತಂತ್ರಜ್ಞಾನ ಪ್ರೇರಿತ 300ಸಿಸಿ ಫ್ಯೂಲ್ ಇಂಜೆಕ್ಷನ್ ಸಿಂಗಲ್ ಸಿಲಿಂಡರ್ ಅಥವಾ 300 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಹೊಂದಿರಲಿರುವ ಎಕ್ಸ್ಎಫ್3ಆರ್ ಬೈಕ್‌ಗಳು 6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರಲಿವೆ.

Trending On DriveSpark Kannada:

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಬಿಡುಗಡೆಗೆ ಸಜ್ಜುಗೊಂಡ ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300

ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ಹೀರೋ 'ಗೇಮ್‌ ಚೇಂಜರ್‌' ಎಕ್ಸ್ಎಫ್3ಆರ್ ಬೈಕಿನ ವಿಶೇಷತೆ ಏನು?

ಆದರೇ ಹೊಸ ಬೈಕ್ ಎಷ್ಟು ಪ್ರಮಾಣದ ಬಿಎಚ್‌ಪಿ ಮತ್ತು ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ ಎಂಬ ಮಾಹಿತಿ ಲಭ್ಯವಾಗಿಲ್ಲವಾದರೂ ಮೂಲಗಳ ಪ್ರಕಾರ ಹೀರೋ ನಿರ್ಮಾಣದ ಎಕ್ಸ್ಎಫ್3ಆರ್ ಮಾದರಿಯು ಬೆಸ್ಟ್ ಫರ್ಫಾಮೆನ್ಸ್ ಬೈಕ್ ಎಂಬ ಖ್ಯಾತಿ ಗಳಿಸುವ ತವಕದಲ್ಲಿದೆ.

ಹೀರೋ 'ಗೇಮ್‌ ಚೇಂಜರ್‌' ಎಕ್ಸ್ಎಫ್3ಆರ್ ಬೈಕಿನ ವಿಶೇಷತೆ ಏನು?

ಇದಕ್ಕೆ ಕಾರಣ, ಎಕ್ಸ್ಎಫ್3ಆರ್ ಬೈಕಿನ ಹೊರ ವಿನ್ಯಾಸಗಳು, ಎಕ್ಸಾಸ್ಟ್ ಡಿಸೈನ್, ಮಸ್ಕುಲರ್ ಫ್ಯೂಲ್ ಟ್ಯಾಂಕ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸಿಂಗಲ್ ಪೀಸ್ ಹ್ಯಾಂಡಲ್‌ಬಾರ್, ಎಬಿಎಸ್, ಸಿಂಗಲ್ ಸೈಡ್ ಸ್ವಿಂಗ್ ವಾರ್ಮ್ ಪಡೆದಿರುವುದು ಸೂಪರ್ ಬೈಕ್‌ಗಳಿಗೆ ತೀವ್ರ ಸ್ಪರ್ಧಿಯಾಗಲಿದೆ.

ಹೀರೋ 'ಗೇಮ್‌ ಚೇಂಜರ್‌' ಎಕ್ಸ್ಎಫ್3ಆರ್ ಬೈಕಿನ ವಿಶೇಷತೆ ಏನು?

ಬಿಡುಗಡೆಯ ವಿವರ ಮತ್ತು ಬೆಲೆ

ಫೆ.7ರಿಂದ ಆರಂಭವಾಗಲಿರುವ 2018ರ ಆಟೋ ಎಕ್ಸ್‌ಪೋದಲ್ಲಿ ಹೊಸ ಬೈಕ್ ಬಿಡುಗಡೆಯ ಸಂಪೂರ್ಣ ಮಾಹಿತಿ ಲಭ್ಯವಾಗಲಿದ್ದು, ಬೈಕ್ ಬೆಲೆಯು 1.25 ಲಕ್ಷದಿಂದ 1.35 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಹೀರೋ 'ಗೇಮ್‌ ಚೇಂಜರ್‌' ಎಕ್ಸ್ಎಫ್3ಆರ್ ಬೈಕಿನ ವಿಶೇಷತೆ ಏನು?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹಲವು ಕಾರಣಗಳಿಗೆ ಸೂಪರ್ ಬೈಕ್‌ಗಳ ಸಾಲಿನಲ್ಲಿ ವಿಶೇಷ ಮಾದರಿಯಾಗಲಿರುವ ಎಕ್ಸ್ಎಫ್3ಆರ್ ಸುಧಾರಿತ ತಂತ್ರಜ್ಞಾನಗಳೊಂದಿಗೆ ಮಾರುಕಟ್ಟೆ ಪ್ರವೇಶ ಖಚಿತವಾಗಿದ್ದು, ಮುಂಬರುವ ದಿನಗಳಲ್ಲಿ ಗೇಮ್ ಚೇಂಜರ್ ಸೂಪರ್ ಬೈಕ್ ಎಂಬ ಹೆಗ್ಗಳಿಕೆಯೊಂದಿಗೆ ಡೋಮಿನಾರ್ 400 ಬೈಕ್‌ಗಳಿಗೆ ನೇರ ಸ್ಪರ್ಧೆ ಒಡ್ಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Trending On DriveSpark Kannada:

ಕಾರಿಗೆ ಅಡ್ಡ ಬಂದ ಬಾಲಕಿ- ದುರಂತ ತಪ್ಪಿಸಲು ಹೋದ ನಿಸ್ಸಾನ್ ಜಿಟಿ ಆರ್ ಸೂಪರ್ ಕಾರು ಪೀಸ್ ಪೀಸ್

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಥರ್ಡ್ ಪಾರ್ಟಿ ಇನ್ಸುರೆನ್ಸ್ ಇಲ್ಲದ ವಾಹನ ಮಾಲೀಕರೇ ಇತ್ತ ಗಮನಹರಿಸಿ...

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
Read more on hero motocorp super bike
English summary
Hero MotoCorp’s New 300cc Motorcycle In The Works.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X