ಹೆದ್ದಾರಿಗಳಲ್ಲಿ ಇನ್ಮುಂದೆ 100 ಕಿಮಿ ಸ್ಪೀಡ್‌ನಲ್ಲಿ ಹೋಗಬಹುದಂತೆ....

ಹೆದ್ದಾರಿಗಳಲ್ಲಿ ವಾಹನಗಳ ವೇಗದ ಮಿತಿ ಹೆಚ್ಚಿಸುವ ಮಹತ್ವದ ಪ್ರಸ್ತಾವನೆಗೆ ಕೇಂದ್ರ ಸರ್ಕಾರವು ಒಪ್ಪಿಗೆ ಸೂಚಿಸಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರುಗಳಿಗೆ ಗಂಟೆಗೆ 100 ಕಿ.ಮೀ ಮತ್ತು ಎಕ್ಸ್‌ಪ್ರೆಸ್ ವೇಗಳಲ್ಲಿ ಗಂಟೆಗೆ 120ಕಿಮಿ ವೇಗದ ಮೀತ

By Praveen Sannamani

ಹೆದ್ದಾರಿಗಳಲ್ಲಿ ವಾಹನಗಳ ವೇಗದ ಮಿತಿ ಹೆಚ್ಚಿಸುವ ಮಹತ್ವದ ಪ್ರಸ್ತಾವನೆಗೆ ಕೇಂದ್ರ ಸರ್ಕಾರವು ಒಪ್ಪಿಗೆ ಸೂಚಿಸಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರುಗಳಿಗೆ ಗಂಟೆಗೆ 100 ಕಿ.ಮೀ ಮತ್ತು ಎಕ್ಸ್‌ಪ್ರೆಸ್ ವೇಗಳಲ್ಲಿ ಗಂಟೆಗೆ 120ಕಿಮಿ ವೇಗದ ಮೀತಿ ಜಾರಿ ಮಾಡಲು ಮುಂದಾಗಿದೆ.

ಹೆದ್ದಾರಿಗಳಲ್ಲಿ ಇನ್ಮುಂದೆ 100 ಕಿ.ಮೀ ಸ್ಪೀಡ್‌ನಲ್ಲಿ ಹೋಗಬಹುದಂತೆ....

ಇನ್ನು ಹೊಸ ನಿಯಮದ ಪ್ರಕಾರ ನಗರದೊಳಗಿನ ಕಾರುಗಳಿಗೆ ಗಂಟೆಗೆ 70 ಕಿ.ಮೀ. ವೇಗ ಮತ್ತು ಬೈಕ್‌ಗಳಿಗೆ 60 ಕಿ.ಮೀ. ವೇಗದ ಮಿತಿಯನ್ನು ನಿಗದಿ ಪಡಿಸಲಾಗುತ್ತಿದ್ದು, ಇದೀಗ ಅಧಿಸೂಚನೆ ಹೊರಡಿಸಲು ಹೊಸ ಪ್ರಸ್ತಾವನೆಯನ್ನು ಕಾನೂನು ಸಚಿವಾಲಯಕ್ಕೆ ವರ್ಗಾಯಿಸಿದೆ.

ಹೆದ್ದಾರಿಗಳಲ್ಲಿ ಇನ್ಮುಂದೆ 100 ಕಿಮಿ ಸ್ಪೀಡ್‌ನಲ್ಲಿ ಹೋಗಬಹುದಂತೆ....

ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಮಂತ್ರಿ ನಿತಿನ್ ಗಡ್ಕರಿ ಅವರು ಬುಧವಾರದಂದು ನಗರದ ರಸ್ತೆಗಳು ಮಾತ್ರವಲ್ಲದೇ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್ ಪ್ರೆಸ್ ವೇಗಳಲ್ಲಿನ ಪರಿಷ್ಕೃತ ವೇಗದ ಮಿತಿಯನ್ನು ಹೆಚ್ಚಿಸಲು ಸಮ್ಮತ ಸೂಚಿಸಿದ್ದಾರೆ.

ಹೆದ್ದಾರಿಗಳಲ್ಲಿ ಇನ್ಮುಂದೆ 100 ಕಿಮಿ ಸ್ಪೀಡ್‌ನಲ್ಲಿ ಹೋಗಬಹುದಂತೆ....

ಹೀಗಾಗಿ ಇದು ಪ್ರಾಯೋಗಿಕವಾಗಿ ಸ್ಥಳೀಯ ಆಡಳಿತ ವ್ಯಾಪ್ತಿಗಳಲ್ಲಿ ಬರುವ ರಸ್ತೆಗಳಲ್ಲಿ ಪರಿಷ್ಕೃತ ವೇಗ ಜಾರಿಯಾಗಲಿದೆ ಎನ್ನಲಾಗಿದ್ದು, ಇದಕ್ಕೂ ಮುನ್ನ ಆಯಾ ರಾಜ್ಯ ಸರ್ಕಾರಗಳು ಸಹ ಒಪ್ಪಿಗೆ ಸೂಚಿಸುವ ಅವಶ್ಯಕತೆ ಕೂಡಾ ಇದೆ.

ಹೆದ್ದಾರಿಗಳಲ್ಲಿ ಇನ್ಮುಂದೆ 100 ಕಿಮಿ ಸ್ಪೀಡ್‌ನಲ್ಲಿ ಹೋಗಬಹುದಂತೆ....

ಕೇವಲ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್ ವೇಗಳಲ್ಲಿನ ವೇಗದ ಮೀತಿಯನ್ನು ಮಾತ್ರ ಹೆಚ್ಚಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದ್ದು, ಸ್ಥಳೀಯವಾಗಿ ಸಂಪರ್ಕ ಸಾಧಿಸುವ ರಾಜ್ಯ ಹೆದ್ದಾರಿಗಳು ಮತ್ತು ಜಿಲ್ಲಾ ಹೆದ್ದಾರಿಗಳಲ್ಲಿನ ವೇಗದ ಮೀತಿಯನ್ನು ಆಯಾ ರಾಜ್ಯ ಸರ್ಕಾರಗಳೇ ಅಂತಿಮಗೊಳಿಸಲಿವೆ.

ಹೆದ್ದಾರಿಗಳಲ್ಲಿ ಇನ್ಮುಂದೆ 100 ಕಿಮಿ ಸ್ಪೀಡ್‌ನಲ್ಲಿ ಹೋಗಬಹುದಂತೆ....

ಇದಲ್ಲದೇ ವಾಣಿಜ್ಯ ವಾಹನಗಳ ಮಿತಿಯನ್ನು ರಾ.ಹೆದ್ದಾರಿಗಳಲ್ಲಿ ಪ್ರತಿ ಗಂಟೆಗೆ 100 ಕಿ.ಮೀ ಮತ್ತು ನಗರಗಳ ವ್ಯಾಪ್ತಿಯಲ್ಲಿ ಗಂಟೆಗೆ 60 ಕಿ.ಮೀ ಗೆ ಹೆಚ್ಚಿಸಲಾಗಿದ್ದು, ರಾ.ಹೆದ್ದಾರಿಗಳಲ್ಲಿ ಮೋಟಾರ್ ಸೈಕಲ್‌ಗಳ ಮಿತಿಯನ್ನು ಗಂಟೆಗೆ 80 ಕಿ.ಮೀ ಗೆ ಹೆಚ್ಚಿಸಿದೆ.

ಹೆದ್ದಾರಿಗಳಲ್ಲಿ ಇನ್ಮುಂದೆ 100 ಕಿಮಿ ಸ್ಪೀಡ್‌ನಲ್ಲಿ ಹೋಗಬಹುದಂತೆ....

ಅಪಘಾತಗಳ ಸಂಖ್ಯೆ ದ್ವಿಗುಣವಾಗುತ್ತಾ?

ಹೌದು, ಹೊಸ ಯೋಜನೆಯಿಂದಾಗಿ ವಾಹನಗಳ ಇಂಧನ ದಕ್ಷತೆ ಮತ್ತು ಪ್ರಯಾಣದ ಅವಧಿ ತಗ್ಗುವ ಮೂಲಕ ಆದಾಯದಲ್ಲಿ ಏರಿಕೆಯಾಗುತ್ತೆ ಎಂಬ ಉದ್ದೇಶವಿದ್ದರೂ ವಾಹನಗಳ ವೇಗದಿಂದ ಭಾರತೀಯ ರಸ್ತೆಗಳಲ್ಲಿ ಏರಿಕೆಯಾಗುವ ಅಪಘಾತಗಳ ಸಂಖ್ಯೆ ಬಗ್ಗೆಯೂ ಎಚ್ಚರಿಕೆ ವಹಿಸುವಬೇಕಾದ ಅವಶ್ಯಕತೆಯಿದೆ.

ಹೆದ್ದಾರಿಗಳಲ್ಲಿ ಇನ್ಮುಂದೆ 100 ಕಿಮಿ ಸ್ಪೀಡ್‌ನಲ್ಲಿ ಹೋಗಬಹುದಂತೆ....

ವರದಿಗಳ ಪ್ರಕಾರ ಸದ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲೇ ಪ್ರತಿ ವರ್ಷ 1.50 ಲಕ್ಷಕ್ಕಿಂತ ಹೆಚ್ಚು ಜನ ದುರ್ಮರಣಕ್ಕಿಡಾಗುತ್ತಿದ್ದು, ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಾಹನಗಳ ಮಿತಿ ನಿರ್ಧರಿಸುವುದು ಕೇಂದ್ರದ ಮುಂದಿರುವ ಸವಾಲು.

ಹೆದ್ದಾರಿಗಳಲ್ಲಿ ಇನ್ಮುಂದೆ 100 ಕಿಮಿ ಸ್ಪೀಡ್‌ನಲ್ಲಿ ಹೋಗಬಹುದಂತೆ....

ಈ ಮಧ್ಯೆ ಕೇಂದ್ರ ಸರ್ಕಾರವು ಮುಂದಿನ 5 ವರ್ಷಗಳ ಅವಧಿಯಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಬಲ್ಲ 1 ಸಾವಿರ ಕಿ.ಮೀ ಎಕ್ಸ್‌ಪ್ರೆಸ್ ವೇ ನಿರ್ಮಾಣ ಮಾಡಲು ಮುಂದಾಗಿದ್ದು, ಈ ರಸ್ತೆಗಳಲ್ಲಿ ಸುರಕ್ಷಾ ಮಾನದಂಡಗಳೊಂದಿಗೆ ಕಾರುಗಳು ಗಂಟೆಗೆ 130 ರಿಂದ 140 ಕಿಮಿ ವೇಗದಲ್ಲಿ ಚಾಲನೆ ಮಾಡಬಹುದಾದ ವ್ಯವಸ್ಥೆಯಿರುತ್ತದೆ.

ಹೆದ್ದಾರಿಗಳಲ್ಲಿ ಇನ್ಮುಂದೆ 100 ಕಿಮಿ ಸ್ಪೀಡ್‌ನಲ್ಲಿ ಹೋಗಬಹುದಂತೆ....

ಒಟ್ಟಿನಲ್ಲಿ ವಾಹನ ವೇಗದ ಮಿತಿಯನ್ನು ಹೆಚ್ಚಿಸುತ್ತಿರುವುದು ಗಮನಾರ್ಹ ಸಂಗತಿಯಾಗಿದ್ದರೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಇಂತಹ ಯೋಜನೆಗಳನ್ನು ಜಾರಿಗೆ ತಂದಲ್ಲಿ ಅಭಿವೃದ್ಧಿಗಿಂತ ಅನಾಹುತಗಳೇ ಹೆಚ್ಚು ಎನ್ನಬಹುದು.

Most Read Articles

Kannada
English summary
Highway Speed Limits To Be Increased To 100km/h Soon.
Story first published: Friday, March 16, 2018, 10:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X